ಸಚಿವರ ತೇಜೊವದೆಗೆ ಶುರುವಿಟ್ಟುಕೊಂಡರೆ ಮಾಜಿ ಶಾಸಕ ಸುನಿಲ್ ನಾಯ್ಕ
ಭಟ್ಕಳ : ತಾಲೂಕಿನಲ್ಲಿ ವರ್ಷದ ಹಿಂದೆ ಅಂದರೆ ಸುನಿಲ್ ನಾಯ್ಕ ಅಧಿಕಾರ ಹೊಂದಿರುವ ಸಂದರ್ಬದಲ್ಲಿ ತಾಲೂಕಿನಲ್ಲಿ ಅಭದ್ರತೆ ಕಾಡುತ್ತಿತ್ತು ಮಕ್ಕಳಿಂದ ಹಿಡಿದು ಮಹಿಳೆಯ ತೆಜೋವದೆ ನಡೆಸಲಾಗುತ್ತಿತ್ತು ,ಹಾಗೆ ಇಂದಿನ ಸಚಿವ ಮಂಕಾಳ ವೈದ್ಯರ ವಯಕ್ತಿಕ ಜೀವನದಿಂದ ಹಿಡಿದು ರಾಜಕೀಯ ಜೀವನದವರೆಗೆ ಕನಿಷ್ಟ ಮಾನವಿಯತೆಯನ್ನು ನೊಡದೆ ಅವರ ತೆಜೋವದೆಗೆ ಮುಂದಾಗಲಾಗಲಾಗಿತ್ತು ನಂತರ ಸಚಿವ ಮಂಕಾಳ ವೈದ್ಯರು ಅಧಿಕಾರ ಹಿಡಿದ ನಂತರ ತಾಲೂಕಿನಲ್ಲಿ ಸುವೈವಸ್ಥೆ ಶಾಂತಿ ನೆಲೆಸಿತು ಎಂದರೆ ತಪ್ಪಾಗಲಿಕ್ಕಿಲ್ಲ ಆದರೆ ಈಗ ಕೈಯಲಾಗದವನ ಕೊನೆ ಅಸ್ತ್ರ ಎಂಬಂತೆ ಈಗ ಪುನಃ ಸಚಿವರ ತೆಜೋವದೆಗೆ ಮುಂದಾಗಿರುವುದು ಬೆಳಕಿಗೆ ಬಂದಿದೆ
ಹೌದು ವೀಕ್ಷಕರೆ ಒಂದು ವರ್ಷದ ಹಿಂದೆ ಇದೆ ನಮ್ಮ ಮಾಜಿ ಶಾಸಕ ಸುನಿಲ್ ಅವರು ಅಧಿಕಾರ ಹೊಂದಿರುವ ಸಂದರ್ಬದಲ್ಲಿ ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಎಲ್ಲಿ ನೊಡಿದರಲ್ಲಿ ಗುಂಡಾಗಿರಿ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಮಕ್ಕಳು ಎಂಬ ಯಾವುದೇ ಬೇದಭಾವವಿಲ್ಲದೆ ಅವರ ತೇಜೋವದೆಯನ್ನು ನಡೆಸಲಾಗುತ್ತಿತ್ತು ಪತ್ರಕರ್ತರು ದೈರ್ಯದಿಂದ ಸಮಾಜದಲ್ಲಿ ನಡೆಯುತ್ತಿರುವ ಸರಿ ತಪ್ಪುಗಳನ್ನು ಜನರ ಮುಂದೆ ಪ್ರಸ್ತುತ ಪಡಿಸುವಂತಿರಲಿಲ್ಲವಾಗಿತ್ತು ಸತ್ಯನಿಷ್ಟ ಪತ್ರಕರ್ತರನ್ನು ಗುರುತಿಸಿ ಅವರ ತೇಜೋವದೆ ನಡೆಸುವುದು ಅಥವಾ ಅವರ ಮನೆ ಬಾಗಿಲಿಗೆ ತೆರಳಿ ಅವರ ಅಸಹಾಯಕ ತಂದೆ ತಾಯಿಯ ಮುಂದೆಯೆ ಮಾರಣಾಂತಿ ಹಲ್ಲೆ ನಡೆಸುವುದು ಹಾಗೆ ಪತ್ರಕರ್ತ ಅನದಿಕ್ರತ ಇಸ್ಪಿಟ್ ಅಡ್ಡಾದ ಬಗ್ಗೆ ವರದಿ ಮಾಡಿದ ಕಾರಣಕ್ಕೆ ಆತನನ್ನು ಹತ್ಯೆ ಮಾಡಿ ಮುಗಿಸುವ ಪ್ರಯತ್ನ ನಡೆಸಿರುವುದನ್ನು ನಾವು ನೊಡಬಹುದಾಗಿದೆ ಪತ್ರಕರ್ತನನ್ನು ನಕಲಿ ಪತ್ರಕರ್ತ ದೇಶದ್ರೋಹಿ ಪತ್ರಕರ್ತ ಎಂದು ತೆಜೋವದೆ ನಡೆಸಿರುವುದು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದು ಕೆಲವು ಕೆಟ್ಟ ರಾಜಕಾರಣಿಗಳು ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದರೆ ಪತ್ರಕರ್ತ ಸತ್ಯವನ್ನು ಜನರೆದುರು ಇಟ್ಟಿದ್ದಾನೆ ಎಂಬ ಕಾರಣಕ್ಕೆ ಆತ ತನ್ನ ಕುಟುಂಬದೊಂದಿಗೆ ವಾಸ್ತವ್ಯ ಮಾಡಿಕೊಂಡಿರುವ ತುಂಡು ಜಾಗವನ್ನು ಕೂಡ ತಾಲೂಕಿನ ಖಾಸಗಿ ಸರ್ವೆಯರ್ ಮಿಥುನ್ ನಾಯ್ಕ ಎಂಬ ಮಹಾ ಭ್ರಷ್ಟನ ಸಹಾಯದಿಂದ ಕಾನೂನು ಭಾಹಿರವಾಗಿ ಅರಣ್ಯ ಅತಿಕ್ರಮ ಜಿಪಿಎಸ್ ಜಾಗವನ್ನು ಸರ್ವೆ ಮಾಡಿದ ನೆಪಮಾಡಿಸಿ ಖಾಸಗಿ ವ್ಯಕ್ತಿಯೊಬ್ಬನಿಗೆ ಹದ್ದು ಬಸ್ಸು ಮಾಡುವಂತೆ ಇದೆ ಭ್ರಷ್ಟ ಮಿಥುನ್ ನಾಯ್ಕ ಎಂಬ ವ್ಯಕ್ತಿಯಲ್ಲಿ ಹೇಳಿಸಲಾಗಿತ್ತು ಇದು ಒಂದು ಕಡೆಯಾದರೆ ಸರಳ ಸಜ್ಜನರಾಗಿರುವ ಇಂದಿನ ಸಚಿವ ಮಂಕಾಳು ವೈದ್ಯರ ತೇಜೊವದೆಗಳನ್ನು ನಡೆಸಲಾಗಿತ್ತು ವೀಕ್ಷಕರೆ ಈ ಎಲ್ಲ ಕಾನೂನು ಭಾಹಿರ ಚಟುವಟಿಕೆಗಳು ಮಾಜಿ ಶಾಸಕ ಸುನಿಲ್ ನಾಯ್ಕ ಅವರು ನಡೆಸಿದ್ದಾರೆ ಎಂದು ನಾವು ಇಲ್ಲಿ ಹೇಳುತ್ತಿಲ್ಲಾ ಆದರೆ ಈ ಎಲ್ಲ ಕುಕ್ರತ್ಯಗಳು ಅವರ ಅಧಿಕಾರದ ಅವದಿಯಲ್ಲಿ ನಡೆದಿರುವುದಂತು ಸತ್ಯ
ಸಚಿವ ಮಂಕಾಳು ವೈದ್ಯರು ಇಂದು ಅಧಿಕಾರ ಹಿಡಿದಿದ್ದಾರೆ ಅಂದು ಯಾರು ಕನಿಷ್ಟ ಮಾನವಿಯತೆಯನ್ನು ನೊಡದೇ ಇವರ ತೆಜೋವದೆಯನ್ನು ನಡೆಸಿದ್ದರೋ ಇಂದು ಅವರೆ ಸಚಿವ ಮನೆ ಬಾಗಿಲಿಗೆ ಹೊಗಿ ನಿಂತು ತಮ್ಮ ಕೆಲಸವನ್ನು ಮಾಡಿಕೊಳ್ಳುತ್ತಿದ್ದಾರೆ. ವಿಕ್ಷಕರೆ ನಾನು ಸಚಿವರನ್ನು ಸರಳ ಸಜ್ಜನ ವ್ಯಕ್ತಿ ಎಂದು ಸಂಭೊದಿಸಿದ್ದೆ ಕಾರಣ ಇದೆ ಕಾರಣದಿಂದ ತನ್ನ ತೆಜೋವದೆ ಮಾಡಿದ್ದಾರೆ ಎಂದು ಸಚಿವರು ಯಾರನ್ನು ದ್ವೇಶ ಮಾಡದೆ ತಾನು ಇಡಿ ರಾಜ್ಯಕ್ಕೆ ಸಚಿವ ಎಂಬ ಸಂಗತಿಯನ್ನು ಮನಗಂಡು ಎಲ್ಲರ ಸೇವೆಗೆ ನಿಂತಿರುವುದು ಸತ್ಯವಾದ ಸಂಗತಿಯಾಗಿದೆ
ನಾನು ಇಲ್ಲಿ ಯಾಕೆ ಹಳೆಯದನ್ನು ಕೆದಕಿ ಹೇಳುತ್ತಿದ್ದೆನೆ ಎಂದರೆ ಇಂದು ಸಚಿವರ ಹೆಸರಿಗೆ ಪುನಃ ಮಸಿ ಬಳಿಯುವ ಕೆಲಸಕ್ಕೆ ಮುಂದಾಗಲಾಗಿದೆ ಮೊನ್ನೆ ಮಾಜಿ ಶಾಸಕ ಸುನಿಲ್ ನಾಯ್ಕ ಅವರು ಸಚಿವ ಮಂಕಾಳು ವೈದ್ಯರು ಕಾನೂನು ಭಾಹಿರ ಅರಣ್ಯ ಅತಿಕ್ರಮ ಮಾಡಿದ್ದಾರೆ ಭೂ ಮಾಪಿಯ ಮಾಡಿದ್ದಾರೆ ಎಂಬ ಆರೋಪವನ್ನು ಬಿಜೆಪಿ ಪತ್ರಿಕಾಗೋಷ್ಟಿಯಲ್ಲಿ ಮಾಡುದ್ದಾರೆ ಅವರು ಎನು ಹೇಳಿದ್ದರು ಎಂಬುವುದನ್ನು ನಾವು ನೊಡಿಕೊಂಡು ಬರೋಣ ಬನ್ನಿ
ಹೌದು ವಿಕ್ಷಕರೆ ಮಾಜಿ ಶಾಸಕರು ಸಚಿವರ ಮೇಲೆ ಆರೋಪವನ್ನು ಮಾಡುತ್ತಾರೆ ಆದರೆ ಇವರ ಮೇಲೆ ಅರಣ್ಯ ಜಾಗದಲ್ಲಿ ಗಣಿಗಾರಿಕೆ ನಡೆಸಿದ ಆರೋಪ ಇದೆ ಇದಕ್ಕೆ ಸಂಬಂದಿಸಿದಂತೆ ಅರಣ್ಯ ಇಲಾಖೆಯವರು ಮೊಕದ್ದಮೆ ಸಂಖ್ಯೆ:11579 ರಂತೆ ದಿನಾಂಕ:26-06-2019/ROR No.08/2019-20 ಯನ್ನು ದಾಖಲಿಸಿರುತ್ತಾರೆ ಹಾಗು ರೂ.54,87,390/- (ರೂ.ಐವತ್ನಾಲ್ಕು ಲಕ್ಷದ ಎಂಬತ್ತೆಳು ಸಾವಿರದ ಮೂರು ನೂರಾ ತೊಂತ್ತು ಮಾತ್ರ) ಹಾಗೂ ಆದಾಯ ತೆರಿಗೆಯ ಮೊತ್ತ ರೂ.1,09,748/- (ರೂ.ಒಂದು ಲಕ್ಷದ ಒಂಬತ್ತು ಸಾವಿರದ ಏಳು ನೂರಾ ನಲವತ್ತೆಂಟು ಮೊತ್ತವನ್ನು ಪಾವತಿಸುವಂತೆ ನೋಟಿಸನ್ನು ಜಾರಿ ಮಾಡಲಾಗಿತ್ತು ಈಗಾಗಲೆ ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ಮಾಜಿ ಶಾಸಕ ಸುನಿಲ್ ನಾಯ್ಕ ಅವರಿಗೆ ನ್ಯಾಯಾಲಯ ಜಾಮೀನು ನೀಡಿತ್ತು ಆದರೆ ಈಗಾಗಲೆ ಜಾಮಿನಿನ ಅವದಿ ಮೀರಿದ್ದು ಮಾಜಿ ಶಾಸಕರು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿತ್ತು ಆದರೆ ಅವರು ನ್ಯಾಯಾಲಯಕ್ಕೆ ಹಾಜರಾಗಿರುವುದಿಲ್ಲಾ ನ್ಯಾಯಾಲಯ ಮಾಜಿ ಶಾಸಕ ಸುನಿಲ್ ನಾಯ್ಕ ಅವರಿಗೆ ಜಾಮೀನು ನೀಡಿದವರಿಗೆ ಈಗಾಗಲೆ ನ್ಯಾಯಾಲಯ ನೋಟಿಸನ್ನು ಜಾರಿ ಮಾಡಿದೆ ಆದರೆ ಮಾಜಿ ಅವರು ಕಾನೂನು ಉಲ್ಲಂಘನೆ ಮಾಡಿದ್ದಲ್ಲದೆ ತನ್ನ ಮೇಲೆ ವಾರಂಟ್ ಇದ್ದರು ಕೂಡ ಕಾನೂನು ತನ್ನ ಜೇಬಿನ್ನಲ್ಲಿದೆ ಎಂಬ ಉಡಾಪೆತನದಿಂದ ಚುನಾವಣಾ ನೀತಿಸಂಹಿತೆ ಎಂಬುವುದನ್ನು ನಿರ್ಲಕ್ಷಿಸಿ ನೂರಾರು ಜನರನ್ನು ಸೇರಿಸಿ ಸಚಿವರನ್ನು ಹೀಗೆಳೆಯುವ ಕೆಲಸಕ್ಕೆ ಕೈಹಾಕುತ್ತಾರೆ ಆದರೆ ಈ ಸಂದರ್ಬದಲ್ಲಿ ಪೊಲಿಸ್ ಇಲಾಖೆ ಮಾತ್ರ ಮೂಕ ಪ್ರೇಕ್ಷಕರಂತೆ ನಿಂತಿರುವುದು ಮಾತ್ರ ವಿಪರ್ಯಾಸವೆ ಸರಿ ಇದು ನಮ್ಮ ದೇಶದ ವ್ಯವಸ್ಥೆ ಎನ್ನುವುದು ನಮ್ಮ ದುರ್ದೈವ ಕಾನೂನುಗಳೆನ್ನಿದ್ದರು ಬಡ ಅಮಾಯಕರಿಗೆ ಮಾತ್ರ ಅನ್ವಯಿಸುತ್ತದೆ ಪ್ರಭಾವಿಗಳಿಗೆ ಉಳ್ಳವರಿಗೆ ಕಾನೂನು ಕಾಲಿನ ಕಸಕ್ಕಿಂತ ಕಡೆ ಎನ್ನುವುದಕ್ಕೆ ಇದು ಸ್ಪರ್ಷ ಉದಾಹರಣೆಯಾಗಿದೆ
ಇದು ಒಂದು ಕಡೆಯಾದರೆ ಮಾಜಿ ಶಾಸಕ ಸುನಿಲ್ ನಾಯ್ಕ ತಾವು ಅಧಿಕಾರದಲ್ಲಿರುವಾಗ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಜಾಲಿಯಲ್ಲಿರು ತಮ್ಮ ಐಶಾರಾಮಿ ಬಂಗಲೆಗೆ ಸುಳ್ಳು ದಾಖಲೆ ಸೃಷ್ಟಿಸಿ ಸರಕಾರದ ಲಕ್ಷಾಂತರ ಹಣದ ರೋಡ್ ಮಾಡಿಕೊಂಡಿರುವ ಅರೋಪಗಳಿದ್ದು ಇದು ಈಗಾಗಲೆ ಲೊಕಾಯುಕ್ತ ಇಲಾಖೆಯಲ್ಲಿ ತನಿಖಾ ಹಂತದಲ್ಲಿದೆ ಇಷ್ಟೆಲ್ಲಾ ಭ್ರಷ್ಟಾಚಾರದ ಆರೋಪಗಳನ್ನು ಹೊಂದಿರುವ ಮಾಜಿ ಶಾಸಕರು ಹಾಲಿ ಸಚಿವರ ಮೇಲೆ ಆರೋಪದ ಮೇಲೆ ಆರೋಪಗಳನ್ನು ಮಾಡಿದ್ದಲ್ಲದೆ ತಮ್ಮ ಕೆಲವು ಸಮರ್ಥಕರ ಮೂಲಕ ಸಚಿವರ ವಿರುದ್ದ ಘೋಷಣೆ ಕೂಗಿಸುವುದರ ಮೂಲಕ ಸಚಿವರ ತೇಜೋವದೆಯನ್ನು ಮಾಡಲು ಮುಂದಾಗಿದ್ದಾರೆ ಎಂದರೆ ಇದು ವಿಪರ್ಯಾಸವೆ ಸರಿ
ವೀಕ್ಷಕರೆ ನಾವು ಯಾವುದೇ ವ್ಯಕ್ತಿ ಅಥವಾ ರಾಜಕಾರಣಿನ್ನು ವಹಿಸಿಕೊಂಡು ಇನ್ನೊಬ್ಬರಿಗೆ ಬೊಟ್ಟು ಮಾಡುವ ಕೆಲಸಕ್ಕೆ ಕೈ ಹಾಕುತ್ತಿಲ್ಲಾ ತಾಲೂಕಿನಲ್ಲಿ ಹಾಗು ನಮ್ಮ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮುಂದುವರಿಯಬಾರದು ಜನರಿಗೆ ಸತ್ಯದ ಅರಿವಿರಲಿ ಎಂಬ ಸದುದ್ದೇಶದಿಂದ ಈ ವರದಿಯನ್ನು ನಿಮ್ಮ ಮುಂದೆ ಮಂಡಿಸಿದ್ದೇವೆ ಮಾಜಿ ಶಾಸಕ ಸುನಿಲ್ ನಾಯ್ಕ ಅವರನ್ನಾಗಲಿ ಇನ್ಯಾರನ್ನೆ ಆಗಲಿ ಹೀಗೆಳೆಯುವ ಉದ್ದೇಶ ನಮಗಿಲ್ಲಾ ಸಾರ್ವಜನಿಕರಿಗೆ ಸತ್ಯದ ಅರಿವನ್ನು ಮಾಡಿಕೊಡುವುದಷ್ಟೆ ನಮ್ಮ ಉದ್ದೇಶ ಸಾರ್ವಜನಿಕರಿಗೆ ಸತ್ಯ ಮುಟ್ಟಿದೆ ಎಂಬ ತೃಪ್ತಿ ಇಂದ ಈ ವಿಷೇಶ ವರದಿಯನ್ನು ಮುಗಿಸುತ್ತಿದ್ದೆವೆ ನಮ್ಮ ಮುಂದಿನ ಸಂಚಿಕೆಯಲ್ಲಿ ಇನ್ನೊಂದು ಮಹತ್ವದ ವರದಿಯೊಂದಿಗೆ ನಿಮ್ಮ ಮುಂದೆ ಪ್ರಸ್ತುತವಾಗಲಿದ್ದೇವೆ ನಮಸ್ಕಾರ