ಡಕಾಯಿತರನ್ನು ಕಾಡಿನಲ್ಲಿ ಅಟ್ಟಾಡಿಸಿ ಹಿಡಿದ ಪೊಲೀಸರು

ಉತ್ತರ ಕನ್ನಡ : ಕರ್ನಾಟಕ ಗಡಿಯ ಅನಮೋಡ ಚೆಕ್ ಪೋಸ್ಟ್ ಸಮೀಪ ಇಬ್ಬರು ಡಕಾಯಿತರನ್ನು ಕಾಡಿನಲ್ಲಿ ಅಟ್ಟಾಡಿಸಿ ಪ ಬಂಧಿಸಲಾಗಿದೆ

ಗೋವಾದಿಂದ ಹುಬ್ಬಳ್ಳಿ ಕಡೆಗೆ ಐವರು ಕತರ್ನಾಕ್ ಡಕಾಯಿತರ ತಂಡ ಪ್ರಯಾಣಿಸುತ್ತಿರುವ ಮಾಹಿತಿ ಪಡೆದ ರಾಮನಗರ ಪೊಲೀಸರು . ತಕ್ಷಣ ಪಿ.ಎಸ್.ಐ. ಬಸರಾಜ ಮಬನೂರ ನೇತೃತ್ವದ ತಂಡ ಐವರಲ್ಲಿ ಇಬ್ಬರು ಡಕಾಯಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಡಕಾಯತರು ಚೆಕ್ ಪೋಸ್ಟ ಸಮೀಪ ಪೋಲೀಸರನ್ನು ನೋಡಿ ವಾಹನದಿಂದ ಇಳಿದು ಕಾಡಿನಲ್ಲಿ ಅಡಗಿ ಕುಳಿತಿದ್ದರು ಇದರ ಮಾಹಿತಿ ತಿಳಿದ ಪೊಲೀಸರು ಡಕಾಯಿತರನ್ನು ಅರಣ್ಯ ಪ್ರದೇಶದಲ್ಲಿ ಅಟ್ಟಾಡಿಸಿ ಬಂಧಿಸಿದ್ದು ಇನ್ನುಳಿದ ಮೂವರಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಗೋವಾದಲ್ಲಿ ಚಿನ್ನದ ಅಂಗಡಿಯೊಂದರಲ್ಲಿ ಕಳವು ಮಾಡಲು ಈ ತಂಡ ಸ್ಕೇಚ್ ಹಾಕಿತ್ತು ಆದರೆ ಪ್ಲಾನ್ ವರ್ಕ್ಔಟ್ ಆಗದೆ ವಾಪಸ್ ಅನಮೋಡದಿಂದ ವಾಪಸ್ಸಾಗುತ್ತಿದ್ದಾಗ ಪೊಲೀಸರ ಜಾಲಕ್ಕೆ ಸಿಕ್ಕಿ ಬಿದ್ದಿದ್ದಾರೆ.

ರಾಜಸ್ಥಾನ ಮೂಲದ ಗೋವರ್ಧನ ಬಾಬು ಸಿಂಗ್ ರಾಜಪುರೋಹಿತ್ ಮತ್ತು ಶ್ಯಾಮಲಾಲ ದೀಪರಾಮಜಿ ಮೇಘವಾಳ ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ ಲೋಡೆಡ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ

ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ ಇಲಾಖೆ ಮುಂದಿನ ತನಿಖೆ ಕೈಗೊಂಡಿದೆ

WhatsApp
Facebook
Telegram
error: Content is protected !!
Scroll to Top