ಏಳು ತಿಂಗಳ ಮಗುವಿನ ಅಪಹರಣ ದೂರು ದಾಖಲು

ಮಕ್ಕಳ ಮಾರಾಟ ಜಾಲದ ಶಂಕೆ

ಭಟ್ಕಳ: ಕಳೆದ 8 ತಿಂಗಳ ಹಿಂದೆ ತನ್ನ ಹೆಂಡತಿ ತಾಯಿಯ ಅಂತ್ಯ ಸಂಸ್ಕಾರಕ್ಕೆ ಬಂದು ಪರಿಚಯ ಮಾಡಿಕೊಂಡ ಭಟ್ಕಳ ಮೂಲದ ಓರ್ವ ಗಂಡಸು ಹಾಗೂ ಇಬ್ಬರು ಹೆಂಗಸು ನಮ್ಮನು ದಾಂಡೇಲಿಯಿಂದ ಭಟ್ಕಳಕ್ಕೆ ಕರೆಸಿಕೊಂಡು ನಮ್ಮ 7 ತಿಂಗಳ ಮಗುವನ್ನು ಅಪಹರಣ ಮಾಡಿದ್ದಾರೆ ಎಂದು ಮಗನಿನ ತಂದೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ದಾಂಡೇಲಿ ಮೂಲದ ಹುಸೇನಸಾಬ್ ಎನ್ನುವವರು ಪ್ರಕರಣ ದಾಖಲಿಸಿದ್ದು. ಕಳೆದ 8 ತಿಂಗಳ ಹಿಂದೆ ತನ್ನ ಹೆಂಡತಿ ತಾಯಿಯ ಮೃತ ಪಟ್ಟಾಗ ಭಟ್ಕಳ ಮೂಲದ ಓರ್ವ ಓರ್ವ ಗಂಡಸು ಹಾಗೂ ಓರ್ವ ಹೆಂಗಸು ಅಂತ್ಯ ಸಂಸ್ಕಾರಕ್ಕೆ ಬಂದವರು ತಮ್ಮನ್ನು ಪರಿಚಯ ಮಾಡಿಕೊಂಡು. ನಮಗೆ ಸಾಂತ್ವಮ ಹೇಳಿ ಅವರ ಮೊಬೈಲ್ ನಂಬರ ನೀಡಿ ಹೋಗಿದ್ದರು. ಬಳಿಕ ನಮಗೆ ಕರೆ ಮಾಡಿ ಒಂದು ದಿನ ಭಟ್ಕಳಕ್ಕೆ ಬಂದು ಹೋಗುವಂತೆ ಒತ್ತಾಯ ಮಾಡುತ್ತಿದ್ದರು. ಕಾರಣ ನಾವು ಜೂನ್ 18 ರ ಸಂಜೆ 6 ಗಂಟೆಗೆ ದಾಂಡೇಲಿಯಿಂದ ಹೊರಟು ರಾತ್ರಿ 10 ಗಂಟೆಗೆ ಭಟ್ಕಳ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಆಲ್ ಖಲೀಜ್ ಹೋಟೆಲ್ ಬಳಿ ಬಂದು ಮೊಬೈಲ್ ಗೆ ಕರೆ ಮಾಡಿದಾಗ ಅಂತ್ಯ ಸಂಸ್ಕಾರಕ್ಕೆ ಬಂದ ಓರ್ವ ಗಂಡಸು ಹಾಗೂ ಓರ್ವ ಹೆಂಗಸಿನೊಂದಿಗೆ ಇನ್ನೋರ್ವ ಹೆಂಗಸುರು ಒಟ್ಟು
ಮೂವರು ಬಂದು ನಮ್ಮನ್ನು ಮಾತನಾಡಿಸಿ ತನ್ನ ಹೆಂಡತಿ ಬಳಿ ಇದ್ದ 7 ತಿಂಗಳ ಮಗುವನ್ನು ಎತ್ತಿಕೊಂಡು ಈಗ ಬರುತ್ತೇವೆ. ನೀವು ಎಲ್ಲಿಯೇ ಇರಿ ಎಂದು ಹೋದವರಿಗೆ ಜೂನ್ 20 ರಂದು ಅವರಿಗೆ ಕರೆ ಮಾಡಿದಾಗ ತಾವೇ ಮಗುವನ್ನು ಕಡೆದುಕೊಂಡು ಬರುತ್ತೇವೆ ಎಂದು ಹೇಳಿನಂತರ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ನಂತರ ಜೂನ್ 21 ರ ಮಧ್ಯಾಹ್ನ 3.30ಕ್ಕೆ ನಮ್ಮ ಮೊಬೈಲ್‌ಗೆ ವಿಡಿಯೋ ಕರೆ ಮಾಡಿ ಮಗುವನ್ನು ತೊರಿಸಿ ಮಗು ಆರಾಮವಾಗಿ ಇದೆ ಚಿಂತೆ ಬೇಡ ನಿಮ್ಮ ಮಗುವನ್ನು ತಂದು ಕೊಡುತ್ತೇವೆ ಎಂದು ಹೇಳಿ ಪುನಃ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ.

ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಮೂವರ ವ್ಯಕ್ತಿಗಳ ವಿರುದ್ಧ ಮಗುವನ್ನು ಅಪಹರಣ ಮಾಡಿರುವ ಕುರಿತು ಪ್ರಕರಣ ದಾಖಲಾಗಿದೆ

WhatsApp
Facebook
Telegram
error: Content is protected !!
Scroll to Top