ಭಟ್ಕಳದಲ್ಲಿ ರಸ್ತೆಗೆ ಬ್ಯಾರಿಕೇಡ್ ಹಾಕಿದ ಪೋಲಿಸ್ ಇಲಾಖೆ

ಭುಗಿಲೆದ್ದ ಸಾರ್ವಜನಿಕರ ಆಕ್ರೋಶ

ಯತಾ ಸ್ಥಿತಿ ಕಾಪಾಡುವಂತೆ ಹೇಳಿದ ಸಹಾಯಕ ಆಯುಕ್ತೆ ಡಾ ನಯನಾ

ಭಟ್ಕಳ ತಾಲೂಕಿನ ಪೋಲಿಸ್ ಕಾಟ್ರಸ್ ಪಕ್ಕದಲ್ಲಿರುವ ರಸ್ತೆಗೆ ಪೋಲಿಸ್ ಇಲಾಖೆ ಏಕಾಏಕಿ ಬ್ಯಾರಿಕೇಡ್ ಹಾಕಿದ್ದು ಸ್ಥಳಿಯ ಸಾರ್ವಜನಿಕರು ತಮಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು ಈ ಹಿನ್ನೆಲೆಯಲ್ಲಿ ತಾಲೂಕ ತಹಶಿಲ್ದಾರರು ಸದ್ಯ ಯತಾಸ್ಥಿತಿ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಹೌದು ವೀಕ್ಷಕರೆ ಪೋಲಿಸ್ ಕಾಟ್ರಸ್ ಪಕ್ಕದಲ್ಲಿರುವ ರಸ್ತೆಯನ್ಬು ಸಾರ್ವಜನಿಕರು ತಮ್ಮ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದರು ಆದರೆ ಈ ಪೋಲಿಸ್ ಇಲಾಖೆ ಇದು ನಮ್ಮ ಪೋಲಿಸ್ ಕ್ರಾಟ್ರಸ್ಸಿಗೆ ಸಂಬಂದಿಸಿದ ರಸ್ತೆ ಆದ್ದರಿಂದ ಇಲ್ಲಿ ವಾಹನ ತಿರುಗಾಡುವಂತಿಲ್ಲ ಎಂದು ರಸ್ತೆಗೆ ಅಂದಾಜು ಏಳರಿಂದ ಎಂಟು ಬ್ಯಾರಿಕೇಡಗಳನ್ನು ಅಡ್ಡಲಾಗಿ ಹಾಕಿದ್ದಾರೆ ಇದರಿಂದ ಸಾರ್ವಜನಿಕರು ತಮಗೆ ತೊಂದರೆಯಾಗುತ್ತದೆ ನಮ್ಮ ಮಕ್ಕಳ ಶಾಲಾ ವಾಹನಗಳು ಮಕ್ಕಳನ್ನು ಕರೆದೊಯ್ಯಲು ಸಾಧ್ಯವಾಗುತ್ತಿಲ್ಲಾ ಅಲ್ಲದೆ ತುರ್ತು ಪರಿಸ್ಥಿತಿಗಳಲ್ಲಿ ಆ್ಯಂಬುಲೆನ್ಸ ಮೂಲಕ ರೊಗಿಗಳನ್ನು ಸಾಗಿಸಲು ಪರದಾಡಬೇಕಾಗುತ್ತದೆ ಎಂದು ಆಕ್ರೋಶಗೊಂಡು ಬೀದಿಗೀಳಿದು ಪ್ರತಿಭಟನೆ ನಡೆಸಿದ್ದಾರೆ.

ಈ. ಹಿನ್ನೆಲೆಯಲ್ಲಿ ತಾಲೂಕ ಸಹಾಯಕ ಆಯುಕ್ತರಾದ ಡಾ: ನಯನಾ ಅವರು ಪೋಲಿಸ್ ಇಲಾಖೆ ಹಾಗು ಸಾರ್ವಜನಿಕರನ್ನೊಳಗೊಂಡಂತೆ ಸಭೆ ಕರೆದಿದ್ದರು ಸಾರ್ವಜನಿಕರ ಪ್ರಕಾರ ಈ ರಸ್ತೆ ಹಲವಾರು ವರ್ಷಗಳಿಂದ ಸಾರ್ವಜನಿಕರು ಮೂಲಭೂತ ಸೌಕರ್ಯವಾಗಿ ಉಪಯೋಗಿಸುತ್ತಿದ್ದೆವೆ ಅಲ್ಲದೆ ಈ ರಸ್ತೆ ಅರಣ್ಯ ಇಲಾಖೆಯ ಜಾಗದಲ್ಲಿದ್ದು ತಾವು ಹಿಂದಿನಿಂದಲೂ ಉಪಯೋಗಿಸಿಕೊಂಡು ಬರುತ್ತಿದ್ದೆವೆ ಈಗ ಪೋಲಿಸರು ಎಕಾಏಕಿ ಬ್ಯಾರಿಕೇಡ್ ಅನ್ನು ಹಾಕಿ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದ್ದಾರೆ ಇತ್ತ ಪೋಲಿಸ್ ಇಲಾಖೆ ಈ ರಸ್ತೆ ನಮ್ಮ ಪೋಲಿಸ್ ಕ್ವಾಟ್ರಸ್ ಕಂಪಾಂಡ್ ಒಳಭಾಗದಲ್ಲಿ ಇದ್ದು ಈ ಭಾಗದಲ್ಲಿ ಸಾರ್ವಜನಿಕ ವಾಹನ ಓಡಾಟಕ್ಕೆ ಅವಕಾಶವನ್ನು ನೀಡಿದರೆ ನಮ್ಮ ಕುಟುಂಬಕ್ಕೆ ರಕ್ಷಣೆ ಇಲ್ಲದಂತಾಗುತ್ತದೆ ನಾವು ಅನೇಕ ಕಾರ್ಯಾಚರಣೆಯಲ್ಲಿ ಅಪರಾದಿಗಳನ್ನು ಬಂದಿಸಿರುತ್ತೆವೆ ಈ ಕಾರಣ ಕೆಲವೊಂದು ಅಪರಾದಿ ಮನಸ್ಥಿತಿಯಲ್ಲಿರು ವ್ಯಕ್ತಿಗಳು ನಮ್ಮ ಹಾಗು ನಮ್ಮ‌ ಕುಟುಂಬದ ಮೇಲೆ ಹಲ್ಲೆಗೆ ಮುಂದಾಗುವ ಸಾಧ್ಯತೆ ಇರುತ್ತದೆ ಇದಲ್ಲದೆ ವಾಹನ ಅಪಘಾತಗಳು ಸಂಭವಿಸುವ ಅಪಾಯಗಳು ಇರುತ್ತದೆ ಕಾರಣ ನಾವು ಇಲ್ಲಿ ಬ್ಯಾರಿಕೇಡ್ಗಳನ್ನು ಹಾಕಿದ್ದೆವೆ ಎಂದು ಹೇಳುತ್ತಿದ್ದಾರೆ ಪೊಲಿಸ್ ಇಲಾಖೆ ಹಾಗು ಸಾರ್ವಜನಿಕರು ಈ ಎರಡು ಪಕ್ಷದ ವಾದವನ್ನು ಆಲಿಸಿದ್ದ ಸಹಾಯಕ ಆಯುಕ್ತರು ನಾವು ಸದ್ಯದಲ್ಲಿ ಸಂಪೂರ್ಣವಾಗಿ ಸರ್ವೆಯನ್ನು ನಡೆಸುತ್ತೆವೆ ಹಾಗೆ ಪರಿಸ್ತಿತಿಗಳನ್ನು ಅವಲೊಕಿಸುತ್ತೆವೆ ಅಲ್ಲಿಯವರೆಗೆ ಯತಾಸ್ಥಿತಿಯನ್ನು ಕಾಪಾಡಿಕೊಳ್ಳ ಬೇಕು ಎಂದು ಸಾರ್ವಜನಿಕರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ

ಒಟ್ಟಾರೆ ಭಟ್ಕಳ ತಾಲೂಕಿನಲ್ಲಿ ಪೋಲಿಸ್ ಇಲಾಖೆ ಹಾಗು ಸಾರ್ವಜನಿಕರ ಮದ್ಯ ಗೊಂದಲಗಳು ಎರ್ಷಟ್ಟು ಇಬ್ಬರ ಮದ್ಯ ಕೊಲ್ಡವಾರ್ ಪ್ರಾರಂಬವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ

WhatsApp
Facebook
Telegram
error: Content is protected !!
Scroll to Top