ಭಟ್ಕಳ: ತಾಲೂಕ 11 ನೇ kannada ಸಾಹಿತ್ಯ ಸಮೇಳನದಲ್ಲಿ ತಾಲೂಕಿನ ಹಿರಿಯ ಪತ್ರಕರ್ತರಾದ ಸುಭ್ರಮಣ್ಯ ದಾಸನಕುಡಿಕೆ ಮತ್ತು ಮನ್ಮೋಹನ ನಾಯ್ಕ ವಿವೇಕ್ ಮಹಾಲೆ ಈವರಿಗೆ ಅವರ ಸಾಧಗಾಗಿ ಗೌರವಿಸಿ ಸನ್ಮಾನಿಸಲಾಯತು
ಹೌದು ವೀಕ್ಷಕರೇ ಭಟ್ಕಳ ತಾಲೂಕ ಶಿರಾಲಿ ದುರ್ಗಾ ಪರಮೇಶ್ವರಿ ಸಭಾಭಾವನದಲ್ಲಿ ನಡೆದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿತ್ಯಸಾಹಿತಿಗಳಾದ ಭಟ್ಕಳದ ಹಿರಿಯ ಪತ್ರಕರ್ತರಾದ ಸುಭ್ರಮಣ್ಯ ದಾಸನಕುಡಿಕೆ ಮತ್ತು ಮನ್ಮೋಹನ ನಾಯ್ಕ ವಿವೇಕ್ ಮಹಾಲೆ ಅವರನ್ನು ಸನ್ಮಾನಿಸಿ ಗೌರವಿಸಲಾಯತು ಈ ಹಿರಿಯ ಪತ್ರಕರ್ತರಾದ ಸುಭ್ರಮಣ್ಯ ದಾಸನಕುಡಿಕೆ ಮತ್ತು ಮನ್ಮೋಹನ ನಾಯ್ಕ ಅವರು 2010 ರಲ್ಲಿ ಕರ್ನಾಟಕ journalist Association ಅಡಿಯಲ್ಲಿ ಭಟ್ಕಳ ಪತ್ರಕರ್ತ ಸಂಘವನ್ನು ಹುಟ್ಟಿ ಹಾಕಿದ ಪ್ರಮುಖರ ಸಾಲಿನಲ್ಲಿ ಇಬ್ಬರಾಗಿದ್ದಾರೆ ಅಂದು ಸುಬ್ರಮಣ್ಯ ದಾಸನ ಕುಡಿಕೆ ಭಟ್ಕಳ ಪತ್ರಕರ್ತರ ಸಂಘದ ಪ್ರಥಮ ಅಧ್ಯಕ್ಷರಾದರೆ ಮನ್ಮೋಹನ್ ನಾಯ್ಕ ಅವರು ಕಾರ್ಯಧರ್ಶಿಗಳಾಗಿ ಕಾರ್ಯನಿರ್ವಹಿಸಿದ್ದರು ಹಾಗೆ ಈ ಇರ್ವರು ಭಟ್ಕಳ ಪತ್ರಕರ್ತರ ಕ್ಷೇಮಭಿವೃಧಿ ಸಂಘವನ್ನು ಹುಟ್ಟುಹಾಕಿದ ಪ್ರಮುಖರ ಸಾಲಿನಲ್ಲಿರುವ ಇಬ್ಬರು ಪತ್ರಕರ್ತರಾಗಿದ್ದಾರೆ ಹಾಗೆ ಪತ್ರಕರ್ತರಾಧ ವಿವೇಕ್ ಮಹಾಲೆ ಅವರು ಪತ್ರಿಕಾರಂಗದಲ್ಲಿ ೨೬ ವರ್ಷಗಳ ಅನುಭವ ಹೊಂದಿದ್ದು ವಿಜಯವಾಣಿ ಮತ್ತು ವಿಜಯ ಕರ್ನಾಟಕ ದಿನಪತ್ರಿಕೆಗಳಲ್ಲಿ ಸ್ಥಾನಿಕ ಸಂಪಾದಕರಾಗಿ ಮತ್ತು ವಿಸ್ತಾರ ನ್ಯೂಸ್ ಕನ್ನಡ ವಾಹಿನಿಯಲ್ಲಿ ಬ್ಯೂರೋ ಮುಖ್ಯಸ್ಥರಾಗಿ ನಿರ್ವಹಣೆ ಮಾಡುತ್ತಿದ್ದಾರೆ
ಈ ಮೂವರು ಪತ್ರಕರ್ತರು ಪತ್ರಿಕಾ ರಂಗದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ ಸಮಾಜದಲ್ಲಿ ಉತ್ತಮ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ
ಇವರ ಈ ಸಾಧನೆಯನ್ನು ಗಮನಿಸಿದ ಭಟ್ಕಳ ಕಸಾಪಾವು ಈ ಇರ್ವ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದೆ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವಕ್ಕೆ ಪಾತ್ರರಾದ ಸುಬ್ರಮಣ್ಯ ಭಟ್ ಮತ್ತು ಮನಮೋಹನ್ ನಾಯಕರಿಗೆ ಭಟ್ಕಳ ಪತ್ರಕರ್ತರ ಕ್ಷೇಮಭಿವೃದ್ದಿ ಸಂಘ
ಅಭಿನಂದನೆಗಳನ್ನು ಸಲ್ಲಿಸಿದೆ
ಸನ್ಮಾನಗೊಂಡ ಪತ್ರಕರ್ತರಿಗೆ ನಮ್ಮ ಕರಾವಳಿ ಸಮಾಚಾರವು ಕೂಡಾ ಅಭಿನಂಧನೆಯನ್ನು ಸಲ್ಲಿಸುತಿದೆ