ಸಹಕಾರಿ ಸಂಘದ ಅಧ್ಯಕ್ಷರಿಂದ ಹಿಡಿದು ಸದಸ್ಯರೆಲ್ಲರೂ ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು : ಸಚಿವ ಮಂಕಾಳು ವೈದ್ಯ
ಭಟ್ಕಳ : ತಾಲೂಕಿನ ಬೆಳ್ಕೆಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದಸಭೆಯಲ್ಲಿ ಸಚಿವ ಮಂಕಾಳು ವೈದ್ಯರು ಪಾಲ್ಗೊಂಡು ಸಂಸ್ಥೆಯ ಅಭಿವೃದ್ದಿ ಕಾರ್ಯದ ಬಗ್ಗೆ ಗಮನಹರಿಸಿದರು ಈ ಸಂದರ್ಬದಲ್ಲಿ ಸಹಕಾರಿ ಸಂಘದ ವತಿಯಿಂದ ಸಚಿವ ಮಂಕಾಳು ವೈದ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು
ಸಚಿವ ಮಂಕಾಳು ವೈದ್ಯರು ಬುದುವಾರವಾದ ಇಂದು ನಡೆದ ಈ ಸಹಕಾರಿ ಸಂಘದ ಸಭೆಯಲ್ಲಿ ಭಾಗವಹಿಸಿ ಸಂಸ್ಥೆಯ ಆಗುಹೋಗುಗಳ ಬಗ್ಗೆ ಗಮನಹರಿಸಿದರು ಈ ಸಂದರ್ಬದಲ್ಲಿ ಅವರು ಮಾಧ್ಯಮದೊಂದಿಗೆ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಈ ಸಹಕಾರಿ ಸಂಘಗಳು ಮಹತ್ವದ ಪ್ರಾತ್ರವನ್ನು ವಹಿಸುತ್ತದೆ ಇಂತಹ ಸಹಕಾರಿ ಸಂಘದ ಅಧ್ಯಕ್ಷರಿಂದ ಹಿಡಿದು ಸದಸ್ಯರೆಲ್ಲರೂ ಜವಬ್ದಾರಿಯಿಂದ ಕರ್ತವ್ಯನಿರ್ವಹಿಸಬೇಕು ಸಂಸ್ಥೆಯ ಹಾಗು ತನ್ನ ಗ್ರಾಹಕರ ಹಿತವನ್ನು ಕಾಯ್ದುಕೊಳ್ಳಬೇಕು ನಮ್ಮ ಬೇಳ್ಕೆ ಸಹಕಾರಿ ಸಂಘ ಹಿಂದಿನಿಂದಲೂ ಅಬಿವೃದ್ದಿಯ ಪತದತ್ತ ಸಾಗುತ್ತಲೆ ಬಂದಿದೆ ಅದನ್ನು ಉಳಿಸಿಕೊಂಡು ಹೊಗಬೇಕಾಗಿರುವುದು ಮುಖ್ಯವಾಗಿರುತ್ತದೆ ಎಂದು ಹೇಳಿದರು
ಮುಖ್ಯವಾಗಿ ಈ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ಸ್ವಂತ ಜಾಗವನ್ನು ಹೊಂದಿಲ್ಲವಾಗಿತ್ತು ಈ ಸಹಕಾರಿ ಸಂಘಕ್ಕೆ ಜಾಗ ಮಂಜುರುಮಾಡಿಸಿರು ಕಿರ್ತಿ ಸಚಿವ ಮಂಕಾಳು ವೈದ್ಯರಿಗೆ ಸಲ್ಲುತ್ತದೆ ಸಚಿವ ಮಂಕಾಳು ವೈದ್ಯರು ಹಿಂದೆ ಶಾಸಕರಿರುವ ಸಂದರ್ಬದಲ್ಲಿ ಈ ಸಹಕಾರಿ ಸಂಘಕ್ಕೆ ಜಾಗ ಮಂಜೂರು ಮಾಡಿಸಿರುವುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ . ಇಂದು ಬೆಳ್ಕೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ಒಂದು ಸುಸಜ್ಜಿತ ಕಟ್ಟಡ ಹೊಂದಿದೆ ಎಂದರೆ ಅದಕ್ಕೆ ಸಚಿವ ಮಂಕಾಳು ವೈದ್ಯರ ಪರಿಶ್ರಮವೆ ಕಾರಣ ಎನ್ನುವುದು ಸ್ಥಳಿಯ ಸಾರ್ವಜನಿಕರ ಮಾತಾಗಿದೆ.