ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುವ ಮನಸಿದ್ದಲ್ಲಿ ಮಾತ್ರ ಜಿಲ್ಲೆಯಲ್ಲಿರಿ ಇಲ್ಲವಾದಲ್ಲಿ ನಿಮ್ಮನ್ನು ಮರ್ಯಾದೆಯಿಂದ ಜಿಲ್ಲೆಯಿಂದ ಕಳುಹಿಸಿ ಕೊಡುತ್ತೇನೆ
ಜನ ಸಾಮಾನ್ಯರಿಗೆ ತೊಂದರೆಯಾದರೆ ನಾನು ಸಹಿಸಲಾರೆ ಸಚಿವ ಮಂಕಾಳು ವೈದ್ಯ
ಭಟ್ಕಳ : ಮುಂಗಾರು ಪ್ರಕ್ರತಿ ವಿಕೋಪದ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಸಚಿವ ಮಂಕಾಳು ವೈದ್ಯರ ಮುಂದಾಳತ್ವದಲ್ಲಿ ತಾಲೂಕಿನ ಮಿನಿ ವಿಧಾನ ಸೌದದಲ್ಲಿ ವಿವಿದ ಇಲಾಖಾ ಅಧಿಕಾರಿಗಳನ್ನೊಳಗೊಂಡಂತೆ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು
ಕೆಲವು ದಿನಗಳಿಂದ ಬಿಡದೆ ನಿರಂತರವಾಗಿ ಸುರಿಯುತ್ತಿರುವ ವಿಪರೀತ ಮುಂಗಾರಿನ ಕಾರಣ ತಾಲೂಕಿನಾಧ್ಯಂತ ಸಾರ್ವಜನಿಕರು ನೇರೆ ಹಾವಳಿ ಇನ್ನಿತರ ಕಾರಣದಿಂದ ತೊಂದರೆಗೆ ಒಳಗಾಗಿದ್ದರು ಇದನ್ಬು ಮನಗಂಡ ಸಚಿವ ಮಂಕಾಳು ವೈದ್ಯರು ಪ್ರಕೃತಿ ವಿಕೋಪ ಪರಿಹಾರದ ವಿಷಯದ ಕುರಿತು ಅಧಿಕಾರಿಗಳನ್ನೊಳಗೊಂಡಂತೆ ಸಭೆಯನ್ನು ಹಮ್ಮಿಕೊಳ್ಳಲಾಯಿತು ಈ ಸಂದರ್ಬದಲ್ಲಿ ಅವರು ಅಧಿಕಾರಿಗಳನ್ನು ಉದ್ದೇಶಿಸಿ ನನ್ನ ತಾಲೂಕು ಜಿಲ್ಲೆಯಲ್ಲಿ ಜನ ಸಾಮಾನ್ಯರು ಕಷ್ಟಪಡುವುದನ್ನು ನಾನು ಸಹಿಸುವುದಿಲ್ಲ ಅಧಿಕಾರಿಗಳು ಕೆಲಸ ಮಾಡುವುದಿದ್ದರೆ ಜಿಲ್ಲೆಯಲ್ಲಿ ಕೆಲಸ ಮಾಡಿ ನಿಮಗೆ ಕೆಲಸ ಮಾಡಲು ಮನಸ್ಸಿಲ್ಲದಿದ್ದಲ್ಲಿ ಯಾರಿಗಾದರು ಜಿಲ್ಲೆಯಿಂದ ವರ್ಗಾವಣೆ ಬೇಕಿದ್ದಲ್ಲಿ ಹೇಳಿಬೀಡಿ ನಾನು ಅಂತವರನ್ನು ಜಿಲ್ಲೆಯಿಂದ ಕಳುಹಿಸಿಕೊಡುತ್ತೆನೆ ನನ್ನ ಜಿಲ್ಲೆಯಲ್ಲಿ ಕಟ್ಟಕಡೆಯ ವ್ಯೆಕ್ತಿಗೂ ಸರಕಾರದ ಸೌಲಬ್ಯ ಮುಟ್ಟಬೇಕು ಅವರು ತೊಂದರೆ ಪಡುವುದನ್ನು ನಾನು ಸಹಿಸುವುದಿಲ್ಲ ಎಂದು ಹೇಳಿದರು
ಈ ಸಂದರ್ಬದಲ್ಲಿ ಅರಣ್ಯ ಇಲಾಖೆಯವರು ತಮ್ಮ ಇಲಾಖೆಯ ವರದಿ ಮಂಡಿಸಿದರು ಈ ಸಂದರ್ಬದಲ್ಲಿ ಬಡ ಅತಿಕ್ರಮಣದಾರರಿಗೆ ಅರಣ್ಯ ಇಲಾಖೆ ತೊಂದರೆಯನ್ನು ನೀಡಬಾರದು ಬಡ ಅತಿಕ್ರಮಣದಾರರು ಮನೆ ಕಟ್ಟಲು ಮನೆ ರಿಪೇರಿ ಮಾಡಿಕೊಳ್ಞಲು ಅವಕಾಶ ನೀಡಿ ನಮ್ಮ ಜಿಲ್ಲೆಯಲ್ಲಿ ೮೦% ಅರಣ್ಯ ಇದೆ ಇದನ್ನು ರಕ್ಷಿಸಿದವರೆ ಸಾಮಾನ್ಯ ಜನರು ಅವರಿಗೂ ಅರಣ್ಯದ ಮಹತ್ವ ತಿಳಿದಿದೆ ವಿನಾಕಾರಣ ಅರಣ್ಯ ಅತಿಕ್ರಮಣದಾರರಿಗೆ ತೊಂದರೆ ನೀಡಬೇಡಿ ಹೊಸದಾಗಿ ಅತಿಕ್ರಮಣ ಮಾಡಲು ಯಾರು ಅವಕಾಶ ಕೇಳುತ್ತಿಲ್ಲ ಆದರೆ ಹಳೆ ಅತಿಕ್ರಮಣದಸರರಿಗೆ ತೋಂದರೆಯಾಗದಂತೆ ನೊಡಿಕೊಳ್ಳಿ ಎಂದು ಎಚ್ಚರಿಸಿದರು.
ಪುರಸಭೆ ಮತ್ತು ಜಾಲಿ ಪಟ್ಟಣ ಪಂಚಾಯತ್ ವರದಿ ಮಂಡಿಸುವ ಸಂದರ್ಬದಲ್ಲಿ ಬೀದಿದೀಪಗಳು ಹಾಗು ಒಳಚರಂಡಿಗಳು ಸುಸಜ್ಜಿತವಾಗಿ ಕಾರ್ಯನಿರ್ವಹಿಸುವಂತಾಗ ಬೇಕು ಎಲ್ಲಿಯು ವ್ಯತ್ಯಾಸವಾಗಬಾರದು ಎಂದು ಎಚ್ಚರಿಸಿದರು ಹಾಗೆ ಈ ಸಂದರ್ಬದಲ್ಲಿ ಭೂ ಮಾಪನ ಕೆಂದ್ರದ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡು ನಿಮಗೆ ೧೫ ಜನ ಸಿಬ್ಬಂದಿಯನ್ನು ನಿಡಿದರು ಕೆಲಸ ನಿರ್ವಹಿಸುವುದಿಲ್ಲಾ ಡೆಪ್ಟೆಷನ್ ಹೆಸರಲ್ಲಿ ಬೇರೆಡೆ ವರ್ಗಮಾಡುತ್ತಿರಾ ಇಲಾಖಾ ಸರ್ವೆಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲಾ ನಿಮಗೆ ಇಲ್ಲಿ ಕೆಲಸ ಮಾಡಲು ಮನಸ್ಸಿಲ್ಲದಿದ್ದಲ್ಲಿ ಜಿಲ್ಲೆಯಿಂದ ಹೊರನಡೆಯಿರಿ ಎಂದು ತರಾಟೆಗೆ ತೆಗೆದುಕೊಂಡರು ಮೀನುಗಾರಿಕಾ ಇಲಾಖೆಯ ಅಧಿಕಾರಿ ತಮ್ಮ ವರದಿ ಮಂಡಿಸಿ ತಮ ಇಲಾಖೆಗೆ 10 ಎಕ್ಕರೆ ಜಾಗದ ಅವಶ್ಯಕತೆ ಇದೆ ಎಂದು ಬೇಡಿಕೆ ಮುಂದಿಟ್ಟರು ಈ ಬಗ್ಗೆ ಗಮನ ಹರಿಸಲಾಗುವುದು ಎಂದು ಸಚಿವರು ಬರವಸೆಯನ್ನು ನಿಡಿದರು
ಈ ಸಂದರ್ಬದಲ್ಲಿ ತಾಲೂಕ ಸಹಾಯಕ ಆಯುಕ್ತರಾದ ಡಾ ನಯನಾ ತಾಲೂಕ ತಹಶಿಲ್ದಾರ್ ನಾಯ್ಕಡ್ ವಿವಿದ ಇಲಾಖಾ ಅಧಿಕಾರಿಗಳು ಸಾರ್ವಜನಿಕರು ಮುಂತಾದವರು ಉಪಸ್ಥಿತರಿದ್ದರು