ಫೇ 4ರಿಂದ  ಭಟ್ಕಳ ಚೌತನಿ ಕಾಳಿಕಾಂಭ ದೇವಿಯ ಅಷ್ಟಬಂಧ

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬ್ರಹ್ಮಕಳಶೋತ್ಸವ ಸಮಿತಿಯ ಅಧ್ಯಕ್ಷ ಗಜಾನನ ಆಚಾರ್ಯ

ಭಟ್ಕಳ ತಾಲ್ಲೂಕಿನ ಚೌಥನಿಯ ಶ್ರೀ ಕಾಳಿಕಾಂಬಾ ದೇವಿಯ ಅಷ್ಟಬಂಧ  ಬ್ರಹ್ಮಕಲಶಾಭಿಷೇಕ ಫೆ.೪ರಿಂದ ಫೆ.೮ರ ತನಕ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕೇಸರ ಹಾಗೂ ಅಷ್ಟಬಂಧ (Ashtabandha) ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗಜಾನನ ನಾಗಪ್ಪಯ್ಯ ಆಚಾರ್ಯ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಐದು ದಿನದ ಕಾರ್ಯಕ್ರಮಗಳು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಮತ್ತು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶ್ರೀ ವಿಶ್ವಕರ್ಮ ಗುರುಜಗರ್ವ ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ. ಸಂಪೂರ್ಣ ಕಾರ್ಯಕ್ರಮದ ವೈಧಿಕ ಸಹಭಾಗಿತ್ವವನ್ನು ಬ್ರಹ್ಮಶ್ರೀ ಎನ್. ಕೇಶವ ಪುರೋಹಿತರು ಹಾಗೂ ತಂತ್ರಿಗಳು, ಪ್ರಧಾನ ಅರ್ಚಕ ಬ್ರಹ್ಮಶ್ರೀ ಎನ್.ಎಸ್. ವಾಸುದೇವ ಶಾಸ್ತ್ರಿ, ಇತರ ವೈದಿಕರ ಸಹಭಾಗಿತ್ವದೊಂದಿಗೆ ನೆರವೇರಲಿದೆ ಎಂದು ತಿಳಿಸಿದ್ದಾರೆ.

ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಫೆ.೪ರಂದು ಬೆಳಿಗ್ಗೆ “ಸಾಮೂಹಿಕ ಪ್ರಾರ್ಥನೆ” ತೋರಣ ಪ್ರತಿಷ್ಠೆ ಧ್ವಜ ಪ್ರತಿಷ್ಠೆ ಮಧ್ಯಾಹ್ನ ದೇವರ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಂತರ್ಪಣೆ ಜರುಗಲಿದೆ. ಸಂಜೆ ಗುರು ಗಣಪತಿ ಪೂಜೆ, ಪುಣ್ಯಾಹವಾಚನ, ಪ್ರಸಾದ ಶುದ್ದಿ, ನಾಂದಿ, ಅಂಕುರ ಪೂಜೆ, ಕೌತುಕ ಬಂಧನ, ವಾಸ್ತು ರಾಕ್ಷೆಘ್ನ ಹೋಮ ದಿಗಲಿ, ದೇವರ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಂತರ್ಪಣೆ ನಡೆಯಲಿದೆ.

ಫೆ.೫ರಂದು ಗಣಪತಿ ಹೋಮ, ನವಗ್ರಹ, ಮೃತ್ಯುಂಜಯ, ಐಕ್ಯ ಮತ್ಯ ಹೋಮಗಳು, ಮಧ್ಯಾಹ್ನ ದೇವರ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಸಂಜೆ ಪ್ರಾಯಶ್ಚಿತ ಹೋಮಗಳು, ಮಾರ್ಕಂಡೇಯ ಪುರಾಣ ಸಪ್ತಶತಿ ಪಾರಾಯಣ, ರಾತ್ರಿ ದೇವರ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಂತರ್ಪಣೆ ನಡೆಯಲಿದೆ. ಫೆ.೭ರಂದು ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಕಾಳಿಕಾಂಬಾ ದೇವಿಯ ಅಷ್ಠಬಂಧ ಬ್ರಹ್ಮಕಲಶಾಭಿಷೇಕ ನಡೆಯಲಿರುವುದು. ಫೆ.೮ರಂದು ತುಲಾಭಾರ ಸೇವೆ, ಚಂಡಿಕಾಹೋಮ ಪ್ರಾರಂಭವಾಗಲಿದೆ. ಮಧ್ಯಾಹ್ನ ಮಹಾಪೂಜೆ, ಸುಹಾಸಿನಿ ಪೂಜೆ, ಬ್ರಹ್ಮಾರ್ಪಣೆ, ಮಂಗಳ ದಕ್ಷಿಣೆ, ಫಲಮಂತ್ರಾಕ್ಷತೆ, ಮಹಾ ಅನ್ನಸಂಪರ್ತಣೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಭೂದಾನ ಯೋಜನಾ ಸಮಿತಿ ಗೌರವಾಧ್ಯಕ್ಷ ಗೋಪಾಲ ಮಂಜಯ್ಯ ಆಚಾರ್ಯ ಜಾಲಿ, ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸದಾನಂದ ಶಿವರಾಮ ಆಚಾರ್ಯ ಜಾಲಿ, ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ದೇವಸ್ಥಾನದ ಮಾಜಿ ಆಡಳಿತ ಮೊಕೇಸರ ಗಜಾನನ ಶಂಕರ ಆಚಾರ್ಯ ಶಿರಾಲಿ, ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಉಪಕಾರ್ಯದರ್ಶಿ ನಾಗೇಶ ನಾಗಪ್ಪಯ್ಯ ಆಚಾರ್ಯ ಮಾತನಾಡಿದರು. ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಬಾಬು ಆಚಾರ್ಯ, ವಿಶ್ವಕರ್ಮ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ಶ್ರೀಕಾಂತ ಆಚಾರ್ಯ, ಉಪಾಧ್ಯಕ್ಷ ಜಗದೀಶ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top