ಜನ ಸಾಮಾನ್ಯರಿಗೆ ಸ್ಪಂದನೆ ದೊರೆತರೆ ಮಾತ್ರ ಜನ ಸ್ಪಂದನಾ ಕಾರ್ಯಕ್ರಮ ಸಾರ್ಥಕತೆ ಪಡೆದುಕೊಳ್ಳುತ್ತದೆ : ಸಚಿವರ ಹೇಳಿಕೆ

ನನ್ಮ ಬೆನ್ನಿಗೆ ನಿಂತ ಜನ ಸಾಮಾನ್ಯರನ್ನು ಯಾವತ್ತು ನಾನು ಮರೆಯಲಾರೆ ಸಚಿವರ :ಸಚಿವ ಮಂಕಾಳು ವೈದ್ಯ

ಭಟ್ಕಳ : ಬಡ ಸಾರ್ವಜನಿಕ ಸೇವೆ ಮಾಡಲು ನನಗೆ ನೀವುಗಳು ಅಮೂಲ್ಯ ಅವಕಾಶವನ್ನು ನಿಡಿದ್ದಿರಿ ಈ ಅವಕಾಶಕ್ಕೆ ನಾನು ಧನ್ಯವಾದವನ್ನು ಅರ್ಪಿಸುತ್ತೆನೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಸರಕಾರಿ ಸೌಲಬ್ಯ ದೊರೆಯುವಂತೆ ನಾನು ನೊಡಿಕೊಳ್ಳುತ್ತೆನೆ ಎಂದು ಬೆಳ್ಕೆಯಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಸಚಿವ ಮಂಕಾಳು ವೈದ್ಯರು ಹೇಳಿದರು

ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಮ್ಮನಕೇರಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಸಚಿವ ಮಂಕಾಳು ವೈದ್ಯರು ತಾಲೂಕ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡುತ್ತ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದರೆ ಮಾತ್ರ ಜನ ಸ್ಪಂದನಾ ಕಾರ್ಯಕ್ರಮಕ್ಕೆ ಒಂದು ಅರ್ಥ ಬರುತ್ತದೆ ನಾವು ಜನ ಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳುವುದೆ ಜನ ಸಾಮಾನ್ಯರ ಕುಂದುಕೊರತೆಯನ್ನು ನಿವಾರಿಸುವ ಉದ್ದೇಶಕ್ಕಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಬೇಕು ಎನ್ನುವುದು ನನ್ನ ಉದ್ದೇಶವಾಗಿರುತ್ತದೆ ನನ್ನ ಕ್ಷೇತ್ರದ ಜನ ಸಾಮಾನ್ಯ ಯಾವ ಸಂದರ್ಬದಲ್ಲೂ ಕೂಡ ನನ್ನನ್ನು ಸಂಪರ್ಕಿಸ ಬಹುದಾಗಿದೆ ಜನ ಸಾಮಾನ್ಯರ ಸೇವೆ ಮಾಡುವುದೆ ನನ್ನ ಕರ್ತವ್ಯ ನನಗೆ ಅಧಿಕಾರವನ್ನು ಕೊಟ್ಟ ನಿಮ್ಮ ಕೆಲಸ ಮಾಡುವುದು ನನ್ನ ಕರ್ತವ್ಯ ಯಾವುದೆ ಸಮಸ್ಯೆಗಳಿದ್ದರು ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದು ಹೇಳಿದರು .

ಕಾರ್ಯಕ್ರಮದಲ್ಲಿ ಸಚಿವ ಮಂಕಾಳು ವೈದ್ಯರ ಮುಂದೆ ಸಾವಿರಾರು ಸಾರ್ವಜನಿಕರು ತಮ್ಮ ಅಳಲನ್ನು ಹೇಳಿಕೊಂಡು ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡರು .

ಈ ಸಂದರ್ಬದಲ್ಲಿ ಸ್ಥಳಿಯ ಸಾರ್ವಜನಿಕರ ವತಿಯಿಂದ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು

ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತರಾದ ಡಾ ನಯನಾ ತಾಲೂಕ ತಹಶಿಲ್ದಾರ್ ನಾಗರಾಜ್ ನಾಯ್ಕಡ್, ಬೆಳ್ಕೇ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ ನಾಯ್ಕ ,ಪಂಚಾಯತ್ ಸದಸ್ಯರಾದ ಪಾಂಡು ನಾಯ್ಕ ಹಾಗು ಇನ್ನಿತರರು ಉಪಸ್ಥಿತರಿದ್ದರು .

WhatsApp
Facebook
Telegram
error: Content is protected !!
Scroll to Top