ಭಟ್ಕಳ ಚನ್ನಪಟ್ಟಣ ಹನುಮಂತ ದೇವಸ್ಥಾನ ವರಾಂಡದಲ್ಲಿ ಅಯ್ಯೋದ್ಯ ರಾಮಮಂದಿರ

ರಾಮ ಮಂದಿರವನ್ನು ಕಣ್ತುಂಬಿಕೊಂಡ ಭಕ್ತಾಧಿಗಳು

ಭಟ್ಕಳ : ತಾಲೂಕಿನ ಚನ್ನಪಟ್ಟಣ ಹನುಮಂತ ದೇವಸ್ಥಾನದ ಒಳಬಾಗದಲ್ಲಿ ಅಯೋದ್ಯ ರಾಮ ಮಂದಿರದ ಮಾದರಿಯಲ್ಲಿ ಒಂದು ಭವ್ಯ ಪ್ರತಿಕ್ರತಿಯನ್ನು ಚಿಕ್ಕದಾಗಿ ಅತಿ ಆಕರ್ಷಕವಾಗಿ ನಿರ್ಮಿಸಲಾಗಿದ್ದು ಭಕ್ತಾದಿಗಳು ದೂರದ ಅಯ್ಯೋದ್ಯಯಲ್ಲಿರುವ ರಾಮಮಂದಿರವನ್ನು ಭಟ್ಕಳ ಹನುಮಂತ ದೇವಸ್ಥಾನದಲ್ಲೆ ಸ್ಥಾಪಿತವಾಗಿರು ರಾಮಮಂದಿರ ಪ್ರತಿಕ್ರತಿಯಲ್ಲೆ ನೋಡಿ ಹರ್ಷವನ್ನು ಹಾಗು ಭಕ್ತಿಪರವಶತೆಯನ್ನು ತಲುಪುತ್ತಿದ್ದಾರೆ

ಹೌದು ವೀಕ್ಷಕರೆ ನಮ್ಮ ಸನಾತನ ಧರ್ಮದ ಪ್ರಕಾರ ನಾವು ಗಾಳಿ ಬೆಳಕು ಅಗ್ನಿ ಭೂಮಿ ಅಷ್ಟೆಕ್ಕೆ ನಮ್ಮ ಸುತ್ರಮುತ್ತಲಿರು ಪ್ರಕ್ರತಿ ಮಾತೆಯಲ್ಲಿ ನಾವು ಆ ಭಗವಂತನನ್ನು ನೊಡುತ್ತೆವೇ ನಮ್ಮ ಸನಾತನ ಧರ್ಮ‌ ಗ್ರಂಥ ಭಗವದ್ಗಿತೆಯಲ್ಲಿ ಪ್ರತಿಯೊಂದು ಜೀವದಲ್ಲೂ ಭಗವಂತನಿದ್ದಾನೆ ಎಂದು ಎಲ್ಲವನ್ನು ಬಲ್ಲ ಆ ಶ್ರೀ ಕ್ರಷ್ಣ ಪರಮಾತ್ಮ ಹೇಳಿದ್ದಾನೆ ಇದಕ್ಕೆ ಮಾದರಿ ಎನ್ನುವಂತೆ ಅಯ್ಯೋದ್ಯಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ

ವೀಕ್ಷಕರೆ ನಾನು ಯಾಕೆ ಇಷ್ಟೆಲ್ಲ ಪೀಠಿಕೆ ಹಾಕುತ್ತಿದ್ದೆನೆ ಎಂದರೆ ತುಮಕುರು ಜಿಲ್ಲೆಯ ವಿನಯ ರಾಮ ಎಂಬ ರಾಮ ಭಕ್ತರೊಬ್ಬರು ರಾಮನ ಹಾಗು ರಾಮ ಮಂದಿರದ ಬಗ್ಗೆ ಸಂಪೂರ್ಣ ವಿವರವನ್ನು ದೇಶದಾಧ್ಯಂತ ತಿಳಿಸಿಕೊಡುವ ಉದ್ದೇಶದಿಂದ ಉತ್ತರ ಪ್ರದೇಶದ ಅಯ್ಯೋದ್ಯೆ ರಾಮಮಂದಿರದ ತದ್ರುಪವಿರುವ ಚಿಕ್ಕ ಹಾಗು ಸುಂದರವಾದ ಮರದ ಮಂದಿರದ ಮಾದರಿಯನ್ನು ತೆಗೆದುಕೊಂಡು ರಾಜ್ಯ ಹಾಗು ದೇಶದಾಧ್ಯಂತ ಸಂಚರಿಸುತ್ತಿದ್ದಾರೆ ಸದ್ಯ ಇವರು ನಮ್ಮ ಭಟ್ಕಳದಲ್ಲಿದ್ದು ತಾಲೂಕಿನ ಪಟ್ಟಣಹನುವಂತ ದೇವಸ್ಥಾನದಲ್ಲಿ ಅಯ್ಯೋದ್ಯ ರಾಮಮಂದಿರದ ಪ್ರತಿಕ್ರತಿಯನ್ನು ಸ್ಥಾಪಿಸಿದ್ದರೆ ಈ ಮಂದಿರ ನೋಡಲು ಎಷ್ಟು ಸುಂದರವಾಗಿದೆ ಎಂದರೆ ದೂರದ ಅಯ್ಯೋದ್ಯೆಯ ರಾಮ ಮಂದಿರ ಭಟ್ಕಳದಲ್ಲೆ ಬಂದಿದೆಯೆನೊ ಎಂಬಂತ ಭಕ್ತಾದಿಗಳು ಅದನ್ನು ನೋಡಿ ಭಕ್ತಿ ಪರವಶತೆಯಿಂದ ಕಣ್ಣಿಗೊತ್ತಿಕೊಳ್ಳುತ್ತಿದ್ದಾರೆ .

ಈ ಬಗ್ಗೆ ರಾಮ ಭಕ್ತ ವಿನಯ ರಾಮ ಅವರು ಮಾತನಾಡಿ ನಮ್ಮ ಉದ್ದೇಶ ಸನಾತನ ಧರ್ಮದ ರಾಮ ಹಾಗು ಆತನ ಹಿನ್ನೆಲೆ ಆತನ ಆದರ್ಶಗಳು ರಾಮ ಮಂದಿರದ ಇತಿಹಾಸ ಸನಾತನ ಭಾರತದ ಪ್ರತಿಯೊಬ್ಬರಿಗೂ ತಲುಪ ಬೇಕು ಎನ್ನುವುದಾಗಿದೆ ಕಾರಣ ನಾವು ರಾಜ್ಯ ಹಾಗು ದೇಶದಾಧ್ಯಂತ ರಾಮ‌ಮಂದಿರದ ಪ್ರತಿಕ್ರತಿಯೊಂದಿಗೆ ಸಂಚರಿಸುತ್ತಿದ್ದೇವೆ ಎಂದು ಹೇಳಿದರು

ವೀಕ್ಷಕರೆ ನಮ್ಮ ಸನಾತನ ಧರ್ಮ ಪರೋಪಕಾರಂ ಇದಂ ಶರೀರಂ ಎಂದು ಹೇಳುತ್ತದೆ ನಮ್ಮ ರಾಮ ಭಕ್ತರಾದ ವಿನಯ ರಾಮರು ಕೂಡ ಇದೆ ಕೆಲಸವನ್ನು ಮಾಡುತ್ತಿದ್ದಾರೆ ಇವರ ಈ ದೇವರ ಕೆಲಸಕ್ಕೆ ಮರ್ಯಾದಾಪುರುಷೋತ್ತಮನಾದ ಶ್ರೀ ರಾಮಚಂದ್ರ ಪರಮಾತ್ಮನು ಸಾಕ್ಷಾತ್ ಸಹಾಯ ಮಾಡಲಿ ಎಂದು ನಮ್ಮ ಕರಾವಳಿ ಸಮಾಚಾರವು ಹಾರೈಸುತ್ತದೆ

WhatsApp
Facebook
Telegram
error: Content is protected !!
Scroll to Top