ನನ್ನ ಕ್ಷೇತ್ರದ ಅಭಿವೃದ್ದಿಯ
ವಿಷಯದಲ್ಲಿ
ಯಾವುದೇ ರಾಜಿ ಇಲ್ಲ : ಸಚಿವ ಮಂಕಾಳು ವೈದ್ಯ
ಭಟ್ಕಳ : ನನ್ನನ್ನು ಮಂತ್ರಿಯನ್ನಾಗಿ ಮಾಡಿದ ಜನತೆಯ ಖುಣ ತೀರಿಸುವ ಸರದಿ ಈಗ ನನ್ನದ್ದು ಕಾರಣ ನನ್ನ ಕ್ಷೇತ್ರದ ಅಭಿವೃದ್ದಿಗೆ ನಾನು ಪ್ರಥಮ ಆದ್ಯತೆಯನ್ನು ನೀಡುತ್ತೆನೆ ಜನ ಸಾಮಾನ್ಯರ ಕಷ್ಟವನ್ನು ಪರಿಹರಿಸುವ ಕೆಲಸ ಮಾಡುತ್ತೆನೆ ಎಂದು ಹೇಳಿದರು.
ಜನ ಸಾಮಾನ್ಯರ ಕುಂದುಕೊರತೆಯನ್ನು ನೀಗಿಸುವ ಸದುದ್ದೇಶದಿಂದ ಸಚಿವ ಮಂಕಾಳು ವೈದ್ಯರು ತಮ್ಮ ಸ್ವಗ್ರಹದಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಈ ಸಂದರ್ಬದಲ್ಲಿ ನೂರಾರು ಜನ ಸಾರ್ವಜನಿಕರು ಸಚಿವ ಮಂಕಾಳು ವೈದ್ಯರಲ್ಲಿ ತಮ್ಮ ಕುಂದುಕೊರತೆಯನ್ನು ಹೇಳಿಕೊಂಡು ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡರು
ಈ ಸಂದರ್ಬದಲ್ಲಿ ಸಚಿವ ಮಂಕಾಳು ವೈದ್ಯರು ಮಾತನಾಡಿ ನನ್ನ ಕ್ಷೇತ್ರದ ಜನಗಳು ನನ್ನನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ ನಾನು ನನ್ನ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಯನ್ನು ಮಾಡುವುದರ ಮೂಲಕ ಜನತೆಯ ಖುಣ ತೀರಿಸಬೇಕಿದೆ ಈ ಹಿನ್ನೆಲೆಯಲ್ಲಿ ನಾನು ಕಾರ್ಯವನ್ನು ಮಾಡುತ್ತಿದ್ದೆನೆ ಎಂದು ಹೇಳಿದರು