ಸಾರ್ವಜನಿಕರ ಸಹಕಾರ ನಮ್ಮ ಕ್ಲಿನಿಕ್ ಅಭಿವೃದ್ದಿಗೆ ಸಹಕಾರ ಸಚಿವ ಮಂಕಾಳು ವೈದ್ಯರ ಹೇಳಿಕೆ
ಭಟ್ಕಳ : ಬೆಳಿಗ್ಗೆ 9:30ಕ್ಕೆ ಪ್ರಾರಂಭವಾಗುವ ನಮ್ಮ ಕ್ಲಿನಿಕ್ ಸಂಜೆ 4:30 ರವರೆಗೂ ತೆರೆದಿರುತ್ತದೆ. ನಮ್ಮ ಕ್ಲಿನಿಕ್ ನ ಕಾರಣಕ್ಕಾಗಿ ಜನರು ನೇರವಾಗಿ ತಾಲೂಕಾ ಆಸ್ಪತ್ರೆಗೆ ಹೋಗುವುದು ತಪ್ಪುತ್ತದೆ ಆರೋಗ್ಯದಲ್ಲಿ ಏರುಪೇರಾದರೆ ಮೊದಲು ಹತ್ತಿರವಿರುವ ನಮ್ಮ ಕ್ಲಿನಿಕ್ ಗೆ ತೆರಳಿ ಅಲ್ಲಿ ವೈದ್ಯರು ನೀಡುವ ಸಲಹೆಯ ಮೇರೆಗೆ ತಾಲೂಕಾ ಹಾಗೂ ಜಿಲ್ಲಾಸ್ಪತ್ರೆಗಳಿಗೆ ತೆರಳಬಹುದು ಎಂದು ಸಚಿವ ಮಂಕಾಳು ವೈದ್ಯರು ಹೇಳಿದರು.
ತಾಲೂಕಿನ ಜಾಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ನಮ್ಮ ಕ್ಲಿನಿಕ್ ನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಇಡೀ ಜಿಲ್ಲೆಯಲ್ಲಿ ಜಿಲ್ಲಾ ಹಾಗೂ ತಾಲೂಕಾ ಸರ್ಕಾರಿ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಎಲ್ಲಿಯೂ ಕೂಡ ಔಷದಿಗಾಗಿ ಚೀಟಿ ಬರೆದುಕೊಡುವ ಪದ್ಧತಿಯನ್ನು ನಾವು ರೂಢಿಸಿಕೊಂಡಿಲ್ಲ, ರೋಗಿಗಳಿಗೆ ಯಾವುದೇ ಔಷಧಿಯನ್ನು ಆಸ್ಪತ್ರೆಯೇ ನೇರವಾಗಿ ನೀಡುವ ವಾತಾವರಣ ನಿರ್ಮಿಸಿಕೊಟ್ಟಿದ್ದೇನೆ ಒಂದು ಚೀಟಿ ನೀಡುವ ಪದ್ದತಿ ಇದ್ದರೆ ಅದು ಖಂಡನಿಯ ಅದು ಆಗಬಾರದು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಶಿರಾಲಿಯ ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಬಾಲಚಂದ್ರ ಮೇಸ್ತಾ, ತಹಶಿಲ್ಧಾರ ನಾಗರಾಜ ನಾಯ್ಕಡ, ಸಹಾಯಕ ಆಯುಕ್ತೆ ಡಾ. ನಯನಾ ಮತ್ತಿತರರು ಇದ್ದರು.