ಸಹಸ್ರಕ್ಕೂ ಅಧಿಕ ಭಕ್ತರ ಹರ್ಷೋದ್ಘಾರಗಳ ನಡುವೆಸುಸಂಪನ್ನವಾಗಿ ಜರುಗಿದ ಭಟ್ಕಳದ ಹನುಮಂತ ದೇವರ ಜಾತ್ರಾ ರಥೋತ್ಸವ

ದೈವಿಕಾರ್ಯದಲ್ಲಿ ಪಾಲ್ಗೋಂಡ ಸಚಿವ ಮಂಕಾಳು ವೈದ್ಯ

ಭಟ್ಕಳ: ಇಲ್ಲಿನ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವವು ಬುಧವಾರದಂದು ರಾಮನವಮಿಯ ಪರ್ವಕಾಲದಲ್ಲಿ ಭಕ್ತರ ಹರ್ಷೋದ್ಘಾರಗಳೊಂದಿಗೆ ಅದ್ದೂರಿಯಾಗಿ ಸುಸಂಪನ್ನಗೊಂಡಿತು.

ಶ್ರೀ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವಕ್ಕೆ ಯುಗಾದಿಯ ಮಾರನೆಯ ದಿನದಂದು ಆರಂಭಗೊಳ್ಳುವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗರುಡನ ಪಟವನ್ನು ಧ್ವಜಸ್ತಂಭಕ್ಕೆ ಕಟ್ಟುವ ಮೂಲಕ ಚಾಲನೆ ನೀಡಲಾಗಿತ್ತು.

ಪ್ರತಿ ದಿನವೂ ಕೂಡಾ ಒಂದೊಂದು ಉತ್ಸವವಾದಿಗಳು ನಡೆದು, ಸಪ್ತಮಿ ಹಾಗೂ ಅಷ್ಟಮಿಯಂದು ಹೂವಿನ ರಥೋತ್ಸವ ಸಹಸ್ರಾರು ಭಕ್ರವ್ರಂದದೊಂದಿಗೆ ನಡೆಯಿತು.

ಈ ಸಂದರ್ಬದಲ್ಲಿ ಸಚಿವ ಮಂಕಾಳು ವೈದ್ಯರು ಮಾತನಾಡಿ ಪ್ರತಿ ವರ್ಷದಂತೆ  ಈ ವರ್ಷವು ಕೂಡ ರಥೋತ್ಸವ ನಡೆಯುತ್ತಿದ್ದು  ಸಾವಿರಾರು ಭಕ್ತವೃಂದದವರು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದಾರೆ ಸರ್ವಜನರಿಗೂ ಭಗವಂತ ಸನ್ಮಂಗಳವನ್ನು ಉಂಟುಮಾಡಲಿ ಎಂದು ಹೇಳಿದರು

ರಾಮನವಮಿ ಯಂದು ಬೆಳಿಗ್ಗೆ ದೇವರು ರಥಾರೋಹಣ ಮಾಡುವ ಮೂಲಕ ಬೆಳಿಗ್ಗೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದ್ದು ಇಂದು ಸಂಜೆ ಸಹಸ್ರಕ್ಕೂ ಅಧಿಕ ಭಕ್ತರ ಹರ್ಷೋದ್ಘಾರಗಳ ನಡುವೆ ರಾಮ ಭಕ್ತನ ಹನುಮನ ರಥೋತ್ಸವ ಜರುಗಿತು. ಸಂಪ್ರದಾಯದಂತೆ  ಜೈನ ಹಾಗು ಮುಸ್ಲಿಂ ಕುಟುಂಬಕ್ಕೆ ಆಹ್ವಾನ ನೀಡುವುದರ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು.

ಸಹಸ್ರಾರು ಭಕ್ತ ಸಮೂಹದ ಹರ್ಷೊದ್ಘಾರದ ಮಧ್ಯೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥವನ್ನ ಕಂಡು ಭಕ್ತರು ಪುನೀತರಾಗಿದ್ದು, ದೇವರಿಗೆ ನಿಂತಲ್ಲಿಯೇ ಕೈ‌ಮುಗಿದು ನಮಸ್ಕರಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ  ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು.

ಪ್ರತಿವರ್ಷ ರಾಮನವಮಿಯಂದು  ಜರುಗುವ ಜಾತ್ರೆಯಲ್ಲಿ ಪರಸ್ಪರ ಸೌಹಾರ್ಧತೆಗೆ ಭಟ್ಕಳ ರಥೋತ್ಸವ ಪ್ರಮುಖವಾದದ್ದು. ಬುಧವಾರ ಸಂಜೆ ದೇವರ ಬ್ರಹ್ಮರಥೋತ್ಸವಕ್ಕೂ ಮುನ್ನ ಸಂಪ್ರದಾಯದಂತೆ ದೇವಸ್ಥಾನದ ಆಡಳಿತ ಮಂಡಳಿಯವರು ವಾದ್ಯಘೋಷಗಳ ಮೂಲಕ ತೆರಳಿ ಮುಸ್ಲಿಂ, ಜೈನ ಹಾಗೂ ಪ್ರಭು ಕುಟುಂಬಕ್ಕೆ ವೀಳ್ಯ ಸಮೇತ ಆಹ್ವಾನ ನೀಡಿದ್ದು ಆ ಬಳಿಕ ರಥದಲ್ಲಿ ಹನುಮಂತ ವಿರಾಜಮಾನರಾಗಿ ಕುಳಿತು ಪೂಜಾ ವಿಧಿ ವಿಧಾನದ ನಂತರ ಸಹಸ್ರಾರು ಭಕ್ತರು ಜೈ ಶ್ರೀ ರಾಮ ಘೋಷಣೆ ಕೂಗುತ್ತಾ ರಥವನ್ನು ಎಳೆದು ಹನುಮಂತನ ಸವಾರಿಯ ಮೂಲಕ ರಥೋತ್ಸವ ನಡೆಯಿತು.

ಮುಸ್ಲಿಂ ಸಮುದಾಯದ ಚರ್ಕಿನ್ ಕುಟುಂಬದ ಜೈನ ಸಮುದಾಯದ ,ಪ್ರಭು ಸಮುದಾಯದವರು ದೇಗುಲದ ಆಹ್ವಾನ ಸ್ವೀಕರಿಸಿದರು. ಎಲ್ಲ ಧರ್ಮದವರೂ ಪಾಲ್ಗೊಳ್ಳುವುದು ಭಟ್ಕಳ ಜಾತ್ರೆಯ ವಿಶೇಷವಾಗಿದೆ.

ಇನ್ನು ಬ್ರಹ್ಮರಥವನ್ನ ಹೂವಿನ ಪೇಟೆ, ಮುಖ್ಯ ರಸ್ತೆ ಮಾರ್ಗ, ರಥಬೀದಿಯ ಮೂಲ ದೇವಾಲಯದ ಮುಂಭಾಗದವರೆಗೂ ಎಳೆಯಲಾಯಿತು.

ಜಾತ್ರೆಯಲ್ಲಿ ಪಾಲ್ಗೊಳ್ಳುವ ಸಹಸ್ರಾರು ಸಂಖ್ಯೆಯ ಭಕ್ತರು ರಥವನ್ನ ಎಳೆದು ಪುನೀತರಾಗುವರದ ಜೊತೆಗೆ ಉತ್ಸಾಹದಿಂದ ಪಾಲ್ಗೊಂಡರು.

ವಾದ್ಯಗೊಷ್ಟಿ, ತಟ್ಟಿರಾಯ, ಹುಲಿವೇಷ, ಚಂಡೆವಾದ್ಯ ಹಾಗೂ ಕೇರಳ ಶೈಲಿಯ ಕೆಲ ಗೊಂಬೆಗಳು ಬ್ರಹ್ಮರಥೋತ್ಸವಕ್ಕೆ ಮೆರುಗು ತಂದವು.

WhatsApp
Facebook
Telegram
error: Content is protected !!
Scroll to Top