ಪ್ರಾಣಾಪಾಯದಿಂದ ಪಾರಾದ ಯುವಕ
ಭಟ್ಕಳ: ತಾಲೂಕಿನ ಬೆಳ್ಕೆ ನ್ಯಾಯ ಬೆಲೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊರ್ವನಿಗೆ ನಾಗರ ಹಾವು ಕಡಿದಿದ್ದು ಯುವಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಗಾಯಾಳುವನು ಹೊನ್ನಪ್ಪ ನಾರಾಯಣ ನಾಯ್ಕ ಎಂದು ಎಂದು ತಿಳಿದು ಬಂದಿದೆ. ಈತ ಎಂದಿನಂತೆ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಗ್ರಾಹರಿಕೆ ಅಕ್ಕಿ ಕೊಡಲೆಂದು ಅಕ್ಕಿ ಚೀಲವನ್ನು ಹಿಡಿದಾಗ ಅಲ್ಲೇ ಚೀಲದ ಮೇಲೆ ನಾಗಪ್ಪ ಈತನಿಗೆ ಕಡಿದಿದೆ. ಬಳಿಕ ಆತನನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದು. ಈಗ ಯುವಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ಬಳಿಕ ಅಲ್ಲಿದ್ದ ನಾಗರ ಹಾವನ್ನು ಯುವಕನೊರ್ವ ಹಿಡಿದು ಕಾಡಿಗೆ ಬಿಟ್ಟಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ