ಸತತ ೧೪ ವರ್ಷಗಳಿಂದ ರಂಜನ್ ಏಜೆನ್ಸಿಯ ವತಿಯಿಂದ ಮಹಾ ಶಿವರಾತ್ರೆಯ ಪ್ರಯುಕ್ತ  ಭಕ್ತರ ಪಾದಯಾತ್ರೆ

ಸುದ್ದಿಗೋಷ್ಟಿಯಲ್ಲಿ ರಂಜನ್ ಇಂಡೆನ್ ಏಜನ್ಸಿಯ ಮಾಲಕಿ ಹಾಗೂ ಬಿ.ಜೆ.ಪಿ. ಜಿಲ್ಲಾ ಮಹಿಳಾ ಅಧ್ಯಕ್ಷೆ ಶಿವಾನಿ ಶಾಂತಾರಾಮ ಹೇಳಿದರು.

ಭಟ್ಕಳ: ಸತತ ೧೪ ವರ್ಷಗಳಿಂದ ರಂಜನ್ ಏಜೆನ್ಸಿಯ ವತಿಯಿಂದ ಮಹಾ ಶಿವರಾತ್ರೆಯ ದಿನ ಭಕ್ತರ ಪಾದಯಾತ್ರೆಯನ್ನು ಆಯೋಜಿಸಲಾಗುತ್ತಿದೆ ಈ ವರ್ಷವೂ ಮಾರ್ಚ ೮ ರಂದು ಶಿವರಾತ್ರಿಯ ದಿನ ಬೆಳಿಗ್ಗೆ ಭಟ್ಕಳ ತಾಲೂಕಿನ ಸಾವಿರಾರು ಭಕ್ತರು ಪಾದಯಾತ್ರೆ ಮಾಡಲಿದ್ದಾರೆ ಎಂದು ಇಂಡೆನ್ ಏಜನ್ಸಿಯ ಮಾಲಕಿ ಹಾಗೂ ಬಿ.ಜೆ.ಪಿ. ಜಿಲ್ಲಾ ಮಹಿಳಾ ಅಧ್ಯಕ್ಷೆ ಶಿವಾನಿ ಶಾಂತಾರಾಮ ಹೇಳಿದರು.


ಅವರು ನಗರದ ತಮ್ಮ ಇಂಡೆನ್ ಏಜೆನ್ಸಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಇಂದಿನ ಆದುನಿಕ ಜೀವನದಲ್ಲಿ ನಾವು ನಡಿಗೆಯನ್ನು ಕಡಿಮೆ ಮಾಡಿದ್ದೇವೆ. ಎಲ್ಲಿಗೆ ಹೋಗುವದಾದರೂ ಸದಾ ವಾಹನ ಬಳಸುತ್ತಿದ್ದೇವೆ. ಕಾಲ್ನಡಿಗೆಯ ಮೂಲಕ ಭಕ್ತಿಯ ಜಾಗೃತೆಯನ್ನು ಉತ್ತೇಜಿಸುವುದಗೋಸ್ಕರ ಸತತ ೧೪ ವರ್ಷಗಳಿಂದ ಶಿವರಾತ್ರಿಯ ದಿನದಂದು ಭಟ್ಕಳದಿಂದ ೧೪ ಕಿ.ಮೀ ದೂರದಲ್ಲಿರುವ ಮುರುಡೇಶ್ವರ ಶಿವನ ದೇವಾಲಯಕ್ಕೆ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದು ಈ ವರ್ಷವೂ ಪಾದಯಾತ್ರೆ ನಡೆಯಲಿದೆ ಎಂದರು. ಬೆಳಿಗ್ಗೆ ೪ ಗಂಟೆಗೆ ಭಟ್ಕಳದ ಚೌಳೇಶ್ವರ ದೇವಾಲಯದ ಆವರಣದಿಂದ ಪಾತ್ರೆಯಾತ್ರೆ ಹೊರಟು ಮುರುಡೇಶ್ವರಕ್ಕೆ ತಲುಪಲಾಗುವುದು. ಪಾದಯಾತ್ರೆಗೆ ಹೊರಟ ಎಲ್ಲ ಭಕ್ತಾದಿಗಳಿಗೆ ವಾಪಾಸು ಭಟ್ಕಳಕ್ಕೆ ಬರಲು ಉಚಿತವಾಗಿ ಸರಕಾರಿ ಬಸ್ಸಿನ ವ್ಯವಸ್ಥೆ ಮಾಡಲಾಗುವುದು ಎಂದ ಅವರು ಮುರುಡೇಶ್ವರದ ದೇವಾಲಯದಲ್ಲಿ ಬೆಳಿಗ್ಗೆ ೪ ಗಂಟೆಯ ಓಳಗೆ ದೇವರ ದರ್ಶನ ವ್ಯವಸ್ಥೆ ಮಾಡಲು ದೇವಾಲಯದ ಆಡಳಿತ ಒಪ್ಪಿದ್ದು ದರ್ಶನದ ನಂತರ ಎಲ್ಲ ಭಕ್ತಾಧಿಗಳಿಗೆ ಬೆಳಗಿನ ಉಪಹಾರ ವ್ಯವಸ್ಥೆ ಕೂಡ ದೇವಾಲಯದ ಆಡಳಿತ ಮಂಡಳಿ ಮಾಡಿರುತ್ತದೆ . ಈ ಪಾದಯಾತ್ರೆ ಬರುವ ದಾರಿಯಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಹಣ್ಣು, ಮತ್ತು ಪಾನೀಯ ವ್ಯವಸ್ಥೆ ಮಾಡಲಾಗುವುದು, ಭಕ್ತರಿಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಸಕಲ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವ್ಯದ್ಯರವರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಈಗಾಗಲೇ ಆಶ್ವಾಸನೆ ನೀಡಿದೆ ಎಂದ ಅವರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಮಹಿಳಾ ಯಾತ್ರಿಕರು ಕಡ್ಡಾಯವಾಗಿ ತಮ್ಮ ಆಧಾರ ಕಾರ್ಡನ ಜೇರಾಕ್ಸ ಪ್ರತಿ ತರಬೇಕೆಂದು ವಿನಂತಿಸಿದರು. ಈ ಸಂದರ್ಭದಲ್ಲಿ ಕಾಲ್ನಡಿಗೆಯ ಮೂಲಕ ಓರ್ವರೇ ತಿರುಪತಿಗೆ ಹೋಗಿ ಬಂದ ವಿನೋಧ ಭಟ್ ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಪತ್ರಿಕಾಗೋಷ್ಟಿಯಲ್ಲಿ ಗುರುಕೃಪಾ ಬ್ಯಾಂಕಿನ ನಿರ್ದೇಶಕ ಕುಮಾರ ನಾಯ್ಕ, ತಿಲಕ ಯುವಕ ಸಂಘದ ಮಾಜಿ ಅಧ್ಯಕ್ಷ ಮಾಸ್ತಿ ಮೊಗೇರ, ಕಿರಣ್ ಚಂದಾವರ , ಈಶ್ವರ ನಾಯ್ಕ ಕಡವಿನಕಟ್ಟೆ, ಇದ್ದರು.

WhatsApp
Facebook
Telegram
error: Content is protected !!
Scroll to Top