ರಾಜ್ಯದಲ್ಲಿನ ಬಂದರುಗಳು ಹೈಟೆಕ್ ಬಂದರುಗಳಾಗಿ ಪರಿವರ್ತನೆಯಾಗಲಿದೆ ಸಚಿವ ಮಂಕಾಳು ವೈದ್ಯ
ಭಟ್ಕಳ : ಮೀನುಗಾರಿಕಾ ವೃತ್ತಿ ಅನೇಕ ಸವಾಲುಗಳನ್ನು ಹೊಂದಿದ್ದು ಈ ವೃತ್ತಿಯಲ್ಲಿ ಅನೇಕ ಮೀನುಗಾರರು ಸಮುದ್ರ ಪಾಲಾಗಿದ್ದು ನಮ್ಮ ಕಣ್ಣ ಮುಂದಿದೆ ಇಂತಹ ಮೀನುಗಾರರ ಕಷ್ಟಕ್ಕೆ ಸಚಿವನಾಗಿ ನಾನು ಕೆಲಸ ಮಾಡುತ್ತಿದ್ದು ರಾಜ್ಯದಲ್ಲಿ ಮೀನುಗಾರಿಕಾ ಇಲಾಖೆಗೆ ಕೊಟ್ಯಾಂತರ ಅನುದಾನಗಳು ಸರಕಾರದ ವತಿಯಿಂದ ಮೀಸಲು ಇರಿಸಲಾಗಿದೆ
ಸಚಿವ ಮಂಕಾಳು ವೈದ್ಯರು ಮೀನು ಕ್ರಷೀಕರ ದಿನಾಚರಣೆಯಂದು ಮಾತನಾಡುತ್ತ ನಮ್ಮ ರಾಜ್ಯದ ಎಲ್ಲಾ ಬಂದರುಗಳು ಹೈಟೆಕ್ ಬಂದರುಗಳಾಗಿ ಪರಿವರ್ತನೆಯಾಗಲಿದೆ ಕೊಟ್ಯಾಂತರ ವೆಚ್ಚದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಿ 54 ಎಕ್ಕರೆ ಜಾಗದಲ್ಲಿ ಸಿ ಪುಡ್ ಪಾರ್ಕ ಅನ್ನು ಮಾಡಲಾಗುತ್ತದೆ ಇಲ್ಲಿ ಸಮುದ್ರ ಉತ್ಪನ್ನಗಳ ರಪ್ತುಗೆ ಮಿನು ಉತ್ಪನ್ನಗಳ ಮಾರಾಟ ಹಾಗು ಉದ್ಯೋಗ ಉದ್ಯಮಕ್ಕೆ ಒತ್ತು ನಿಡಲಾಗುತ್ತದೆ ಮುರ್ಡೆಶ್ವರದಲ್ಲೂ ಕೂಡ ಮಿನುಗಾರಿಕೆ ಮತ್ತು ಪ್ರವಾಸೋದ್ಯಮ ಅಭಿವೃದ್ದಿ ದೃಷ್ಟಿಯಲ್ಲಿ ಬಂದರು ಅಭಿವೃದ್ದಿಗೊಳಿಸಲಾಗುವುದು ಒಟ್ಟಾರೆ ಮೀನುಗಾರಿಕೆ ಒತ್ತು ನೀಡುವುದರ ಉದ್ದೇಶದಿಂದ ರಾಜ್ಯದಾಧ್ಯಂತ ಕೊಟ್ಯಾಂತರ ಅನುದಾನ ಈಗಾಗಲೆ ಮಿಸಲಿಟ್ಟಿದ್ದು ನಮ್ಮ ಸರಕಾರ ಅನೇಕ ಅಭಿವೃದ್ದಿ ಕಾರ್ಯವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು
ಈ ಸಂದರ್ಬದಲ್ಲಿ ವಿಠಲ್ ದೈಮನೆ ಅವರು ಮಾತನಾಡಿ ಮಿನುಗಾರಿಕೆ ಇಲಾಖೆ ಸಚಿವ ಮಂಕಾಳ ವೈದ್ಯರ ಅವದಿಯಲ್ಲಿ ಹಿಂದೆಂದೂ ಕಾಣದ ಅಬಿವೃದ್ದಿಯನ್ನು ಕಂಡಿದೆ ಮಾನ್ಯ ಸಚಿವರು ಮಿನುಗಾರರ ಕಷ್ಟ ಅರಿತು ಕೆಲಸ ಮಾಡುತ್ತಿದ್ದು ರಾಜ್ಯದಲ್ಲಿ ಮಿನುಗಾರರು ಮುಂದೆ ಅನೇಕ ಸೌಲಬ್ಯವನ್ನು ಪಡೆದು ತಮ್ಮ ಉದ್ಯಮವನ್ನು ಯಶಸ್ವಿಯಾಗಿ ನಡೆಸಲಿದ್ದಾರೆ ಎಂದು ಹೇಳಿದರು
ಈ ಸಂದರ್ಬದಲ್ಲಿ ಸಚಿವ ಮಂಕಾಳು ವೈದ್ಯರನ್ನು ಅವರು ಮಾಡಿರುವ ಅಭಿವೃದ್ದಿ ಕಾರ್ಯದಿಂದ ಸಂತುಷ್ಟರಾದ ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದರು
ಕಾರ್ಯಕ್ರಮದ ಕೊನೆಯಲ್ಲಿ ಶಿವಕುಮಾರ್ ಅವರು ಮಿನುಗಾರಿಕೆ ಮೀನು ಸಾಕಣಿ ಮೀನು ಉದ್ಯಮದ ಮಹತ್ವ ಮೀನು ಸೇವನೆಯಿಂದ ಆರೋಗ್ಯದ ಮೇಲಾಗುವ ಲಾಭ ಮುಂತಾದವುಗಳ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಗಾರವನ್ನು ನಡೆಸಿಕೊಟ್ಟರು
ಈ ಸಂದರ್ಬದಲ್ಲಿ ಮೀನುಗಾರಿಕಾ ಇಲಾಖಾ ದಿನೇಶ್ ಕುಮಾರ್ , ಬಬೀನ್ ಬೊಪಣ್ಣ ಜಂಟಿ ನಿರ್ದೇಶಕರು ಕಾರವಾರ , ವಿವೇಕ ಆರ್ ಜಂಟಿ ನಿರ್ದೇಶಕರು ಉಡುಪಿ, ಗಣೇಶ ಕೆ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮ, ಸಿದ್ದಯ್ಯ ಒಂಟಿ ನಿರ್ದೇಶಕರು ಮಂಗಳೂರು, ಮೀನು ಗಾರ ಸಂಕಷ್ಟ ಪರಿಹಾರ ನಿಧಿ ಸದಸ್ಯರಾದ ವೆಂಕಟರಮಣ ಸಣ್ಣಿ ಮನೆ ಮದನ್ ಕುಮಾರ್ . ಹಾಗೆ ವಿಠಲ್ ದೈ ಮನೆ ಉತ್ತರ ಕನ್ನಡ ಮೀನು ಮಾರಾಟ ಪೇಡರೇಶನ್ ಸದಸ್ಯರು, ಜಗದೀಶ ನಾಯ್ಕ ಬೆಳ್ಕೇ ಗ್ರಾಮ ಪಂಚಾಯತ್ ಅಧ್ಯಕ್ಷರು, ನಾರಾಯಣ ಮಂಜು ಮೋಗೇರ್ ಮುಂತಾದವರು ಉಪಸ್ಥಿತರಿದ್ದರು