ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಬೈತಖೋಲ್ ಮೀನುಗಾರಿಕೆ ಬಂದರಿನ ಬಳಿ ಕುಂದಾಪುರ ಮೂಲದ ವ್ಯಕ್ತಿ ಓರ್ವನ ಶವ ಪತ್ತೆಯಾಗಿದೆ.
ಕುಂದಾಪುರ ಮೂಲದ ಯೋಗೇಶ ಟಿ.ಆರ್ (23) ಮೃತ ವ್ಯಕ್ತಿಯಾಗಿದ್ದಾನೆ. ಇಂದು ಬೆಳಿಗ್ಗೆ ಸಮುದ್ರದಲ್ಲಿ ಮೃತ ದೇಹ ತೆಲುತ್ತಿರುವುದನ್ನ ಕಂಡ ಸ್ಥಳೀಯ ಮೀನುಗಾರರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.ಬಳಿಕ ಸ್ಥಳಕ್ಕೆ ಬಂದ ಕಾರವಾರ ನಗರ ಠಾಣೆಯ ಪೊಲೀಸರು ಮೃತ ದೇಹವನ್ನ ಸಮುದ್ರದಿಂದ ಮೇಲಕ್ಕೆತ್ತಿ ಪರಿಶೀನೆ ನಡೆಸಿದ್ದಾರೆ.