ಭಟ್ಕಳ ತಾಲೂಕಿನಲ್ಲಿ ತಲೆದೂರಿದ ವಿಧ್ಯುತ್ ವ್ಯತ್ಯಯ ಸಮಸ್ಯೆಗೆ  ಮುಕ್ತಿ

ಬಿಡುವಿಲ್ಲದ  ಕೆಲಸದ ಒತ್ತಡದಲ್ಲೂ ಜನರ ಸಮಸ್ಯೆಗೆ ಸ್ಪಂದಿಸಿದ ಸಚಿವ ಮಂಕಾಳು ವೈದ್ಯ

ಭಟ್ಕಳ : ತಾಲೂಕಿನಲ್ಲಿ ಕೆಲವು ದಿನಗಳ ಹಿಂದಿನಿಂದ ವಿಧ್ಯುತ್ ಸರಬರಾಜಿನಲ್ಲಿ  ವ್ಯತ್ಯಯ ಉಂಟಾಗಿತ್ತು ಇದಕ್ಕೆ ಮೂಲ ಕಾರಣ

ತಾಲೂಕಿನ ಹೆಬಳೆ ಗ್ರಿಡ್’ನಲ್ಲಿ 5MVA ಪವರ್ ಟ್ರಾನ್ಸ್ಫರ್ಮೆರ್ ಹಾಳಾಗಿದ್ದು ಇದರಿಂದ ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ತೀವ್ರಗೊಂಡಿತ್ತು. ಈ ಬಗ್ಗೆ ಸಚಿವ ಮಂಕಾಳು ಗಮನಕ್ಕೆ ಬಂದ ತಕ್ಷಣವೆ ಸಂಭಂದ ಪಟ್ಟ ಹೆಸ್ಕಾಂ ಅಧಿಕಾರಿಗಳ ಜೊತೆ ಚರ್ಚಿಸಿ ಅದನ್ನು  ಸರಿ ಪಡಿಸುವಂತೆ ಆದ್ದೇಶಿಸಿದ್ದರು . ತಕ್ಷಣವೆ ಹೆಸ್ಕಾಂ ಅಧಿಕಾರಿಗಳು ಕಾರವಾರದಿಂದ ಹೊಸದಾದ 5MVA ಟ್ರಾನ್ಸ್ಫರ್ಮೆರ್ ತರಿಸಿಕೊಂಡು ಟ್ರಾನ್ಸ್ಫರ್ಮೆರ್ ಬದಲಾವಣೆ ಕಾರ್ಯ ಆರಂಭಿಸಿ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸುವ ಕೆಲಸ ಮುಂದಾಗಿತ್ತು ಈ ಸಂದರ್ಬದಲ್ಲಿ ಸಚಿವ ಮಂಕಾಳ ವೈದ್ಯರು ತಮ್ಮ ಬಿಡುವಿಲ್ಲದ ಕೆಲಸದ ಸಮಯದಲ್ಲೂ ಕೂಡ  ಹೆಬ್ಬಳೆ ಗ್ರಿಡ್ ಗೆ ಬೆಟಿನಿಡಿದ್ದಲ್ಲದೆ ಕೆಇಬಿ ಕಾರ್ಯವೈಕರಿಯ ಬಗ್ಗೆ ಪರಿಶಿಲನೆ ನಡೆಸಿದರು ಮತ್ತು  ಸಾರ್ವಜನಿಕರಿಗೆ ವಿಧ್ಯುತ್ ವ್ಯತ್ಯಯದ ಕಾರಣ ಯಾವುದೆ ಸಮಸ್ಯೆ ಉಂಟಾಗಬಾರದು ಎಂದು  ಅದಿಕಾರಿಗಳಿಗೆ ಹೆಳಿದರು ಈ ಹಿನ್ನೆಲೆಯಲ್ಲಿ ಕೆಇಬಿ  ಇಲಾಖೆ ತನ್ನ ಕಾರ್ಯವನ್ನು ಸತತ ಪರಿಶ್ರಮದಿಂದ ನಡೆಸಿದ್ದು  ತಾಲೂಕಿನ ವಿಧ್ಯುತ್ ವ್ಯತ್ಯಯದ ಸಮಸ್ಯ ಶಿಘ್ರವೆ ಪರಿಹರಿಸಲಾಯಿತು ಶಾಸಕ ಮಂಕಾಳು ವೈದ್ಯರ ಈ ಜನಪರ ಕಾಳಜಿಗೆ ಜಿಲ್ಲೆಯಾಧ್ಯಂತ  ಪ್ರಶಂಸೆಗಳು ಹರಿದು ಬರುತ್ತಿದ್ದು  ಸಚಿವರ ಅಭಿಮಾನಿ ಬಳಗ ಸಚಿವರಿಗೆ ಇನ್ನೂ ಹೆಚ್ಚಿನ ಅಧಿಕಾರಗಳು ಯಶಸ್ಸುಗಳು ಹೊರೆಯುವಂತಾಗಲಿ ಎಂದು ಹಾರೈಸಿದೆ 

WhatsApp
Facebook
Telegram
error: Content is protected !!
Scroll to Top