ಖಾಸಗಿಯವರೊಬ್ಬರ ಬಹುಮಹಡಿ ಕಟ್ಟಡ ನಿರ್ಮಾಣದಿಂದ ಭಟ್ಕಳ ಕೊಟೇಶ್ವರ ನಿವಾಸಿಗಳ ಪ್ರಾಣಕ್ಕೆ ಕುತ್ತು

ಖಾಸಗಿ ಬಹುಮಹಡಿ ಕಟ್ಟಡ ಕಾಮಗಾರಿ ಸ್ಥಗಿತಗೋಳಿಸಲು ಹೇಳಿದ ಭಟ್ಕಳ ಪುರಸಭೆ

ಭಟ್ಕಳ : ತಾಲೂಕಿನ ಖಾಸಗಿ ವ್ಯಕ್ತಿಯೋರ್ವರು ಕೊಟೇಶ್ವರ ನಗರಕ್ಕೆ ತಾಗಿಕೊಡಿರುವ ತಮ್ಮ ಮೂರು ಗುಂಟೆ ಜಾಗದಲ್ಲಿ ಅಳತೆಗೆ ಮೀರಿ ಬಹುಮಹಡಿ ಕಟ್ಟಡ ಕಟ್ಟಲು ಮುಂದಾಗಿರುವ ಹಿನ್ನೆಲೆಯಲ್ಲಿ ಕೋಟೆಶ್ವರ ನಗರದ ನಿವಾಸಿಗಳ ಪ್ರಾಣಕ್ಕೆ ಕುತ್ತು ಉಂಟಾಗಿದ್ದು ಅಲ್ಲದೆ ಕನ್ನಡ ಶಾಲೆಯೋಂದು ಗುಡ್ಡ ಸಹಿತ ಕುಸಿಯುವ ಅಪಾಯಕ್ಕೆ ಎಂದುರಾಗಿರುವುದನ್ನು ಮನಗಂಡ ಪುರಸಭೆ ಖಾಸಗಿಯವರಿಗೆ ಕಟ್ಟಡ ಕಾಮಗಾರಿ ನಿಲ್ಲಿಸಲು ಹೇಳಿರುವುದು ತಿಳಿದು ಬಂದಿದೆ

ಮುಖ್ಯವಾಗಿ ಯಾವುದೆ ಜಾಗದ ಮಾಲಿಕವನ್ನು ಪಡೆಯಲು ನಾಮುಂದು ತಾಮುಂದು ಎಂದು ಸ್ಪರ್ದೆಗಿಳಿಯುವುದು ವಾಡಿಕೆ ಆದರೆ ಕಂದಾಯ ಇಲಾಖೆ ಮತ್ತು ಪುರಸಭೆಯ ಮದ್ಯ ಕೊಟೇಶ್ವರ ಜಾಗದ ಮಾಲಿಕತ್ವ ತಮ್ಮದಲ್ಲ ಇದು ನಮ್ಮ ಮಾಲಿಕತ್ವಕ್ಕೆ ಒಳಪಟ್ಟಿಲ್ಲ ಎಂದು ಕಿತ್ತಾಡುವುದು ನಾವು ಈ ಪ್ರಕರಣದಲ್ಲಿ ನೋಡಬಹುದಾಗಿದೆ ಇಲ್ಲಿರುವ ಖಾಸಗಿ ಜಾಗದ ಗಡಿಕಲ್ಲು ಈಗಾಗಲೆ ಮಾಯವಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಈ ಜಾಗದ ಗಡಿ ಗುರುತಿನ ಗೊಂದಲವನ್ನು ಹೋಗಲಾಡಿಸಲು , ಪುರಸಭೆ ಜಾಗದ ಸರ್ವೇ ಮಾಡುವಂತೆ ಸರ್ವೇ ಇಲಾಖೆಗೆ ಅರ್ಜಿಕೊಟ್ಟು ಒಂದು ತಿಂಗಳಾಗುತ್ತಿದ್ದರು ಸರ್ವೇ ಇಲಾಖೆ ಸರ್ವೆ ಮಾಡದೆ ತನ್ನ ಇಲಾಖೆಯ ಖುರ್ಚಿಯನ್ನಷ್ಷೆ ಬೆಚ್ಚಗೆ ಮಾಡುತ್ತಿರುವುದು ಇಲಾಖೆಯ ಕಾರ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾಕ್ಕೆ ಎಡೆ ಮಾಡಿಕೊಟ್ಟಿದೆ ಇದರಿಂದ ಪುರಸಭಾ ಮುಖ್ಯಾಧಿಕಾರಿಗಳು ಸರ್ವೇ ಕಾರ್ಯ ಮುಗಿದು ಜಾಗದ ಗೊಂದಲ ಪರಿಹಾರ ಆಗುವವರೆಗೆ ಖಾಸಗಿ ಬಹುಮಹಡಿ ಕಟ್ಟಡದ ಕಾಮಗಾರಿ ಸ್ಥಗಿತಗೋಳಿಸುವಂತೆ ಖಾಸಗಿ ವ್ಯೆಕ್ತಿಗೆ ಹೇಳಿದ್ದಾರೆ

ಒಟ್ಟಾರೆ ಈ ಪುರಸಭೆ ಮತ್ತು ಕಂದಾಯ ಇಲಾಖೆಯ ಮಧ್ಯದ ಗೊಂದಲ ಬೇಗ ಪರಿಹಾರವಾಗಿ ಖಾಸಗಿ ವ್ಯಕ್ತಿಯ ಮೂರುಗುಂಟೆ ಜಾಗದ ಗಡಿಗುರುತುಗಳು ಬೇಗ ನಡೆದು ಒಂದು ವೇಳೆ ಅಲ್ಲಿ ಕಟ್ಟುವ ಬಹುಮಹಡಿ ಕಟ್ಟಡವನ್ನು ಅಳತೆಗೆ ಮೀರಿ ಅನದಿಕ್ರತವಾಗಿ ಕಟ್ಟುತ್ತಿದ್ದರೆ ಆ ಕಟ್ಟಡವನ್ನು ಅಳತೆಗನುಗುಣವಾಗಿ ಕಟ್ಟುವಂತೆ ಮಾಡಿ ಅಮಾಯಕರ ಪ್ರಾಣ ಹಾಗು ಕನ್ನಡ ಶಾಲೆಯನ್ನು ರಕ್ಷಿಸುವ ಕೆಲಸ ಜವಾಬ್ದಾರಿಯನ್ನು ಹೊತ್ತ ಇಲಾಖೆ ಮಾಡಬೇಕು ಎನ್ನುವುದು ಸಾರ್ವಜನಿಕರ ಮಾತಾಗಿದೆ

WhatsApp
Facebook
Telegram
error: Content is protected !!
Scroll to Top