ತಪ್ಪಿದ ಅನಾಹುತ
ಭಟ್ಕಳ: Extra Neutral Ethanol ಕ್ಯಾಮಿಕಲ್ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಬಸ್ತಿಯಲ್ಲಿ ರವಿವಾರ ನಡೆದಿದೆ.
ಹೊನ್ನಾವರ ಕಡೆಯಿಂದ ಮಂಗಳೂರು ಮಂಗಳೂರು ಕಡೆ ಹೊರಟಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಕ್ಲಿನರ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕ್ಯಾಮಿಕಲ್ ತುಂಬಿದ ಲಾರಿಯಾಗಿರುವುದರಿಂದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಕರೆ ಮಾಡಿ ಮಾಹಿತಿ ತಿಳಿಸಲಾಯಿತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಯಾವುದೆ ತೊಂದರೆಯಾಗದಂತೆ ಫೋಮ್(magnesiums sulfate) ಸಿಂಪಡನೆ ಮಾಡಿದರು.
ಈ ವೇಳೆ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಮೋಹನ್ ಶೆಟ್ಟಿ, ಸಿಬ್ಬಂದಿ ಗಜಾನನ ದೇವಾಡಿಗ, ಸುಧಾಕರ್ ದೇವಾಡಿಗ, ಶಿವಪ್ರಸಾದ್ ನಾಯ್ಕ್, ನಾರಾಯಣ ಪಟಗಾರ ಇದ್ದರು