ಸಾರ್ವಜನಿಕರ ಆಗ್ರಹದ ಮೇಲೆ ರಸ್ತೆಗೆ ಚಾಚಿಕೊಂಡಿರುವ ಅನದೀಕ್ರತ ಅಂಗಡಿ ಮಳಿಗೆಯ ಬಾಗಶಃ ತೆರವಿಗೆ ಮುಂದಾದ ಪುರಸಭೆ

ಪುರಸಭೆಯಿಂದ ಪ್ರಾಯೋಗಿಕವಾಗಿ ತೆರವು ಕಾರ್ಯಾಚರಣೆ

ಭಟ್ಕಳ : ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಬಿದಿ ಬದಿಯ ಅಂಗಡಿಗಳು ಪುಟ್‌ ಪಾತ್‌ ಮತ್ತು ಜನರು ನಡೆದಾಡುವ ಮಾರ್ಗಗಳನ್ನು ಆಕ್ರಮಿಸಿಕೊಂಡಿದ್ದು ರಸ್ತೆ ಅಪಘಾತಗಳು ಸಂಬವಿಸುವ ಪರಿಸ್ಥಿತಿ ನಿರ್ಮಾಣವಾದ ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪುರಸಭೆಗೆ ದೂರುನಿಡಿದ ಹಿನ್ನೆಲೆಯಲ್ಲಿ ಪುರಸಭೆಯು ಮಾಧ್ಯಮ ಸಹಿತ ಬಿದಿ ಬದಿಯ ಅಕ್ರಮ ಅಂಗಡಿ ಮುಗ್ಗಟಿನ ತೆರವು ಕಾರ್ಯಾಚರಣೆಗೆ ಮುಂದಾಗಿ ಪ್ರಾಯೋಗಿಕವಾಗಿ ಕೆಲವು ಹಣ್ಣಿನ ಅಂಗಡಿ ಹಾಗು ಇನ್ನಿತರ ಅಂಗಡಿಯ ತೆರವು ಕಾರ್ಯಾಚರಣೆ ನಡೆಸಲಾಯಿತು

ಹೌದು ವಿಕ್ಷಕರೆ ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬಿದಿಬದಿಯ ಕೆಲವು ಅಂಗಡಿ ಮಳಿಗೆ ಅಕ್ರಮವಾಗಿ ಪುಟ್ಬಾತ್‌ ಹಾಗು ಜನರು ನಡೆದಾಡುವ ರಸ್ತೆಗಳಲ್ಲಿ ಅಂಗಡಿ ಅಕ್ರಮವಾಗಿ ವಿಸ್ತರಿಸಿಕೊಂಡಿದ್ದು ಇದರ ಕಾರಣ ರಸ್ತೆಯಲ್ಲಿ ತಿರುಗಾಡುವ ಪಾದಾಚಾರಿಗಳಿಗೆ ಪ್ರಾಣಾಪಾಯ ಎದುರಾಗುವ ಸಂಬವವಿರುತ್ತದೆ ಈ ಬಗ್ಗೆ ಪುರಸಭೆಗೆ ಸ್ಥಳಿಯ ಸಾರ್ವಜನಿಕರು ನಿರಂತರವಾಗಿ ದೂರು ನೀಡುತ್ತಲೆ ಬರುತ್ತಿದ್ದಾರೆ ಆದರೆ ಪುರಸಭೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿತ್ತು ಆದರೆ ಇಂದು ಈ ಬಗ್ಗೆ ಮಾಧ್ಯಮದವರು ಸಾರ್ವಜನಿಕರ ಈ ದೂರಿನ ಬಗ್ಗೆ ವಿಚಾರಿಸಿದಾಗ ಪುರಸಭಾ ಅಧಿಕಾರಿ‌ ಮಾಧ್ಯಮ ಸಹಿತ ಅಕ್ರಮವಾಗಿ ಪುಟ್ಬಾತ್‌ ಮತ್ತು ರಸ್ತೆಗೆ ಚಾಚಿರುವ ಬಾಗಶಃ ಅಂಗಡಿಯನ್ನು ತೆರವು ಕಾರ್ಯಾಚರಣೆಗೆ ಮುಂದಾಯಿತು

ಈ ಸಂದರ್ಬದಲ್ಲಿ ಪುರಸಭಾ ಮುಖ್ಯಾಧಿಕಾರಿ ಎನ್‌ ಎಂ ಮೆಸ್ತಾ ಅವರು ಮಾತನಾಡಿ ಬಿದಿ ಬದಿಯ ವ್ಯಾಪಾರಸ್ಥರು ಪುಟ್ಬಾತ್‌ ಮೆಲೆ ಅತಿಕ್ರಮಿಸಿಕೊಂಡಿದ್ದಾರೆ ಇದರಿಂದ ಒಳಚರಂಡಿಳು ಕಸಕಡ್ಡಿಗಳಿಂದ ಬ್ಲಾಕ್‌ ಆಗುತ್ತವೆ ಮತ್ತು ಪಾದಾಚಾರಿಗಳಿಗೆ ಅಪಘಾತವಾಗುವ ಸಂಬವಿರುತ್ತದೆ ಈಗಾಗಲೆ ಒಂದು ಹಣ್ಣಿನ ಅಂಗಡಿ ತೆರವುಗೊಳಿಸಿದ್ದೆವೆ ಯಾವ ಅಂಗಡಿಕಾರರು ಅಕ್ರಮವಾಗಿ ದಾರಿಯಲ್ಲಿ ಮತ್ತು ಪುಟ್ಬಾತ್ಗಳ ಮೇಲೆ ಅಂಗಡಿ ನಿರ್ಮಿಸಬಾರದು ಇಂತಹ ಘಟನೆ ಕಂಡುಬಂದಲ್ಲಿ ಕೂಡಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು

ಭಟ್ಕಳ ತಾಲೂಕಿನಲ್ಲಿ ಇಂತಹ ಅಕ್ರಮ ಬಿದಿಬದಿ ಅಂಗಡಿಗಳು ನಿರಂತರವಾಗಿ ತಲೆ ಎತ್ತುತ್ತಲೆ ಬದ್ದಿದ್ದು ನಿರಂತರವಾಗಿ ಸಾರ್ವಜನಿಕರು ಬಯದಲ್ಲೆ ತಿರುವ ಪ್ರಸಂಗ ಭಟ್ಕಳ ಪುರಸಭೆ ವ್ಯಾಕ್ತಿಯಲ್ಲಿ ನಾವು ಕಾಣಬಹುದಾಗಿದೆ ಈ ಬಗ್ಗೆ ಸಾರ್ವಜನಿಕರು ದೂರನ್ನು ನಿಡಿದರು ಕೂಡ ಈ ಪುರಸಭೆ ಕಣ್ಣೋರೆಸುವ ಕೆಲಸ ಮಾತದೆಯೆ ಹೋರತು ಸೂಕ್ತಕ್ರಮವನ್ನು ಕೈಗೋಳ್ಳುತ್ತಿಲ್ಲಾ ಇಂದು ಕೂಡ ಪ್ರಾಯೋಗಿಕವಾಗಿ ಎರಡೆ ಎರಡು ಹಣ್ಣಿನ ಅಂಗಡಿಯನ್ನು ತೆರವುಗೊಳಿಸಿದಹಾಗೆ ಮಾಡಿ ಕೇವಲ ಎಚ್ಚರಿಕೆಯನ್ನೆಷ್ಟೆ ನೀಡಿ ಸುಮ್ಮನಾಯಿತು ಮುಖ್ಯವಾಗಿ ಈ ಪುರಸಭೆಗೆ ಸಾರ್ವಜನಿಕರ ದೂರು ಎಂದರೆ ಅಸಡ್ಡೆ ಸಾರ್ವಜನಿಕರು ಏನು ಮಾಡಿಯಾರು ಎಂಬ ಹುಂಬತನವು ಕೂಡ ಇದೆ ಎಂದರೆ ತಪ್ಪಾಗಲಿಕ್ಕಿಲ್ಲ ಇಲ್ಲಿ ಸರಕಾರಿ ಅಧಿಕಾರಿ ವರ್ಗಾವಣೆಯಿಲ್ಲಿ ಹತ್ತರಿಂದ ಹದಿನೈದು ವರ್ಷಗಳಿಂದ ಪುರಸಭೆಯಲ್ಲೆ ಬೇರು ಬಿಟ್ಟು ಕೆಲಸ ಮಾಡದೆ ಜಿಡ್ಡುಹಿಡಿದು ಕುಳಿತಿದ್ದಾರೆ ಕೆಲವರಂತು ಗುಂಪುಗಾರಿಕೆ ಮಾಡುತ್ತ ರಾಜಕಿಯಕ್ಕೆ ಇಳಿದಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ ಈ ಬಗ್ಗೆ ನಮ್ಮ ಕರಾವಳಿ ಸಮಾಚಾರ ಸದ್ಯದಲ್ಲಿ ವಿಸ್ತ್ರತ ವರದಿ ಒಂದು ಬಿತ್ತರಿಸಲಿಕ್ಕಿದೆ ಇನ್ನು ಈ ಬಿದಿ ಬದಿಯ ಕೆಲವು ವ್ಯಾಪಾರಿಗಳ ಉಪಟಳವನ್ನು ಪುರಸಭೆ ಯಾವರೀತಿ ನಿವಾರಣೆ ಮಾಡಿತು ಎಂಬುವುದನ್ನು ಕಾದು ನೋಡಬೇಕಾಗಿದೆ ಪುರಸಭೆಯ ಹಾಗುಹೊಗುಗಳು ಇನ್ನು ನಿಮ್ಮ ಕರಾವಳಿ ಸಮಾಚಾರದಲ್ಲಿ ಕಂತುಗಳಂತೆ ಪ್ರಸಾರವಾಗಲಿ ನಿರಿಕ್ಷಿಸಿ

WhatsApp
Facebook
Telegram
error: Content is protected !!
Scroll to Top