ಜಿಲ್ಲಾ ಆಡಳಿತದಿಂದ ಆಶಾಕಿರಣ ಯೋಜನೆ ಅಡಿ ಕನ್ನಡಕ ವಿತರಣಾ ಕಾರ್ಯಕ್ರಮ

ಕಾರ್ಯಕ್ರಮ ಉದ್ಘಾಟಿಸಿದರ ಸಚಿವ ಮಾಂಕಾಳು ವೈದ್ಯರು

ಕಾರವಾರ, ಉತ್ತರ ಕನ್ನಡ:
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿಗಳ ಕಛೇರಿ, ಉತ್ತರ ಕನ್ನಡ ಜಿಲ್ಲೆ, ಕಾರವಾರ, ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಭಟ್ಕಳ ತಾಲೂಕಾ ಆಸ್ಪತ್ರೆಯ ಸಹಯೋಗದೊಂದಿಗೆ ಆಶಾಕಿರಣ ಯೋಜನೆಯಡಿಯಲ್ಲಿ ಸರಬರಾಜಾದ ಕನ್ನಡಕಗಳನ್ನು ವಿತರಿಸುವ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.

ಈ ವಿಶೇಷ ಕಾರ್ಯಕ್ರಮವು ಮಾನ್ಯ ಸಚಿವ ಮಾಂಕಾಳ ವೈದ್ಯರ ಅಧ್ಯಕ್ಷತೆಯಲ್ಲಿ ನಡೆಯಿತು. ದೃಷ್ಟಿ ದೋಷಗಳಿಂದ ಬಳಲುತ್ತಿರುವ ಜನರಿಗೆ ಉಚಿತ ಕನ್ನಡಕ ವಿತರಣೆಯ ಮೂಲಕ ಅವರ ದೈನಂದಿನ ಜೀವನ ಸುಗಮಗೊಳಿಸುವ ಉದ್ದೇಶ ಈ ಯೋಜನೆಯದು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ವೈದ್ಯರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಫಲಾನುಭವಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, “ಆರೋಗ್ಯವೆಂದರೆ ಕೇವಲ ರೋಗಮುಕ್ತ ಜೀವನವಲ್ಲ, ಉತ್ತಮ ದೃಷ್ಟಿಯು ಸಹ ಅವಶ್ಯಕ. ಆಶಾಕಿರಣ ಯೋಜನೆಯಡಿಯಲ್ಲಿ ಕನ್ನಡಕ ವಿತರಣೆಯಿಂದ ಹಲವು ಜನರಿಗೆ ಪ್ರಯೋಜನವಾಗಲಿದೆ,” ಎಂದು ಹೇಳಿದರು.

ಭಟ್ಕಳ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಯೋಜನೆಯ ಮಹತ್ವವನ್ನು ವಿವರಿಸಿದರು. ಈ ಯೋಜನೆಯಡಿ ಗರಿ-ಪರೀಕ್ಷೆ ನಡೆಸಿ ದೃಷ್ಟಿ ಸಮಸ್ಯೆಗಳ ತಕ್ಷಣದ ಪರಿಹಾರಕ್ಕಾಗಿ ಜನರಿಗೆ ಸರಿಯಾದ ಕನ್ನಡಕಗಳನ್ನು ನೀಡಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಹಲವಾರು ಫಲಾನುಭವಿಗಳು ಕನ್ನಡಕಗಳನ್ನು ಪಡೆದು ಸಂತೋಷ ವ್ಯಕ್ತಪಡಿಸಿದರು. ಜನಸಾಮಾನ್ಯರ ಆರೋಗ್ಯದ ಸುಧಾರಣೆಗೆ ಈ ರೀತಿಯ ಯೋಜನೆಗಳು ಬಹಳ ಉಪಯುಕ್ತವೆಂದು ಜನಪ್ರತಿನಿಧಿಗಳು ಪ್ರಶಂಸೆ ವ್ಯಕ್ತಪಡಿಸಿದರು.

WhatsApp
Facebook
Telegram
error: Content is protected !!
Scroll to Top