ಭಟಳದಲ್ಲಿ ಶಾಂತಿ ನೆಲೆ ಕಾಣುವಂತೆ ಮಾಡಲು ಮನವಿ
ಭಟ್ಕಳದಲ್ಲಿ ಶಾಂತಿ ಭಂಗಕ್ಕೆ ಕಾರಣವಾಗುವಂತಹ ಒಂದರ ಮೇಲೊಂದು ನಡೆಯುತ್ತಿರುವ ಸಂದೇಹಾಸ್ಪದ ದುಷ್ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವ ಕುರಿತು.
ಭಟ್ಕಳದಲ್ಲಿ ಇತ್ತೀಚಿನ ದಿನಗಳಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಅನೇಕ ಸಂದೇಹಾಸ್ಪದ ಪ್ರಕರಣಗಳು ಒಂದರ ಮೇಲೊಂದು ಸಂಭವಿಸುತ್ತಿದ್ದು, ಈ ಕೆಳಗಿನ ಪ್ರಮುಖ ಪ್ರಕರಣಗಳನ್ನು ತಮ್ಮ ಗಮನಕ್ಕೆ ತರುವ ಮೂಲಕ ಶೀಘ್ರ ಹಾಗೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕದ್ರ ಕಾನೂನು ಕ್ರಮಕ್ಕೆ ನಮ್ಮ ಸಂಘಟನೆಗಳ ಪರವಾಗಿ ಆಗ್ರಹಿಸುತ್ತಿದ್ದೇವೆ.
L ದಿನಾಂಕ 10/12/2024ರಂದು ಆಸರಕೇರಿ ಗ್ರಾಮದವರು ಈ ಹಿಂದಿನಿಂದ ನಡೆದು ಬಂದಿರುವಂತಹ ಅವರ ಗ್ರಾಮದ ಧಾರ್ಮಿಕ ಪದ್ದತಿಯಂತೆ ಭಟ್ಕಳ ನಗರದ ಅರ್ಬನ್ ಬ್ಯಾಂಕ್ ಎದುರಿನ ಶ್ರೀ ವನದುರ್ಗಿ ದೇವಿಯ ಕಟ್ಟೆಯಿಂದ ಹಾಗೂ ಭಟ್ಕಳದ ಮುಖ್ಯ ವೃತ್ತದ ಪಕ್ಕದಲ್ಲಿರುವಂತಹ ಮರದ ದೇವರ ಬೊಂಬೆಗಳನ್ನು ಒಳಗೊಂಡ ಮಾರಿಹೊರೆಯನ್ನು ಗ್ರಾಮಸ್ಥರ ಮೆರವಣಿಗೆ ಮೂಲಕ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಮುರಿನಕಟ್ಟೆಯ (ಬೆಂಡೆಕಾನ ಕ್ರಾಸ್ ಹತ್ತಿರ) ಧಾರ್ಮಿಕ ಶಕ್ತಿ ಸ್ಥಳಕ್ಕೆ ತಲುಪಿಸಲಾಗಿತ್ತು ಹಾಗೂ ಮಾರಿಹೊರೆಯ ಜೊತೆ ತರಲಾಗಿದ್ದ 2 ಮರದ ದೇವರ ಬೊಂಬೆಗಳನ್ನು ಮಾರಿಹೊರೆಯ ಜೊತೆ ಮುರಿನಕಟ್ಟೆಯ ನಾಮಫಲಕದ ಕೆಳಗಡೆ (ಪೋಟೊ ಲಗತ್ತಿಸಲಾಗಿದೆ) ಇಡಲಾಗಿತ್ತು. ಹಾಗೆಯೇ, ದಿನಾಂಕ: 24/12/2024ರಂದು ರಾತ್ರಿ 7-30ಕ್ಕೆ ಸಂಪ್ರದಾಯದಂತೆ ಮುಂದಿನ ಗ್ರಾಮವಾದ ಕಂಡೇಕೊಡ್ಲು, ಹುರುಳಿಸಾಲ ಹಾಗೂ ಕಾರ್ಗದ್ದೆ ಗ್ರಾಮಸ್ಥರು ಮಾರಿಹೊರೆಯನ್ನು ಮುಂದಿನ ವೆಂಕಟಾಪುರ ಗ್ರಾಮಕ್ಕೆ ತಲುಪಿಸುವ ಉದ್ದೇಶದಿಂದ ಮುರಿನಕಟ್ಟೆಯಲ್ಲಿ ಇದ್ದಂತಹ ಮಾರಿಹೊರೆಗೆ ಪೂಜೆ ಸಲ್ಲಿಸಲು ಹೋದಾಗ ಅಲ್ಲಿ ಇಟ್ಟಂತಹ 2 ದೇವರ ಬೊಂಬೆಗಳು ನಾಪತ್ತೆಯಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿರುತ್ತದೆ ಹಾಗೂ ಪೊಲೀಸರ ಗಮನಕ್ಕೆ ತಂದು ಕೂಡಲೇ ಆರೋಪಿಗಳ ಪತ್ತೆಹಚ್ಚುವಂತೆ ಆಗ್ರಹಿಸಿ ಗ್ರಾಮದವರಿಂದ ಪ್ರಕರಣವನ್ನು ಸಹ ದಾಖಲಿಸಲಾಗಿರುತ್ತದೆ.
- ಇಂದು ದಿನಾಂಕ 26/12/2024 ರಂದು ಬೆಳಗಿನ ಜಾವ ಸರಿಸುಮಾರು 2-00 ಗಂಟೆಗೆ ನಮ್ಮ ಹಿಂದೂ ಅಂಗಡಿಕಾರನಾದ ಶ್ರೀ ರಾಮಚಂದ್ರ ನಾಯ್ಕ ಎಂಬುವವರ ಹಣ್ಣಿನ ಅಂಗಡಿಗೆ ಅನುಮಾಸ್ಪದ ರೀತಿಯಲ್ಲಿ ಬೆಂಕಿ ಬಿದ್ದಿದ್ದು, ಅಂಗಡಿಯು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದನ್ನು ಗಮನಿಸಿದರೆ ಇದೊಂದು ಕಿಡಿಗೇಡಿಗಳ ಶಾಂತಿ ಭಂಗ ಮಾಡುವ ಪೂರ್ವನಿಯೋಜಿತ ದುಷ್ಕೃತ್ಯ ಎನ್ನುವುದು ಮೇಲ್ನೋಟಕ್ಕೆ ಸಂದೇಹ ಪಡುವಂತಾಗಿದೆ.
- ದಿನಾಂಕ: 20/12/2024ರಂದು ಭಟ್ಕಳ ನಗರದ ನಾಗಪ್ಪ ನಾಯ್ಕ ರಸ್ತೆಯಲ್ಲಿ ಹಿಂದೂಗಳ ಮದುವೆ ಮೆರವಣಿಗೆಯ ಸಂದರ್ಭದಲ್ಲಿ ಅನ್ಯಕೋಮಿನ ಕೆಲ ಕಿಡಿಗೇಡಿಗಳು ಮೆರವಣಿಗೆಯನ್ನು ಅಡ್ಡಗಟ್ಟಿ ಮದುವೆ ಮೆರವಣಿಗೆ ನಡೆಸದಂತೆ ತಾಕೀತು ಮಾಡಿರುವ ಘಟನೆಯೂ ಸಹ ನಡೆದಿರುತ್ತದೆ.
ಹೀಗೆ ಒಂದರ ಮೇಲೊಂದು ಶಾಂತಿಭಂಗ ತರುವಂತಹ ಸಂದೇಹಾಸ್ಪದ ಘಟನೆಗಳು ನಡೆಯುತ್ತಿರುವುದು ಭಟ್ಕಳದ ಹಿಂದೂಗಳಲ್ಲಿ ಆತಂಕ ಉಂಟುಮಾಡಿರುತ್ತದೆ. ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ದುಷ್ಕೃತ್ಯಕ್ಕೆ ಕಾರಣೀಕರ್ತರಾದವರನ್ನು ಹಿಡಿದು ಕಾನೂನು ಕ್ರಮ ಜರುಗಿಸದಿದ್ದರೇ ಮುಂದಿನ ದಿನಗಳಲ್ಲಿ ಇಂತಹವರ ಮನೋಬಲ ಹೆಚ್ಚಾಗಿ ಇನ್ನಷ್ಟು ದುಷ್ಕೃತ್ಯಕ್ಕೆ ಪ್ರೇರಣೆಯಾಗಿ ಭಟ್ಕಳದಲ್ಲಿ ಶಾಂತಿ ಭಂಗಕ್ಕೆ ಕಾರಣರಾಗಬಲ್ಲರು. ಆದ್ದರಿಂದ ಕೂಡಲೇ ಈ ಮೇಲಿನ ಪ್ರಕರಣಗಳನ್ನು ಭೇಧಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಈ ಮೂಲಕ ಆಗ್ರಹಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ಮುಂದುವರಿದಲ್ಲಿ ಇದರ ವಿರುದ್ಧ ಪ್ರತಿಭಟನೆಯ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ ಎಂದು ಮನವಿಯನ್ನು ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಟ್ಕಳ ಘಟಕದ ಅಧ್ಯಕ್ಷರಾದ ರಾಮಕೃಷ್ಣ ನಾಯ್ಕ, ಹಿಂದೂ ಜಾಗರಣಾ ವೇದಿಕೆ ಸಂಯೋಜಕರಾದ ಜಯಂತ ಬೆಣಂದೂರು ಹಿಂದೂ ಜಾಗರಣ ವೇದಿಕೆಯ ನಾಗೇಶ ನಾಯ್ಕ ಹೆಬ್ಳೆ, ಕುಮಾರ ನಾಯ್ಕ ಹಾಗೂ ಶ್ರೀಕಾಂತ ನಾಯ್ಕ ಹಾಗೂ ಇನ್ನಿತರ ಹಿಂದೂ ಮುಖoಡರು ಇನ್ನಿತರರು ಉಷ್ಠಿತರಿದ್ದರು