ಪ್ರತಿ ಬಾರಿಯಂತೆ ಈ ಭಾರಿಯು ಸಾರ್ವಜನಿಕರಿಗೆ ಪಜಿತಿ ತಂದಿಟ್ಟ ರಾಷ್ಟಿಯ ಹೆದ್ದಾರಿ ಕಾಮಗಾರಿ
ಹೊನ್ನಾವರದಲ್ಲಿ ಸುರಿದ ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 206 ರ ಭಾಸ್ಕೆರಿ ಬಳಿ ಗುಡ್ಡ ಕುಸಿದು ದೊಡ್ಡ ಕಲ್ಲುಬಂಡೆ ಹೆದ್ದಾರಿಗೆ ಉರುಳಿದ್ದ ಸಾರ್ವಜನಿಕ ವಾಹನ ಸಂಚಾರಕ್ಕೆ ಪಜಿತಿ
ಈ ಗುಡ್ಡಕುಸಿತದಿಂದ ಹೊನ್ನಾವರ -ಸಾಗರ-ಬೆಂಗಳೂರು ಮಾರ್ಗ ಬಂದ್ ಆಗಿದ್ದು ಬಸ್ ಹಾಗೂ ಭಾರಿ ವಾಹನ ಸಂಚಾರಕ್ಕೆ ತಡೆಯುಂಟಾಗಿದೆ.
ರಸ್ತೆಯ ಒಂದು ಭಾಗದಲ್ಲಿ ದ್ವಿಚಕ್ರ ವಾಹನ ತೆರಳು ಅವಕಾಶ ಮಾತ್ರ ಇದ್ದು ಇದೀಗ ಬೆಂಗಳೂರು ಕಡೆ ತೆರಳುವ ಜನರಿಗೆ ಸಮಸ್ಯೆಯಾಗಿದೆ.
ಸದ್ಯ ಹೆದ್ದಾರಿ ಗೆ ಬಿದ್ದ ಕಲ್ಲುಬಂಡೆಯನ್ನು ತೆರವು ಗೊಳಿಸಲು ತಡವಾಗುತಿದ್ದು ಕಾರ್ಯಾಚರಣೆ ಪ್ರಾರಂಭವಾಗಬೇಕಿದೆ. ಆದರೇ ಗುಡ್ಡದ ಭಾಗದಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆ ಇದ್ದು ಕಾರ್ಯಾಚರಣೆಗೆ ವಿಘ್ನವಾಗಿದೆ.
ಈ ರಾಷ್ಟ್ರಿಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಯಾವಾಗಲು ಒಂದಿಲೊಂದು ಸಮಸ್ಯೆಯನ್ನು ತಂದಿಡುತ್ತಿದ್ದು ಸಾರ್ವಜನಿಕರ ಇವರ ಈ ಕಾಮಗಾರಿಯ ಕಾರಣ ಹೈರಾಣಾಗಿ ಹೊಗಿರುವುದಂತು ಕಟು ಸತ್ಯ
ಸಚಿವ ಮಂಕಾಳು ವೈದ್ಯರು ಈ ಹಿಂದೆ ಕಾರವಾರದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಐ ಆರ್ ಬಿ ರಸ್ತೆ ಕಾಮಗಾರಿಯ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ್ದು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ
ಒಟ್ಟಾರೆ ಈ ಐ ಆರ್ ಬಿ ಕಾಮಗಾರಿ ಎಂದು ಮುಗಿಯುದೋ ತಾವು ಯಾವಾಗ ನೆಮ್ಮದಿಯಿಂದ ಬದುಕ ಬಹುದೆನೋ ಎಂದು ಸಾರ್ವಜನಿಕರು ಪರಿತಪಿಸುತ್ತಿದ್ದಾರೆ