ಹಾಡು ನಿಲ್ಲಿಸಿದ ಹಾಡುಹಕ್ಕಿ ಖ್ಯಾತಿಯ ಪದ್ಮಶ್ರೀ‌ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ

ಅಗಲಿದ ಆತ್ಮಕ್ಕೆ ವಿದಾಯ ಹೇಳಿದ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ

ಅಂಕೋಲಾ: ಅನಾರೋಗ್ಯಕ್ಕೆ ಒಳಗಾಗಿದ್ದ ಹಾಡುಹಕ್ಕಿ ಪದ್ಮಶ್ರೀ‌ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಅವರು ಇಂದು ನಿಧನರಾಗಿದ್ದು ಉಸ್ತುವಾರಿ ಸಚಿವ ಮಾಂಕಾಳು ವೈದ್ಯ ಅವರನ್ನು ಒಳಗೊಂಡಂತೆ ಗಣ್ಯತಿಗಣ್ಯರು ಅಗಲಿದ ಆತ್ಮಕ್ಕೆ ವಿದಾಯ ಹೇಳಿದ್ದಾರೆ

ಅಂಕೋಲಾ ತಾಲೂಕಿನ ಬಡಿಗೆರಿ ಗ್ರಾಮದ ತಮ್ಮ ಮನೆಯಲ್ಲಿ ನಿಧನ ಹೊಂದಿದ ಹಾಡುಹಕ್ಕಿ ಸುಕ್ರಿ ಬೊಮ್ಮ ಗೌಡ ಅವರಿಗೆ 88 ವರ್ಷ ವಯಸ್ಸಾಗಿತ್ತು. ಇವರಿಗೆ ಪದ್ಮಶ್ರೀ, ನಾಡೋಜ, ರಾಜ್ಯೋತ್ಸವ, ಜಾನಪದ ಶ್ರೀ ಪ್ರಶಸ್ತಿ ಪಡೆದಿದ್ದು, 2017 ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು

ಜಾನಪದ‌ ಹಾಡುಗಳ ಮೂಲಕ ಸಮುದಾಯದ ಮಹಿಳೆಯ ಪರಿಚಯಿಸುವ ಕಾರ್ಯ ನಿರ್ವಹಿಸಿದ್ದರು. ಅನೇಕ ಹೋರಾಟಗಳಲ್ಲಿ ಸಹ ಇವರು ಮುಂಚೂಣಿ ಯಲ್ಲಿ ಇರುತ್ತಿದ್ದರು..

ಈ ಹಾಡು ಹಕ್ಕಿಯ ಖ್ಯಾತಿಯ ಸುಕ್ರಿ ಬೊಮ್ಮ ಗೌಡ ವಯೋಸಹಜ ಸಾವನ್ನು ಹೊಂದಿದ್ದಾರೆ  ಮೃತರ ಅಂತಿಮ  ದರ್ಶನವನ್ನು  ಉಸ್ತುವಾರಿ ಸಚಿವರು ಮೀನುಗಾರಿಕ ಇಲಾಖೆಯ ಸಚಿವರು ಆದ ಮಾಂಕಾಳ್ ವೈದ್ಯರು ಪಡೆದುಕೊಂಡರು ಈ ಸಂದರ್ಭದಲ್ಲಿ  ಅವರು ಮಾತನಾಡಿ

ಜಾನಪದ ಗಾನಕೋಗಿಲೆ’ ಪದ್ಮಶ್ರೀ ಪುರಸ್ಕೃತೆ’ ಸುಕ್ರಿ ಬೊಮ್ಮು ಗೌಡ ಅವರು ನಮ್ಮನ್ನೆಲ್ಲ ಅಗಲಿರುವ ಸುದ್ದಿ ತಿಳಿದು ಮನಸ್ಸಿಗೆ ದುಃಖ ಉಂಟಾಯಿತು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಜನಿಸಿದ ಇವರು ತಮ್ಮ ಜಾನಪದ ಗಾಯನದ ಮೂಲಕ ಜಾನಪದ ಕ್ಷೇತ್ರದಲ್ಲಿ ಮೈಲುಗಲ್ಲು ಸೃಷ್ಟಿಸಿದ ಸುಕ್ರಿ ಗೌಡರನ್ನು ಕಳೆದುಕೊಂಡಿರುವುದು ಜಾನಪದ ಕ್ಷೇತ್ರಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು

ಸರಕಾರದ ಸಕಲ ಗೌರವ ಆದರಗಳಿಂದ  ಪದ್ಮಶ್ರೀ‌ ಪುರಸ್ಕೃತೆ ಗಾನ ಕೋಗಿಲೆ ಸುಕ್ರಿ ಬೊಮ್ಮ ಗೌಡ

WhatsApp
Facebook
Telegram
error: Content is protected !!
Scroll to Top