ವೃತ್ತಿಯಲ್ಲಿ ಉದ್ಯಮಿಯಾಗಿದ್ದರೂ ಪ್ರವೃತ್ತಿಯಲ್ಲಿ ಖ್ಯಾತ ರಂಗಭೂಮಿ ಕಲಾವಿದರಾಗಿದ್ದರು. ಎಲ್ಲರೂ ಪ್ರೀತಿಯಿಂದ ಕರೆಯುವ ದಾಮು (ದಾಮಣ್ಣ )ನಿಗೆ ಭಟ್ಕಳ ತಾಲೂಕಿನ ಶ್ರೀಗುರು ರಂಗಭೂಮಿ ಜನಪದ ಹಾಗು *ಸಾಂಸ್ಕೃತಿಕ ಕಲಾ ಸಂಘದಿಂದ *ಮಾರ್ಚ್ 27 ರ ವಿಶ್ವ ರಂಗಭೂಮಿ ದಿನಾಚರಣೆಯ ದಿನದಂದು* ಅವರ ಮನೆಯಂಗಳಲ್ಲಿ ಪ್ರೀತಿಯಿಂದ ಗೌರವಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.
ಆಡು ಮುಟ್ಟದ ಸೊಪ್ಪಿಲ್ಲ ಮಾಡದ ಡಿ. ಕೆ. ಮೊಗೇರ ನಾಟಕವೇ ಇಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಪ್ರತಿ ವರ್ಷ ಸಂಕ್ರಾಂತಿಯ ಮಾರನೆಯ ದಿನ ಶೇಡಬರಿ ಜಾತ್ರೆಯ ಪ್ರಯುಕ್ತ ತೆಂಗಿನಗುಂಡಿ ಆಕ್ಸನ್ ಹಾಲ್ ನಲ್ಲಿ ನಾಟಕ ನಡೆಯುತ್ತಿತ್ತು. ದಾಮಣ್ಣನ ನಾಟಕ ನೋಡಲೆಂದೇ ಜನ ಕಿಕ್ಕಿರಿದು ಸೇರುತ್ತಿದ್ದರು. ನಾಟಕದಲ್ಲಿ ಮಾಡುವ ಖಳನಾಯಕ ಪಾತ್ರ ಇಂದಿಗೂ ಜನಮಾನಸದ ಚಿತ್ರದಲ್ಲಿ *ಅಳಿಸಲಾಗದ ಚಿತ್ತಾರದಂತಿದೆ ಮತ್ತು ನಮ್ಮೆಲ್ಲರ ಭಾವಕೋಶದಲ್ಲಿ ರಂಗ ಕಲೆ ಆವರಿಸಿಕೊಂಡಿದೆ.
ನಮ್ಮೆಲ್ಲ ಕಲಾವಿದರಿಗೆ ಜೀವ ದ್ರವ್ಯದಂತಿದ್ದು ಸ್ಪೂರ್ತಿಯ ಸೆಲೆಯಾಗಿರುವ ಮತ್ತು ನೆಲೆಯಾಗಿರುವ *ದಾಮಣ್ಣ ಇಂದಿಗೂ ಕಲಾವಿದರಿಗೆ ಮಹಾ ಪೋಷಕರಾಗುತ್ತಿದ್ದಾರೆ.
ಭಟ್ಕಳದ ಶ್ರೀ ರಾಘವೇಂದ್ರ ಕಲಾಮಿತ್ರ ಮಂಡಳಿಯ ಸಂಸ್ಥಾಪಕರಾಗಿ* ಧನಿಕರಿಲ್ಲದ ಕನಿಕರು, *ಕೆಟ್ಟಮೇಲೆ ಬುದ್ಧಿ ಬಂತು * ಹುಂಬ ಮೆಚ್ಚಿದ ಹುಡುಗಿ,*
ಈಗ ಹೆಂಗಾತು,*
ಪುಡಾರಿ ನಿಂಗಪ್ಪ*
ಸತಿ ಸಂಸಾರದ ಜ್ಯೋತಿ
ಹೀಗೆ ಹೇಳುತ್ತಾ ಹೋದರೆ 60ಕ್ಕೂ ಹೆಚ್ಚು ಸಾಮಾಜಿಕ ನಾಟಕಗಳಿಗೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ ಮತ್ತು ಕಲಾಭಿಮಾನಿಗಳ ಮನಗೆದ್ದು ಈ ನೆಲದ ಸಂಸ್ಕೃತಿ, ಪರಂಪರೆ ಹಾಗೂ ಐತಿಹಾಸಿಕ ಘಟನೆಗಳನ್ನು ದೃಶ್ಯ ಮಾಧ್ಯಮದ ಮೂಲಕ ಸಾರಿ ಹೇಳಿದ್ದಾರೆ. ಇಂತಹ ಅದ್ಭುತ ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಸೌಭಾಗ್ಯ ನಮ್ಮೆಲ್ಲರ ಪಾಲಿಗೆ.
ರಂಗಭೂಮಿ ಕ್ಷೇತ್ರದಲ್ಲಷ್ಟೇ ಅಲ್ಲ ಸಾಮಾಜಿಕ ಕ್ಷೇತ್ರದಲ್ಲಿಯೂ ಸೈ ಎನಿಸಿಕೊಂಡವರು.ಪ್ರಸ್ತುತ ಹೆಬಳೆ ಗ್ರಾಮಪಂಚಾಯತ ಸದಸ್ಯರಾಗಿ ಹಾಗೂ ಹಲವಾರು ಸಹಕಾರಿ ಬ್ಯಾಂಕಿನ ಕ್ಷೇತ್ರದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಂಗಭೂಮಿ ಕ್ಷೇತ್ರದಿಂದ ನಿವೃತ್ತರಾದರೂ ಇಂದಿಗೂ ರಂಗಭೂಮಿ ಕ್ಷೇತ್ರಕ್ಕೆ ಸಹಾಯ ಸಹಕಾರ ನೀಡುತ್ತಾ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇವರಿಗೆ ಕೆಲವು ದಿನದ ಹಿಂದೆ ಅನಾರೋಗ್ಯ ಕಾಡಿದರೂ ಭಗವಂತನ ಕೃಪೆ ಹಾಗೂ ಆಶೀವಾ೯ದದಿಂದ ಚೇತರಿಸಿಕೊಳ್ಳುತ್ತಿದ್ದಾರೆ . ಈ ದಿನ ನಮ್ಮೆಲ್ಲರ ಜೊತೆ ಕುಶಲೋಪಚಾರಿ ಮಾತನಾಡಿ ಪ್ರೀತಿಯಿಂದ ಬೆರೆತು ದಾಮಣ್ಣನ ಜೊತೆ ಒಂದು ನಾಟಕ ಮಾಡಿದ ಅನುಭವವೇ ಆಯಿತು. ರಂಗಭೂಮಿಗೆ ನೀಡಿದ ನಿಮ್ಮ ಸೇವೆ ಅನನ್ಯ, ಅನುಕರಣೇಯ, ಶ್ಲಾಘನೀಯ.
ನಾರಾಯಣ ನಾಯ್ಕ ಶಿಕ್ಷಕರು* *ರಂಗಭೂಮಿ ಕಲಾವಿದರು