ಪ್ಲೈಓವರ್ ನಿರ್ಮಾಣಮಾಡದೆ ನಾವು ರಸ್ತೆ ಕಾಮಗಾರಿ ನಡೆಸಲು ಬಿಡಲಾರೆವು ಎಂದು ಪ್ರತಿಭಟನೆಗಿಳಿದ ಸ್ಥಳಿಯ ಸಾರ್ವಜನಿಕರು
ಸ್ಥಳಕ್ಕೆ ಬೇಟಿಕೊಟ್ಟು ಸಾರ್ವಜನಿಕರ ಮನವೊಲಿಸಲು ಪ್ರಯತ್ನಪಟ್ಟ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ
ಸಹಾಯಕ ಆಯುಕ್ತೆ ಡಾ ನಯನಾ ಅವರು ಮದ್ಯ ಪ್ರವೇಶಿಸಿದರು ಪಟ್ಟುಬಿಡದ ಸಾರ್ವಜನಿಕರು
ಭಟ್ಕಳ ತಾಲೂಕ ಮುರ್ಡೆಶ್ವರ ಉತ್ತರ ಕೊಪ್ಪ ಕ್ರಾಸ್ ಅಲ್ಲಿ ಐ ಆರ್ ಬಿ ರಾಷ್ಟ್ರೀಯ ಹೆದ್ದಾರಿ ಅಗಲಿಕರಣಕ್ಕೆ ಮುಂದಾದಾಗ ಪ್ಲೈಓವರ್ ನಿರ್ಮಾಣ ಮಾಡದೆ ರಸ್ತೆ ನಿರ್ಮಾಣ ಮಾಡಲು ಬಿಡಲಾರೆವು ಎಂದು ಸಾರ್ವಜನಿಕರು ಪ್ರತಿಭಟನೆಗೆ ಇಳಿದಿದ್ದರು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಪಿಡಿ ಸಾರ್ವಜನಿಕರ ಮನವೊಲಿಸಲು ವಿಪಲವಾದಾಗ ಸಹಾಯಕ ಆಯುಕ್ತರು ಮದ್ಯ ಪ್ರವೇಶಿದರು ಸ್ಥಳಿಯ ಸಾರ್ವಜನಿಕರು ಪಟ್ಟುಬಿಡದ ಕಾರಣ ಸ್ಥಳಕ್ಕೆ ಆಗಮಿಸಿದ್ದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಐ ಆರ್ ಬಿ ಕಂಪನಿಯ ಇಂಜಿನಿಯರ್ ಬಂದದಾರಿಗೆ ಸುಂಕವಿಲ್ಲ ಎಂದು ವಾಪಾಸ್ ತೆರಳಿದ ಘಟನೆ ನಡೆದಿದೆ
ಹೌದು ವೀಕ್ಷಕರೆ ಈ ಐ ಆರ್ ಬಿ ಕಂಪನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜಿಲ್ಲೆಯಾಧ್ಯಂತ ನಡೆಸಿದ ಅವೈಜ್ಞಾನಿಕ ಕಾಮಗಾರಿಯ ಕಾರಣ ಇಡಿ ಉತ್ತರ ಕನ್ನಡ ಜಿಲ್ಲೆ ನಲುಗಿಹೊಗಿದ್ದು ಈ ಕಾರಣ ಅಸಂಖ್ಯೃ ಸಾವು ನೋವುಗಳು ಸಂಬವಿಸುತ್ತಿದೆ
ಜಿಲ್ಲೆಯಲ್ಲಿ ಈ ಸಂಬಂದ ಸಾರ್ವಜನಿಕರು ಇಂತಹ ಅವೈಜ್ಞಾನಿಕ ಕಾಮಗಾರಿ ನಿಲ್ಲಿಸಿ ವೈಜ್ಞಾನಿಕವಾಗಿ ಕಾಮಗಾರಿ ನಡೆಸುವಂತೆ ಹೇಳುತ್ತಲೆ ಬರುತ್ತಿದ್ದಾರೆ ಮುರ್ಡೇಶ್ವರ ಉತ್ತರ ಕೊಪ್ಪ ಕ್ರಾಸ್ ಹಿಡಿದು ಭಟ್ಕಳದ ವಿವಿದ ಭಾಗದಲ್ಲಿ ಪ್ಲೈಓವರ ಗಟಾಗಳನ್ನು ನಿರ್ಮಾಣ ಮಾಡುವಂತೆ ಎಂಟು ವರ್ಷಗಳಿಂದ ಸಾರ್ವಜನಿಕರು ಬೇಡಿಕೆ ಇಡುತ್ತಲೆ ಬರುತ್ತಿದ್ದಾರೆ ಆದರೆ ಈ ಐ ಆರ್ ಬಿ ಮತ್ತು ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತನ್ನು ನಿಡದೆ ತನಗೆ ಮನಬಂದಂತೆ ಕಾಮಗಾರಿ ನಡೆಸುತ್ತಲೆ ಬರುತ್ತಿದೆ ಸಾರ್ವಜನಿಕರ ವಿರೋದದ ನಡುವೆಯೂ ಐ ಆರ್ ಬಿ ಕಂಪನಿ ಪ್ಲೈ ಓವರ ನಿರ್ಮಾಣ ಮಾಡದೆ ಮುರ್ಡೆಶ್ವರ ಉತ್ತರಕೊಪ್ಪ ಕ್ರಾಸ್ ಬಳಿ ಹೆದ್ದಾರಿ ಕಾಮಗಾರಿಗೆ ಮುಂದಾಗಿದೆ ಇದನ್ನು ಗಮನಿಸಿದ ಸಾರ್ವಜನಿಕರು ಪ್ರತಿಭಟನೆಗೆ ಇಳಿದಿದ್ದು ಪ್ಲೈಓವರ್ ನಿರ್ಮಾಣ ಮಾಡದೆ ನಾವು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲು ಬಿಡಲಾರೆವು ಪ್ಲೈಓವರ್ ನಿರ್ಮಾಣ ಮೊದಲು ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ ಈ ಸಂದರ್ಬದಲ್ಲಿ ಹೆದ್ದಾರಿ ಪ್ರಾದಿಕಾರದ ಪಿಡಿ ಜನರ ಮನವೋಲಿಸಲಿ ವಿಫಲರಾದರು ಕಾರಣ ಸಹಾಯಕ ಆಯುಕ್ತರಾದ ಡಾ ನಯನಾ ಅವರು ಕೂಡ ಜನರ ಮನವೊಲಿಸಲು ಪ್ರಯತ್ನಪಟ್ಟರು ಆದರೆ ಮೊದಲೆ ಈ ಐ ಆರ್ ಬಿ ಮತ್ತು ಹೆದ್ದಾರಿ ಪ್ರಾಧಿಕಾರದ ಸುಳ್ಳು ಆಶ್ವಾಸನೆ ಬೆಜವಾಬ್ದಾರಿತನದಿಂದ ರೋಸಿ ಹೊಗಿದ್ದ ಸಾರ್ವಜನಿಕರು ತಮ್ಮ ಪ್ಲೈಓವರ ನಿರ್ಮಾಣದ ಪಟ್ಟು ಸಡಿಲಿಸಲೆ ಇಲ್ಲಾ ಮೊದಲು ಪ್ಲೈಓವರ್ ನಿರ್ಮಾಣ ಮಾಡಿ ಮತ್ತೆ ರಸ್ತೆ ಕಾಮಗಾರಿ ಪ್ರಾರಂಬಿಸಿ ಎಂದು ಪ್ರತಿಭಟನೆಯ ಕಾವನ್ನು ಹೆಚ್ಚಿಸಿದರು ಇದ್ದರಿಂದ ಹೆದ್ದಾರಿ ಪ್ರಾಧಿಕಾರದ ಪಿಡಿ ಮತ್ತು ಐ ಆರ್ ಬಿ ಕಂಪನಿಯ ಇಂಜಿನಿಯರ್ ಹಾಗು ಸಿಬ್ಬಂದಿ ಮತ್ತು ಅಧಿಕಾರಿಗಳು ಪೆಚ್ಚು ಮೊರೆಯೊಂದಿಗೆ ಬಂದದಾರಿಗೆ ಸುಂಕವಿಲ್ಲ ಎಂದು ಹಿಂದಿರುಗಿದ ಘಟನೆ ನಡೆದಿದೆ
ಈ ಸಂದರ್ಬದಲ್ಲಿ ವಿವಿದ ಮುಖಂಡರು ಮತ್ತು ಸ್ಥಳಿಯರು ತಮ್ಮ ಆಕ್ರೋಶವನ್ನು ನಮ್ಮ ಕರಾವಳಿ ಸಮಾಚಾದರದ ಮುಂದೆ ವ್ಯಕ್ತಪಡಿಸಿದರು