ಸಚಿವರಿಗೆ ಟಾಂಗ್ ನೀಡಲು ಹೋಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೊಲ್ ಆದ ಮಾಜಿ ಶಾಸಕ ಸುನಿಲ್ ನಾಯ್ಕ
ಭಟ್ಕಳ: ಹೊನ್ನಾವರ ಬಂದರ ನಿರ್ಮಾಣದ ಸಂಬಂಧ ಮಾಜಿ ಶಾಸಕ ಸುನಿಲ್ ನಾಯ್ಕ್ ಅವರು ಸಚಿವ ಮಾಂಕಾಳ ವೈದ್ಯರ ವಿರುದ್ಧ ಟಾಂಗ್ ಕೊಡಲು ಹೋಗಿ ಸ್ವತಃ ತಾವೇ ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾ ಮುಗ್ಗ ಟ್ರೊಲ್ ಆದ ಘಟನೆ ನಡೆದಿದ್ದು ಮಾಜಿ ಶಾಸಕ ಸುನಿಲ್ ನಾಯ್ಕ್ ಹಾಸ್ಯದ ವಸ್ತುವಾಗಿ ವರ್ತನೆಯಾಗಿದ್ದಾರೆ
ಹೌದು ವೀಕ್ಷಕರೇ ಕೇಂದ್ರ ಸರಕಾರವು ಹೊನ್ನಾವರದಲ್ಲಿ ಪೋರ್ಟ್ ನಿರ್ಮಾಣಕ್ಕೆ ಮುಂದಾಗಿ ಬರೋಬ್ಬರಿ ಐದಾರು ವರ್ಷಗಳೇ ಕಳೆದು ಹೋಗಿದೆ ಆದರೆ ಅಲ್ಲಿಯ ಸ್ಥಳೀಯ ನಿವಾಸಿಗಳು ಪೋರ್ಟ್ ನಿರ್ಮಾಣಕ್ಕೆ ತಡೆಯೋದ್ದಿದ್ದರು ಮಾಜಿ ಶಾಸಕ ಸುನಿಲ್ ನಾಯ್ಕ್ ಅವರು ತಮ್ಮ ಅಧಿಕಾರ ಅವಧಿಯಲಿ ಇಲ್ಲಿ ಪೋರ್ಟ್ ಕಾಮಗಾರಿ ನಡೆಸಲು ಹರಸಾಹಸವನ್ನು ಪಟ್ಟಿದ್ದರು ಸುನಿಲ್ ನಾಯ್ಕ್ ಅಧಿಕಾರ ಅವಧಿಯಲ್ಲಿ ಈ ಸಂಬಂಧ ಅನೇಕ ಅಮಾಯಕರ ಮೇಲೆ F. I. R ದಾಖಲಾಗಿತ್ತು ಅಲ್ಲದೆ ಇದೆ ಸುನಿಲ್ ನಾಯ್ಕ್ ಅವರು ಈ ಸಂಬಂಧ ಮರಿ ಪುಡಾರಿಗಳ ಮೂಲಕ ಸ್ಥಳೀಯ ನಿವಾಸಿಗಳ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂಬ ಸುದ್ದಿಗಳನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದವು ಆದರೆ ಸುನಿಲ್ ನಾಯ್ಕ್ ಎಷ್ಟೇ ಪ್ರಯತ್ನ ಪಟ್ಟರು ಅಂದು ಸ್ಥಳೀಯ ನಿವಾಸಿಗಳು ಪೋರ್ಟ್ ನಿರ್ಮಾಣ ಮಾಡಲು ಬೀಡಲಾರೆವು ಎಂದುಹಿಡಿದ ಪಟ್ಟು ಸಾಧಿಸರಲಿಲ್ಲವಾಗಿತ್ತು
ಆದರೆ ಅದೇ ಪ್ರಕರಣ ಸಂಬಂಧಿಸಿದಂತೆ ಇದೆ ಮಾಜಿ ಶಾಸಕ ಸುನಿಲ್ ನಾಯ್ಕ್ ಸಚಿವ ಮಾಂಕಾಳ ವೈದ್ಯರ ವಿರುದ್ಧ ಹೇಳಿಕೆ ಕೊಡುವ ತರಾತುರಿಯಲ್ಲಿ ಹೈ ಡ್ರಾಮಾ ಶುರುವಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗ ಟ್ರೊಲ್ ಆಗುವುದರ ಮೂಲಕ ಹಾಸ್ಯದ ವಸ್ತುವಾಗಿ ಬದಲಾಗಿದ್ದಾರೆ ಎನ್ನುವುದು ಇಲ್ಲಿ ಪ್ರಸ್ತುತ
ಮಾಜಿ ಶಾಸಕ ಸುನಿಲ್ನಾಯ್ಕ್ ತಮ್ಮ ಅಧಿಕಾರದ ಅವಧಿಯಲ್ಲಿ ತಾವು ಇಲ್ಲಿನ ಮೀನುಗಾರರಿಗೆ ತೊಂದರೆ ಕೊಟ್ಟಿಲ್ಲ ಒಂದೇ ಒಂದು F. I. R ಗಳು ತನ್ನ ಅವಧಿಯಲ್ಲಿ ದಾಖಲಾಗಿಲ್ಲ ಎಂದು ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳನ್ನು ಹೇಳಿದ್ದಾರೆ ಇವರ ಅವಧಿಯಲ್ಲಿ 20 ಪ್ರಕರಣಗಳು ದಾಖಲಾಗಿದ್ದವು ಹಾಗೆ ಇವರ ಹೆಸರಿನಲ್ಲಿ ಕೆಲವು ಮರೀಪುಡಾರಿಗಳು ಸ್ಥಳೀಯ ನೀವಾಸಿಗಳ ಮೇಲೆ ದೌರ್ಜನ್ಯ ನಡೆಸಿರುಧು ಬೆಳಕಿಗೆ ಬಂದಿದೆ ಈ ಬಗ್ಗೆ ಸುದ್ದಿ ವಾಹಿನಿಗಳಲ್ಲಿ ಸುದ್ಧಿ ಪ್ರಸಾರವಾಗಿತ್ತು
ವೀಕ್ಷಕರೇ ಸುನಿಲ್ ನಾಯ್ಕ್ ಅವರ ಅಧಿಕಾರ ಅವಧಿಯಲ್ಲಿ ಹೊನ್ನಾವರ ಬಂದರು ಯೋಜನೆಗೆ ಸಂಭಂಧಿಸಿದಂತೆ ಬರೋಬ್ಬರಿ 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ ಯೋಜನೆಯ ಪರವಾಗಿ 14 ಪ್ರಕರಣಗಳು ಯೋಜನೆಯ ವಿರುದ್ದ ನಾಲ್ಕು ಪ್ರಕರಣ ಕಂಪನಿಯವರು ಒಂದು ಸುಮೊಟೊ ಪ್ರಕರಣ 1 ಹೀಗೆ ಸುನಿಲ್ ನಾಯ್ಕ್ ಅಧಿಕಾರ ಅವಧಿಯಲ್ಲಿ ಬರೋಬ್ಬರಿ 18 ಪ್ರಕರಣಗಳು ದಾಖಲಾಗಿದೆ ಆದರೆ ನಮ್ಮ ಸುನಿಲ್ ನಾಯ್ಕ್ ಮಾತ್ರ ತಮ್ಮ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ ಎಂದು ಸುಳ್ಳನ್ನೇ ಹೇಳುತ್ತಾರೆ
ಸ್ವಾಮಿ ನೀವು ಸುಳ್ಳನ್ನು ಹೇಳಿದರೆ ಸರಕಾರಿ ದಾಖಲೆಗಳು ಎದ್ದುಬಂದು ಸಾಕ್ಷಿಯನ್ನು ಹೇಳುತ್ತವೆ ಸೊ ತಾವು ಮಾಧ್ಯಮಕ್ಕೆ ಹೇಳಿಕೆಯನ್ನು ನೀಡುವಾಗ ಹಿಂದೆ ಮುಂದೆ ಯೋಚನೆಮಾಡಿ ಹೇಳಿಕೆ ನೀಡಿ ಇಲ್ಲವಾದಲ್ಲಿ ಈಗ ಹೇಗೆ ಬಾಲಿಷವಾಗಿ ಹೇಳಿಕೆಕೊಟ್ಟು ಟ್ರೊಲ್ಗೆ ಒಳಗಾಗಿದ್ದಿರೋ ಹಾಗೆ ಹಾಸ್ಯದ ವಸ್ತುವಾಗಿ ಪರಿವರ್ತನೆ ಆಗುತ್ತಿರ ಎನ್ನುದು ಸಾರ್ವಜನಿಕರ ಮಾತಾಗಿದೆ
ಏನೆ ಆಗಲಿ ಸುನಿಲ್ಲ ನಾಯ್ಕ ಅವರ ಪೂರ್ವ ಪರ ಯೋಚಿಸದೆ ಮಾಡಮಕ್ಕೆ ಕೊಟ್ಟ ಹೇಳಿಕೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೊಲ್ಗೆ ಒಳಗಾಗಿರುದು ಮಾತ್ರ ಸತ್ಯ ಟ್ರೋಲಿಗರು ಸುನಿಲ್ ನಾಯ್ಕ್ ಅವರನ್ನು ಹಿಗ್ಗಾ ಮುಗ್ಗ ರುಭೂತ್ತಿರುದು ಮಾತ್ರ ಸತ್ಯ ವಾದ ವಿಚಾರವಾಗಿದೆ