ಮೀನುಗಾರಿಕೆ ಒಳನಾಡು ಜಲಸಾರಿಗೆ ಸಚಿವರ ನಾಯಕತ್ವದಲ್ಲಿ ನಡೆಯಲಿದೆ ವಿಶ್ವ ಮಿನುಗಾರಿಕೆ ಮತ್ತು ಮತ್ಸ್ಯ ಮೇಳ
ರಾಜ್ಯದ ಸಮಸ್ತ ಸಾರ್ವಜನಿಕರನ್ನು ಆಹ್ವಾನಿಸಿದ ಸಚಿವ ಮಂಕಾಳು ವೈದ್ಯ
ಭಟ್ಕಳ :ವಿಶ್ವ ಮೀನುಗಾರಿಕೆ ದಿನಾಚರಣೆ-2024” ಹಾಗೂ ರಾಜ್ಯ ಮಟ್ಟದ “ಮತ್ಸ್ಯಮೇಳ” ದಿನಗಣನೆ ನಡೆಯುತ್ತಿದ್ದು ಮುರ್ಡೆಶ್ವರ ಗಾಲ್ಪ ರೆಸಾರ್ಟಲ್ಲಿ ಸಕಲ ಪೂರ್ವ ತಯಾರಿ ನಡೆಯುತ್ತಿದ್ದು ಸಚಿವ ಮಂಕಾಳು ವೈದ್ಯರು ರಾಜ್ಯದ ಸಮಸ್ತ ಸಾರ್ವಜನಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ
ಮತ್ಸ್ಯಮೇಳ”ವು ಮುರುಡೇಶ್ವರದ ಆರ್.ಎನ್.ಎಸ್. ಗಾಲ್ಫ್ ಕ್ಲಬ್ ರೆಸಾರ್ಟ್ ನವೆಂಬರ್ 21,2024 ರಂದು ಸಂಜೆ 4:00 ಗಂಟೆಗೆ ಮೀನುಗಾರಿಕೆ ಬಂದರು ಹಾಗೂ ಒಳನಾಡು, ಜಲ ಸಾರಿಗೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ಎಸ್.ವೈದ್ಯ ನಾಯಕತ್ವದಲ್ಲಿ ಉದ್ಘಾಟನೆಯಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ವಿಶೇಷ ಆಹ್ವಾನಿತರಾಗಿ ಭಾಗವಹಿಸುತ್ತಾರೆ “ ಈ ಸಂದರ್ಭದಲ್ಲಿ ಹಾಗೂ ರಾಜ್ಯ ಸಂಪುಟ ದರ್ಜೆಯ ಎಲ್ಲಾ ಸಚಿವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರಾವಳಿಯ ಸುಂದರ ನಗರಿ ಮುರುಡೇಶ್ವರದಲ್ಲಿ “ಮತ್ಸ್ಯಮೇಳ-2024” ನಡೆಯುತ್ತಿದ್ದು, ರಾಜ್ಯ ಮತ್ತು ಕೇಂದ್ರ ಇಲಾಖೆಗಳ ಸುಮಾರು 60 ಮಳಿಗೆಗಳು, ಖಾಸಗಿ ಕೈಗಾರಿಕೆಗಳು, ಅಕ್ಷಾರಿಸ್ಟ್ ಗಳು ಮತ್ತು ಮೀನು ಕೃಷಿಗೆ ಅಗತ್ಯವಿರುವ ಪರಿಕರಗಳ ವಿತರಕರು ತಮ್ಮ ಉತ್ಪನ್ನಗಳು ಮತ್ತು ಚಟುವಟಿಕೆಗಳನ್ನು ಪ್ರದರ್ಶಿಸಲಿದ್ದಾರೆ. ಈ ಮೇಳದಲ್ಲಿ ಸುರಂಗ ಅಕ್ಕೇರಿಯಂ ಮತ್ತು ಅಲಂಕಾರಿಕ ಮೀನು ಪ್ರದರ್ಶನವು ನೂರಾರು ವಿಶಿಷ್ಟ ಮೀನು ಪ್ರಭೇದಗಳನ್ನು ಪ್ರದರ್ಶಿಸಲಾಗುತ್ತದೆ. ತಾಂತ್ರಿಕ ಗೋಷ್ಠಿಗಳನ್ನು ಆಯೋಜಿಸಲಾಗಿದ್ದು ಅಲ್ಲಿ ತಜ್ಞರು ಇತ್ತೀಚಿನ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬಗ್ಗೆ ಚರ್ಚೆ, ಸಂಜೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮತ್ಸ್ಯಮೇಳ-2024” ನ ಪ್ರಮುಖ ಆಕರ್ಷಣೆಗಳು:
ಅಕ್ವೇರಿಯಂ ಗ್ಯಾಲರಿ, ಸುರಂಗ ಅಕ್ವೇರಿಯಂ, ಸರ್ಕಾರಿ ಸಂಸ್ಥೆಗಳ ಮಳಿಗೆಗಳು, ಮೀನುಗಾರಿಕೆಗೆ ಸಂಬಂಧಿಸಿದ ಖಾಸಗಿ ಸಂಸ್ಥೆಗಳ ಮಳಿಗೆಗಳು, ಫೀಡ್ ಕಂಪನಿಗಳು, ಸಮುದ್ರ ಕಳೆ ಪ್ರದರ್ಶನ, ತಾಂತ್ರಿಕ ಗೋಷ್ಠಿಗಳು ಯಶಸ್ಸಿನ ಯಶೋಗಾಥೆಗಳು, ಮೀನು ಆಹಾರ ಮಳಿಗೆಗಳು, ಮನೋರಂಜನೆ ಅಲಂಕಾರಿಕ ಮೀನು ಮಾರಾಟ ನಡೆಯಲಿದೆ.
ಮೀನುಗಾರಿಕಾ ಕ್ಷೇತ್ರದ ಮಹತ್ವವನ್ನು ಗುರುತಿಸಿ ಮತ್ತು ಮೀನುಗಾರರ ನೈತಿಕ ಧೈರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಆದ್ದರಿಂದ ರಾಜ್ಯ, ಜಿಲ್ಲೆ, ತಾಲೂಕಿನ, ಸಮಸ್ತ ಸಾರ್ವಜನಿಕರು ಮತ್ತು ಮೀನುಗಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕು ಎಂದು ಮೀನುಗಾರಿಕೆ ಬಂದರು ಹಾಗೂ ಒಳನಾಡು, ಜಲ ಸಾರಿಗೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ಎಸ್.ವೈದ್ಯ ವಿನಂತಿಸಿಕೊಂಡಿದ್ದಾರೆ