ತಾಲೂಕಿನ ಓಸಿ ಮಟ್ಕಾ ಗಾಂಜಾಗಳಂತಹ ಡ್ರಗ್ಸಗಳಿಗೆ ಕಡಿವಾಣ ಹಾಕುವುದಾಗಿ ಭರವಸೆ

ಭಟ್ಕಳ : ಜಿಲ್ಲೆಯಲ್ಲಿ ಅನದಿಕ್ರತ ಇಸ್ಪಿಟ್‌ ಕ್ಲಬ್ಗಳು ಓಸಿ ಮಟ್ಕಾಗಳಿಗೆ ಗಾಂಜಾ ಡ್ರಗ್ಸಗಳಂತ ಮಾರಕಗಳಿಗೆ ಕಡಿವಾಣ ಹಾಕುವ ಕ್ರಮಕ್ಕೆ ಬರವಸೆಯನ್ನು ನೀಡಿದರು ಹಾಗೆ ಈ ಕಾರ್ಯದಲ್ಲಿ ತಮ್ಮ ಸಹಕಾರದ ನಿರಿಕ್ಷೇಯಲ್ಲಿ ಇಲಾಖೆ ಇದೆ ಎಂದು ಮಾಧ್ಯಮ ವರ್ಗಕ್ಕೆ ಹೇಳಿದರು

ಈ ಸಂದರ್ಬದಲ್ಲಿ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತ ನಮ್ಮ ಉತ್ತರ ಕನ್ನಡ ಜಿಲ್ಲೆ ಶಾಂತಿ ಪ್ರೀಯರ ಹಾಗು ಸಭ್ಯರನಾಡಾಗಿದೆ ಇಲ್ಲಿ ಅಪರಾದದ ಪ್ರಮಾಣ ತುಂಬ ಕಡಿಮೆ ಪ್ರಮಾಣದಲ್ಲಿ ಹಾಗೆ ಭಟ್ಕಳ ತಾಲೂಕಿನಲ್ಲಿಯು ಕೂಡ ನಮ್ಮ ಪೋಲಿಸ್‌ ಇಲಾಖೆಯವರ ಶ್ರಮದ ಕಾರಣ ಕೋಮುಗಲಭೆಗಳು ಕೂಡ ಗಣನಿಯವಾಗಿ ಕಡಿಮೆಯಾಗಿರುವುದನ್ನು ನಾವು ನೋಡ ಬಹುದಾಗಿದೆ ಮುಂದೆಯು ಭಟ್ಕಳ ತಾಲೂಕಿನಲ್ಲಿ ಶಾಂತಿಯ ವಾತಾವರಣ ಮುಂದುವರಿಯಬೇಕು ತಾಲೂಕಿನಲ್ಲಿ ಶಾಂತಿಕದಡುವ ಪ್ರಯತ್ನ ಯಾರೆ ಮಾಡಿದ್ದಿದ್ದರು ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಹಾಗೆ ಜಿಲ್ಲೆ ಮತ್ತು ಭಟ್ಕಳ ತಾಲೂಕಿನಲ್ಲಿ ಅನಧಿಕ್ರತ ಇಸ್ಪಿಟ್‌ ಅಡ್ಡಾಗಳು ಮತ್ತು ಓಸಿ ಇಸ್ಪಿಟ್‌ ಗಾಂಜಾ ಡ್ರಗ್ಸಗಳಂತ ಮಾರಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ನನಗೆ ಕರೆ ಬರುತ್ತಿದ್ದು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲ್ಲಿದ್ದೆವೆ ಇಲಾಖೆ ಪ್ರತಿಯೋಬ್ಬರು ಈ ಅಕ್ರಮ ಚಟುವಟಿಕೆಯ ವಿರುದ್ದ ಕ್ರಮ ಕೈಗೊಳ್ಳ ಬೇಕು ಯಾವುದೆ ಅಧಿಕಾರಿ ಈ ಮಾರಕ ಚಟುವಟಿಕೆಗೆ ಸಹಕರಿಸಿದನ್ನು ನಾನು ಗಮನಿಸಿದಲ್ಲಿ ನನಗೆ ಮಾಹಿತಿ ಬಂದಲ್ಲಿ ಅದು ಒಂದು ವೇಳೆ ಋಜುವಾತಾದಲ್ಲಿ ಅಂತವರ ವಿರುದ್ದ ಸಂಸ್ಪೆನ್ಸನ್‌ ಮಾತ್ರವಲ್ಲದೆ ಅವರ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು ಹಾಗೆ ಮಾಧ್ಯಮಗಳು ಕೂಡ ಸತ್ಯ ಸಂಗತಿಯನ್ನಷ್ಷೆ ಪ್ರಸಾರ ಮಾಡಬೇಕು ಸುಳ್ಳು ಸುದ್ದುಯನ್ನು ಪ್ರಸಾರ ಮಾಡಿದ್ದಲ್ಲಿ ಅಂತವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು

ಈ ಸಂದರ್ಬದಲ್ಲಿ ನಗರ ಠಾಣಾ ಡಿ ವೈ ಎಸ್‌ ಪಿ , ಸಿ ಪಿ ಐ ಗ್ರಾಮಿಣ ಠಾಣಾ ಸಿಪಿ ಐ ಹಾಗು ಇತರ ಪೋಲಿಸ್‌ ಅಧಿಕಾರಿಗಳು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top