ಭಟ್ಕಳ ತಾಲೂಕಿನಾಧ್ಯಂತ ಸಂವಿಧಾನ ಜಾಗ್ರತಿ ಜಾಥ

ನಮ್ಮ‌ ಸಂವಿಧಾನ ನಮ್ಮ ಹೆಮ್ಮೆ  ಸಹಾಯಕ ಆಯುಕ್ತೆ ಡಾ:  ನಯನಾ

ಭಟ್ಕಳ :   ಭಾರತ ಸಂವಿಧಾನ ಅಂಗೀಕರಿಸಿಕೊಂಡು 75ನೇ ವರ್ಷದ ಆಚರಣೆಯ ಪ್ರಯುಕ್ತ “ಸಂವಿಧಾನ ಜಾಗೃತಿ ಜಾಥ” ಹಾಗೂ “ಸಮಾವೇಶ” ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ದಿನಾಂಕ: 26ನೇ ಜನವರಿ 2024 ರಂದು ಚಾಲನೆ ನೀಡಿದ್ದು. ಈ ಮೂಲಕ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಒಳಗೊಂಡ ಸ್ತಬ್ಧ ಚಿತ್ರವನ್ನು ಭಟ್ಕಳ  ತಾಲೂಕ ಪ್ರತಿ  ಗ್ರಾಮ ಪಂಚಾಯತಗಳಲ್ಲಿ ಪ್ರದರ್ಶಿಸಿ ಎಲ್ಲಾ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು   ಹಮ್ಮಿಕೊಳ್ಳಲಾಯಿತು

ದಿನಾಂಕ: 20.02.2024 ರಿಂದ ದಿನಾಂಕ: 23.02.2024 ರವರೆಗೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಸ್ಥಬ್ಧ ಚಿತ್ರವು (ಬ್ಯಾಸ್ಕೋ) ಭಟ್ಕಳ ತಾಲ್ಲೂಕಿನಲ್ಲಿ ಸಂಚರಿಸಿ . ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಸ್ಥಬ್ಧ ಚಿತ್ರವು (ಟ್ಯಾಬೈ) ದಿನಾಂಕ: 20.02.2024 ರಂದು ಬೈಲೂರು ಮತ್ತು ಮಾವಳ್ಳಿ- ಮಾರ್ಗವಾಗಿ, ದಿನಾಂಕ: 21.02.2024 ರಂದು ಮಾವಳ್ಳಿ-2, ಕಾಯ್ಕಿಣಿ, ಬೇಂದ್ರೆ. ಕೊಪ್ಪ, ಶಿರಾಲಿ ಮಾರ್ಗವಾಗಿ, ದಿನಾಂಕ: 22.02.2024 ರಂದು ಹೆಬಳೆ. ಮಾವಿನಕುರ್ವೆ, ಮುಂಡಳ್ಳಿ, ಮುಟ್ಟಳ್ಳಿ. ಭಟ್ಕಳ ಪಟ್ಟಣ ಮಾರ್ಗವಾಗಿ ಮತ್ತು ದಿನಾಂಕ: 23.02.2024 ರಂದು ಮಾರುಕೇರಿ, ಹಾಡವಳ್ಳಿ, ಕೋಣಾರ. ಯಲ್ವಡಿಕವೂರ, ಬೆಳಕೆ ಮಾರ್ಗವಾಗಿ ಸಂಚರಿಸಿ   ಕಾರ್ಯಕ್ರಮವನ್ನು ಯಶಸ್ವಿಗೊಳಿಸಿತು  ದಿನಾಂಕ 23.02.2024 ರಂದು ಬೆಳ್ಕೆ ಗ್ರಾಮ‌ ಪಂಚಾಯತ್ ವ್ಯಾಪ್ತಿಯಲ್ಲಿ ವಿಜ್ರಂಭಣೆಯಿಂದ ಕಾರ್ಯಕ್ರಮ ನಡೆದಿದ್ದು ಗ್ರಾಮ ಪಂಚಾಯತ್ , ಶಾಲಾ ವಿಧ್ಯಾರ್ಥಿಗಳು , ಊರ ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತರಾದ ಡಾ ನಯನ , ಪಂಚಾಯತ್ ಅಧ್ಯಕ್ಷ ಜಗದೀಶ ನಾಯ್ಕ , ಸಂಪನ್ಮೂಲ ವ್ಯಕ್ತಿಗಳಾದ ಕೇಶವ ಗೌಡಾ  ಅವರು ಮಾತನಾಡಿದರು

ತಾಲೂಕ ತಹಶಿಲ್ದಾರ್  ತಿಪ್ಪೆ ಸ್ವಾಮಿ, ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ , ಗೀತಾ ಹೆಗಡೆ  ನೋಡಲ್ ಅಧಿಕಾರಿ ವಿ ವಿ ಹೆಗಡೆ ,  CRP  ಜಯಶ್ರೀ ಆಚಾರ್ಯ,  ಬೆಳ್ಕೆ ಗ್ರಾಮ ಪಂಚಾಯತ್ ಪಿಡಿಓ ಮಂಜು ಗೌಡಾ, ಕಾರ್ಯದರ್ಶಿ ವಿಧ್ಯಾ ವಿ ಮಠದ್, ಸದಸ್ಯರಾದ ಪರಮೇಶ್ವರ ಮೊಗೇರ್, ಪಾಂಡುರಂಗ ನಾಯ್ಕ, ಯಮುನಾ ನಾಯ್ಕ, ಲಲಿತಾ ಮೊಗೇರ್, ಶಾಂತಿ ಮೊಗೇರ್ ಹಾಗು ಶಾಲಾ ಶಿಕ್ಷಕರಾದ ಎಂ ಎನ್ ನಾಯ್ಕ , ಪ್ರಕಾಶ ಶಿರಾಲಿ , ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಸ್ವಸಹಾಯ ಸಂಘದ  ಪಧಾಧಿಕಾರಿಗಳು ಸದಸ್ಯರು ಊರ ನಾಗರಿಕರು ಹಾಗು ಇನ್ನಿತರರು ಉಪಸ್ಥಿತರಿದ್ದರು .

WhatsApp
Facebook
Telegram
error: Content is protected !!
Scroll to Top