ಮಹಾಶಿವರಾತ್ರಿ ಜಾರಗಣಾ ಉತ್ಸವ ಸಂಪನ್ನ: ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಮಂಕಾಳು ವೈದ್ಯ

ದೇಶ ಮಟ್ಟದಲ್ಲಿ ನನ್ನ ಕ್ಷೇತ್ರ ಹೆಸರು ಮಾಡಬೇಕೆನ್ನುವುದೆ ನನ್ನ ಆಸೆ ಮಂಕಾಳು ವೈದ್ಯ ಹೇಳಿಕೆ

ಭಟ್ಕಳ ತಾಲೂಕಿನ ಪುರಾಣ ಪ್ರಸಿದ್ದ ಐತಿಹಾಸಿಕ ಕ್ಷೇತ್ರವಾದ ಮುರ್ಡೆಶ್ವರದಲ್ಲಿ ಜಿಲ್ಲಾಡಳಿತ ತಾಲೂಕ ಆಡಳಿತ ಹಾವಿ ವಿವಿದ ಸರಕಾರಿ ಇಲಾಖೆಯ ಸಂಯೋಗದಲ್ಲಿ ನಡೆದ ಮಹಾಶಿವರಾತ್ರಿ ಜಾಗರಣಾ ಉತ್ಸವವು ಅತಿ ವಿಜ್ರಂಬಣೆಯಿಂದ ಸಂಪನ್ನವಾಗಿದ್ದು ಭಕ್ತ ಜನಗಳು ಭಕ್ತಿಪರವಶತೆಯಲ್ಲಿ ಮಿಂದೆದ್ದರು

ಹೌದು ವಿಕ್ಷಕರೇ ಉತ್ತರ ಕನ್ನಡ ಇತಿಹಾಸದಲ್ಲೆ ಪ್ರಪ್ರಥಮ ಭಾರಿಗೆ ಸಚಿವ ಮಂಕಾಳ ವೈದ್ಯರ ಕ್ಷೇತ್ರವಾದ ಭಟ್ಕಳ ಮುರ್ಡೆಶ್ವರದಲ್ಲಿ ಜಿಲ್ಲಾಡಳಿತದ ಹಾಗು ಇತರ ಸರಕಾರಿ ಇಲಾಖೆಯ ಸಂಯೋಗದಲ್ಲಿ ಶಿವರಾತ್ರಿ ಜಾಗರಣಾ ಉತ್ಸವವು ನಡೆಯಿತು ಕಾರ್ಯಕ್ರಮಕ್ಕೆ ಸಚಿವ ಮಂಕಾಳು ವೈದ್ಯರು ಚಾಲನೆಯನ್ನು ನೀಡಿ ಮಾತನಾಡಿ ನನ್ನ ಕ್ಷೇತ್ರದ ಅಭಿವೃದ್ದಿಯೆ ನನಗೆ ಮೊದಲ ಆದ್ಯತೆ ಇಂದು ಇತಿಹಾಸದಲ್ಲೆ ಪ್ರಥಮ ಭಾರಿಗೆ ನನ್ನ ಮುರ್ಡೆಶ್ವರದಲ್ಲಿ ಶಿವನ ಆರಾದನೆಯ ಪ್ರಯುಕ್ತ ಶಿವರಾತ್ರಿ ಜಾಗರಣೆಯನ್ನು ನಾವು ಹಮ್ಮಿಕೊಂಡಿದ್ದೆವೆ ಇದು ತುಂಬ ಸಂತೋಷವನ್ನು ತಂದಿದೆ ನಾವು ಇಂತಹ ಕಾರ್ಯಕ್ರಮವನ್ನು ಮೊದಲು ಕೆವಲ ಟಿ .ವಿ ಪರದೆಯಲ್ಲಿ ನೊಡುತ್ತಿದ್ದೆವು ಆದರೆ ಇಂದು ನನ್ನ ಕ್ಷೇತ್ರದಲ್ಲೆ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೆವೆ ನನ್ನ ಕ್ಷೇತ್ರದ ಹೆಸರು ದೇಶ ಮಟ್ಟದಲ್ಲಿ ಹೆಸರೆಉ ಮಾಡಬೇಕು ಎನ್ನುವುದೆ ನನ್ನ ಆಸೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನರ ಅವರು ಮಾತನಾಡಿ ಇಂದು ಮುರ್ಡೆಶ್ವರದಲ್ಲಿ ಪ್ರಥಮಬಾರಿಗೆ ಸರಕಾರದ ವಿವಿದ ಇಲಾಖೆಯ ಸಂಯೋಜನೆಯಲ್ಲಿ ಮಹಾಶಿವರಾತ್ರಿ ಜಾಗರಣಾ ಉತ್ಸವ ನಡೆಯುತ್ತಿದೆ ಇದು ಜಿಲ್ಲಾ ಉತ್ಸುವಾರಿ ಸಚಿವ ಮಂಕಾಳ ವೈದ್ಯರ ಕನಸಾಗಿತ್ತು ಅವರ ಆಸೆಯಂತೆ ನಾವು ಇಂದು ಕಾರ್ಯಕ್ರಮವನ್ನು ನಡೆಸುತ್ತಿದ್ದೆವೆ ಇಂದು ನಾವು ಅಹೋರಾತ್ರಿ ಪರಶೀವನ ಆರಾದಿಸುತ್ತಿದ್ದೆವೆ ಇದು ನಮಗೆ ತುಂಬ ಸಂತೋಷದ ಸಂಗತಿಯಾಗಿದೆ ಇದು ಸಚಿವ ಮಂಕಾಳು ವೈದ್ಯರ ಪರಿಶ್ರಮವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ ಈ ಕಾರ್ಯಕ್ರಮ ನಿರಂತರವಾಗು ಪ್ರತಿವರ್ಷ ನಡೆಯಬೇಕು ಎಂದು ಹೇಳಿದರು

ಕಾರ್ಯಕ್ರಮ ಅಹೋರಾತ್ರಿ ನಡೆದಿದ್ದು ಭಕ್ತಾಧಿಗಳು ಶಿವನ ಭಕ್ತಿರಸದಲ್ಲಿ ಮಿದ್ದೆದ್ದರು ಎಂದರೆ ತಪ್ಪಾಗಲಿಕ್ಕಿಲ್ಲಾ ಈ ಸಂದರ್ಬದಲ್ಲಿ ಬಿವಿರ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಅಪರ ಜಿಲ್ಲಾದಿಕಾರಿಗಳು ಪ್ರಕಾಶ ಗೋಪು ರಜಪೂತ, ಜಿಲ್ಲಾ ಪೋಲಿಸ್‌ ಅಧಿಕ್ಷಕರು ವಿಷ್ಣುವರ್ದನ್‌ , ಸಹಾಯಕ ಆಯುಕ್ತೆ ಡಾ: ನಯನಾ ತಹಶಿಲ್ದಾರ್‌ ತಿಪ್ಪೆಸ್ವಾಮಿ ತ್ತಿಪ್ಪೆ ಸ್ವಾಮಿ

WhatsApp
Facebook
Telegram
error: Content is protected !!
Scroll to Top