ಮಾದರಿಯಾದ ಗ್ರಾಮ ಪಂಚಾಯತ್
ಭಟ್ಕಳ : ತಾಲೂಕಿನಲ್ಲಿ ಮಾದೇವ ತಿಮ್ಮಯ್ಯ ನಾಯ್ಕ ಎಂಬ ವೃದ್ದರು ಬಂದು ಬಾಂದವರಿಲ್ಲದೆ ಅನಾಥರಾಗಿ ಪರಿತಾಪ ಪಡುತ್ತಿರುವಾಗ ಶಿರಾಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಸ್ಕರ್ ದೈಮನೆಯವರ ಮುಂದಾಳತ್ವದಲ್ಲಿ ವೃದ್ದರನ್ನು ಸಿದ್ದಾಪುರದ ಪುನಿತ್ ರಾಜಕುಮಾರ್ ಅನಾಥಾಶ್ರಮಕ್ಕೆ ಸೇರಿಸಿ ಅವರಿಗೆ ನೆಲಕಲ್ಪಿಸಿ ನೇರವಾದ ಘಟನೆ ತಾಲೂಕಿನಲ್ಲಿ ನಡೆದಿದೆ.
ಹೌದು ವಿಕ್ಷಕರೆ ಅನಾಥೊ ದೈವ ರಕ್ಷಕ ಯಾವುದೆ ಜೀವ ಅನಾಥರಾಗಿ ಭಾದೆ ಪಡುತ್ತಿದ್ದರೆ ಭಗವಂತ ಅದನ್ನು ಸಹಿಸಿಕೊಳ್ಳುವುದಿಲ್ಲ ಆತ ಯಾವುದಾದರು ಒಂದು ಮಾರ್ಗದಲ್ಲಿ ಅಂಥವರನ್ನು ರಕ್ಷಿಸುವ ಕಾರ್ಯವನ್ನು ಮಾಡುತ್ತಾನೆ ಇದಕ್ಕೆ ಪುಷ್ಟಿಕೊಡುವಂತೆ ಭಟ್ಕಳ ತಾಲೂಕಿನಲ್ಲಿ ಮಾದೇವ ತಿಮ್ಮಯ್ಯ ನಾಯ್ಕ ಎಂಬ ವೃದ್ದರೋರ್ವರು ಅನಾಥರಾಗಿ ತುತ್ತನ್ನಕ್ಕೂ ಕಷ್ಟ ಪಡುತ್ತಿರುವ ಕರುಣಾಜನಕ ಸ್ಥಿತಿಯನ್ನು ತಲುಪಿದ್ದರು ಈ ಸಂದರ್ಬದಲ್ಲಿ ಶಿರಾಲಿ ಗ್ರಾಮ ಪಂಚಾಯತ್ ಇವರ ನೇರವಿಗೆ ಬಂದಿದೆ ಇವರನ್ನು ಗುರುತಿಸಿ ಜಿಲ್ಲೆಯ ಸಿದ್ದಾಪುರದ ಪುನಿತ್ ರಾಜಕುಮಾರ್ ಅನಾಥ ಆಶ್ರಮಕ್ಕೆ ಇವರನ್ನು ಸೇರಿಸಿ ಮಾನವಿಯತೆಯನ್ನು ಮೇರೆದಿದೆ
ವಿಕ್ಷಕರೆ ನಾವು ಯಾವುದೆ ಕಾರ್ಯವನ್ನು ಮಾಡಿದ್ದರು ಅದನ್ನು ಆ ಭಗವಂತ ನಮಗೆ ಹತ್ತು ಪಟ್ಟಾಗಿ ನಮಗೆ ಹಿಂತಿರುಗಿಸುತ್ತಾನೆ ಎನ್ನುವುದು ಸತ್ಯ ಅದು ಒಳ್ಳೆಯ ಕಾರ್ಯವಾಗಿರಲಿ ಕೆಟ್ಟ ಕಾರ್ಯವಾಗಿರಲಿ ಆತ ಅದನ್ನು ದುಪ್ಪಟ್ಟಾಗಿಸುತ್ತಾನೆ ಈಗ ಶಿರಾಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಸ್ಕರ್ ದೈಮನೆಯವರು ಹಾಗು ಅವರು ಮಾಡಿರುವ ಕಾರ್ಯ ಮಾನವಿಯ ನೆಲೆಯನ್ನು ಹೊಂದಿದೆ ಅವರ ತಂಡಕ್ಕೆ ಒಳ್ಳೆಯದ್ದೆ ಆಗಲಿ ಎನ್ನುವುದು ಪ್ರಜ್ಞಾವಂತರ ಮಾತಾಗಿದೆ
ಈ ಸಂದರ್ಬದಲ್ಲಿ ಅನಾಥಶ್ರಮ ದ ಶ್ರೀ ನಾಗರಾಜ್ ನಾಯ್ಕ್ ದಂಪತಿಗಳಿಗೆ ಹಾಗೂ ಲ ಈ ಕಾರ್ಯಕ್ಕೆ ಜೊತೆಯಾಗಿ ನಿಂತ ಪ್ರಭಾಕರ್ ನಾಯ್ಕ್ ಚಿತ್ರಾಪುರ, ರಾಮ ನಾಯ್ಕ್ pdo ಶಿರಾಲಿ,, ಹಾಗೂ ನಿತ್ಯ ಆಹಾರ ಪೂರೈಸಿದ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು