ಭಟ್ಕಳದ ಜೀವನದಿ ಸರಾಬಿ ನದಿಯನ್ನು ಉಳಿಸಿ ರಕ್ಷಿಸುವಂತೆ ಮನವಿ

ಭಟ್ಕಳ ಜೀವನದಿಯಾಗಿರುವ  ಸರಾಬಿ ನದಿಯನ್ನು ಉಳಿಸುವ ಸಲುವಾಗಿ ನದಿ ಕಲುಷಿತಗೊಳ್ಳಲು ಕಾರಣವಾಗಿರುವ ಗೌಸಿಯಾ ಸ್ಪೀಟ್ ಒಳಚರಂಡಿ ಘಟಕವನ್ನು ಸ್ಥಳಾಂತರಿಸುವ ಕುರಿತು ಸರಾಬಿ ನದಿ ಉಳಿಸಿ ಹೊರಾಟ ಸಮಿತಿ ವತಿಯಿಂದ  ತಾಲೂಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು 

ಭಟ್ಕಳದ ಜೀವನದಿಯಾಗಿರುವ ಸರಾಬಿ ಅವಸಾನದ  ಅಂಚಿನಲ್ಲಿದೆ. ಒಂದು ಕಾಲದಲ್ಲಿ ಗತವೈಭವನ್ನು ಮೆರೆದ ಈ ನದಿ ಈಗ ಒಳಚರಂಡಿ ನೀರು ಶೇಖರಣಾ ಘಟಕವಾಗಿ ಮಾರ್ಪಟ್ಟಿದ್ದು ಈ ಭಾಗದ ಜನರ ಜೀವನಕ್ಕೆ ಕುತ್ತನ್ನು ತಂದಿದೆ. ಇದಕ್ಕೆ ಮುಖ್ಯ ಕಾರಣ  ನಿರ್ಮಾಣವಾಗಿರುವ ಒಳಚರಂಡಿ ಘಟಕ, ಇದರಿಂದಾಗಿ ಸರಾಬಿ ನದಿಗೆ ನಿರಂತರವಾಗಿ ಕಲುಷಿತ ನೀರು ಶೇಖರಣೆಗೊಳ್ಳುತ್ತಿದೆ. ಅದ್ದರಿಂದ ಸರಾಬಿ ನದಿಯನ್ನು ಸ್ವಚ್ಛಗೊಳಿಸುವುದರೊಂದಿಗೆ ನದಿ ಕಲುಷಿತಗೊಳ್ಳಲು ಮೂಲಕ ಕಾರಣವಾಗಿರುವ ಒಳಚರಂಡಿ ಸಂಸ್ಕರಣ ಘಟಕವನ್ನು ಕೂಡಲೇ ಸ್ಥಳಾಂತರಿಸಿ ಈ ಭಾಗದ ಜನರಿಗೆ ನೆಮ್ಮದಿಯ ಬದುಕು ಬದುಕಲು ಅವಕಾಶ ಮಾಡಿಕೊಡಬೇಕೆಂದು ಸರಾಬಿ ನದಿ ಹೋರಾಟ ಸಮಿತಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದೆ. ಎಂದು ಮನವಿ ಸಲ್ಲಿಸಲಾಯಿತು

ಈ ಸಂದರ್ಬದಲ್ಲಿ ಇನಾಯತುಲ್ಲಾ ಶಾಬಂದ್ರಿ ಹಾಗು‌ ಸರಾಬಿ ನದಿ ಹೋರಾಟ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಇನ್ನಿತರ ಪಧಾದಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top