ಮುರ್ಡೇಶ್ವರದ ನೇತ್ರಾಣಿ ಎಡ್ವೆಂಚರ್ಸ ಮಾಲಿಕ ಗಣೇಶ ಹರಿಕಾಂತ ವಿರುದ್ದ ಅತ್ಯಾಚಾರದ ಪ್ರಕರಣ ದಾಖಲು.

ಅವಿವಾಹಿತೆಗೆ ಮಗು ಕರುಣಿಸಿ ನಾಪತ್ತೆಯಾದ ಆರೋಪಿಯ ಪತ್ತೆಗೆ ಬಲೆ ಬೀಸಿದ ಮುರ್ಡೇಶ್ವರ ಪೊಲೀಸರು.

ಭಟ್ಕಳ : ತಾಲೂಕಿನ ಮುರ್ಡೇಶ್ವರದ ನೇತ್ರಾಣಿ ಎಡ್ವೆಂರ‍್ಸ್ನ ಮಾಲಿಕ ಗಣೇಶ ಹರಿಕಾಂತ ವಿರುದ್ದ ಮಹಿಳೆಯೊರ್ವರು ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯ ತನಿಖೆಗೆ ಮುಂದಾಗಿದ್ದಾರೆ.
ಭಟ್ಕಳ ತಾಲೂಕಿನ ಮುರ್ಡೇಶ್ವರÀ ಸೋನಾರಕೇರಿ, ಪಟ್ರಗದ್ದೆ ನಿವಾಸಿ, ನೇತ್ರಾಣಿ ಎಡ್ವೆಂರ‍್ಸ್ ಎನ್ನುವ ಸ್ಕೂಬಾ ಡೈವಿಂಗ್ ಸಂಸ್ಥೆಯ ಮಾಲಿಕ ಗಣೇಶ ಮಂಜುನಾಥ ಹರಿಕಾಂತ ಆರೋಪಿ. ಮುರ್ಡೇಶ್ವರದಲ್ಲಿ ಈತನ ಮನೆಯಲ್ಲಿ ಬಸ್ತಿಮಕ್ಕಿಯ ಅವಿವಾಹಿತ ಯುವತಿಯೊರ್ವಳು ಮನೆಕೆಲಸಕ್ಕೆ ಬರುತ್ತಿದ್ದಳು. ೨೦೨೩ರ ಜೂನ್ ತಿಂಗಳಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆರೋಪಿ ಗಣೇಶ ಹರಿಕಾಂತ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಎಂದು ಆರೋಪಿಸಲಾಗಿದ್ದು  ನೀನು ಅವಿವಾಹಿತೆಯಾಗಿದ್ದು, ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಅವಿವಾಹಿತೆಯಾದ ನೀನು ಯಾರ ಬಳಿಯಾದರೂ ಈ ವಿಷಯ ಹೇಳಿದರೆ ನಿನ್ನದೆ ಮರ್ಯಾದೆ ಹೋಗುತ್ತದೆ. ಒಂದು ವೇಳೆ ಇಲ್ಲಿಯ ಕೆಲಸ ಬಿಟ್ಟರೆ ನಿನ್ನ ಮನೆಯವರನ್ನು ಸುಮ್ಮನೆ ಬಿಡುವದಿಲ್ಲ ಎಂದು ಹೆದರಿಸಿದ್ದಾನೆ. ಬಳಿಕ ಮನೆಕೆಲಸಕ್ಕೆ ತೆರಳಿದ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದೆ ಸಮಯದಲ್ಲಿ ೫-೬ ಬಾರಿ ಅತ್ಯಾಚಾರ ಮಾಡಿ, ಯುವತಿ ಗರ್ಭಧರಿಸುವಂತೆ ಮಾಡಿದ್ದಾನೆ.  ಎಂದು ಯುವತಿ ಆರೋಪಿಸುತ್ತಿದ್ದು ಇದರ ಪರಿಣಾಮ ಎಪ್ರಿಲ್ ೭ ರಂದು ಯುವತಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಕುರಿತು ಆರೋಪಿ ಗಣೇಶ ಹರಿಕಾಂತ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಯುವತಿ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಈ ಪ್ರಕರಣದಲ್ಲಿ ಯುವತಿ ಸುಳ್ಳು ದೂರನ್ನು ದಾಖಲಿಸಿದ್ದಾಳೆ ಎಂದು ಆರೋಪಿ ದೂರುತ್ತಿದ್ದು ಒಂದು ವೇಳೆ ಆರೋಪಿ ತಾನು ತುಂಬಾ ಸಾಚಾ ಅನ್ನುವುದಾದರೆ ನಾಪತ್ತೆಯಾಗುವ ಅವಶ್ಯಕತೆ ಏನಿತ್ತು ಈಗಿನ ಕಾಲಮಾನದಲ್ಲಿ ಡಿ ಎನ್ ಎ ಪರಿಕ್ಷೇಗಳನ್ನು  ಮಾಡುವ ಅವಕಾಶ ಇದೆ ನಮ್ಮ ಕಾನೂನು ವ್ಯವಸ್ಥೆಯಲ್ಲಿ ಅದು ಸರ್ವೆಸಾಮಾನ್ಯವಾಗಿದೆ   ಅದನ್ನು ಮಾಡುವುದನ್ನು ಬಿಟ್ಟು ಆರೋಪಿ ತೆರೆಮರೆಯಲ್ಲಿ ಕುಳಿತು ನನಗೂ ಇದಕ್ಕೂ ಸಂಬಂದವೆ ಇಲ್ಲ ಎಂದು ಹೇಳುತ್ತಿದ್ದಾನೆಯಂತೆ ಸೋ  ಅರೋಪಿಯ ಈ ನಡೆಯಿಂದ  ಆತನ ಮೇಲೆ  ಅನುಮಾನಗಳು ತೀರಾ ದಟ್ಟವಾಗುತ್ತಿದ್ದು  ಈ ಬಗ್ಗೆ ಆರಕ್ಷಕರು ತಪ್ಪಿತಸ್ಥ ಹೆಣ್ಣುಬಾಕ ಕಾಮುಕರನ್ನು ಕೂಡಲೆ ಹೆಡೆಮುರಿಕಟ್ಟ ಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ

WhatsApp
Facebook
Telegram
error: Content is protected !!
Scroll to Top