ಸುದ್ದಿಘೋಷ್ಟಿಯಲ್ಲಿ ದೇವಸ್ಥಾನ ಜಿರ್ಣೋದ್ದಾರ ಸಮಿತಿ ಹೇಳಿಕೆ
ಭಟ್ಕಳದ ರೈಲ್ವೆ ನಿಲ್ದಾಣದ ಹತ್ತಿರವಿರುವ ಶ್ರೀ ನಾಗಮಾಸ್ತಿ ಕ್ಷೇತ್ರದ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮವು ಫೆಬ್ರವರಿ 21 ಮತ್ತು 22 ರಂದು ನಡೆಸಲಾಗುತ್ತಿದೆ ಎಂದು ಶ್ರೀ ನಾಗಮಾಸ್ತಿ ಜಿರ್ಣೊದ್ಧಾರ ಸಮಿತಿಯ ಅಧ್ಯಕ್ಷರಾದ ಸತೀಶಕುಮಾರ್ ಎನ್ ನಾಯ್ಕ ಹೇಳಿದರು.
ದೇವಸ್ಥಾನದ ಆವರಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು. ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ಸಂದರ್ಭದಲ್ಲಿ ಫೆಬ್ರವರಿ 17 ರಂದು ನಾಗಸಂಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ 21 ರಂದು ಬೆಳಿಗ್ಗೆ 9 ಗಂಟೆಗೆ ನೂತನ ವಿಗ್ರಹದ ಪುರ ಪ್ರದಕ್ಷಿಣೆ ನಡೆಯಲಿದೆ. ಫೆಬ್ರವರಿ 22 ರಂದು ಬೆಳಿಗ್ಗೆ ಶ್ರೀ ನಾಗಯಕ್ಷೇ ಸಂಸ್ಥಾನದಿಂದ ಶ್ರೀ ದೇವಿಗೆ ಬೆಳ್ಳಿಯ ಕವಚ ಸಮರ್ಪಣೆಯ ಜತೆಗೆ ವಿವಿಧ ಧಾರ್ಮಿಕ ವಿಧಿವಿದಾನಗಳು ನಡೆಯುತ್ತದೆ. ಮಹಾಪೂಜೆಯ ನಂತರ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದರು
ಹೊರೆಕಾಣಿಕೆಗೆ ಸಂಬಂದ ಪಟ್ಟಂತೆ 20 ರಿಂದ ಆರಂಭಗೊಂಡು 21 ರ ಸಂಜೆ 5 ರ ವರೆಗೆ ಭಕ್ತಾಧಿಗಳು ಹೊರೆಕಾಣಿಕೆಯನ್ನು ಅರ್ಪಿಸಬಹುದಾಗಿದೆ ಎಂದರು. ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಮುಂಬರುವ ದಿನಗಳಲ್ಲಿ ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಿತಾರಾಮ ನಾಯ್ಕ, ರಾಮಣ್ಣ ಬಳೆಗಾರ, ಪರಮೇಶ್ವರ ನಾಯ್ಕ, ನಾಗರಾಜ ನಾಯ್ಕ, ಶ್ರೀಧರ್ ನಾಯ್ಕ, ಹೇಮಂತ ನಾಯ್ಕ, ಲಕ್ಷ್ಮಣ ನಾಯ್ಕ ಮತ್ತಿತರರು ಇದ್ದರು.