ಶ್ರೀ ರಾಮಸೇನೇಯ ರಾಷ್ಟ್ರ ನಾಯಕ ಪ್ರಮೋದ್‌ ಮುತಾಲಿಕ ಭಟ್ಕಳಕ್ಕೆ ಬೇಟಿ

ಕರಾಟೆಯಲ್ಲಿ ಸಾದನೆ ಮಾಡಿದ ಆರ್ಯನ್‌ ನಾಯ್ಕ ಅವರ ಮನೆಗೆ ತೆರಳಿ ಸನ್ಮಾನ ಮಾಡಿದ ಪ್ರಮೋದ್‌ ಮುತಾಲಿಕ

ಭಟ್ಕಳ: ಶ್ರೀರಾಮ ಸೇನೆಯ ರಾಷ್ಟ್ರ ನಾಯಕರಾದ ಪ್ರಮೋದ್‌ ಮುತಾಲಿಕ್‌ ಅವರು ಭಟ್ಕಳ ತಾಲೂಕಿನ ವಿಶ್ವ ಪ್ರಸಿದ್ದಿ ಸ್ಥಳ ಮುರ್ಡೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿ ದೈವ ಕ್ರಪೇಗೆ ಪಾತ್ರರಾದರು ಹಾಗು ರಾಷ್ಟ್ರ ಮಟ್ಟದಲ್ಲಿ ಕರಾಟೆ ಕ್ಷೇತ್ರದಲ್ಲಿ ಸಾದನೆ ಮಾಡಿದ ಮುಂಡಳ್ಳಿಯ ಆರ್ಯನ್‌ ವಾಸು ನಾಯ್ಕ ಅವರ ಮನೆಗೆ ತೇರಳಿ ಬಾಲಕ ಆರ್ಯನ್‌ ಸಹಿತ ಐವರು ರಾಷ್ಟ್ರ ಮಟ್ಟದ ಕರಾಟೆ ಸಾದಕರಿಗೆ ಸನ್ಮಾನ ವನ್ನು ಮಾಡಿದರು

ಈ ಸಂದರ್ಬದಲ್ಲಿ ಅವರು ಮಾತನಾಡಿದ ಅವರು ಉತ್ತರ ಕನ್ನಡದ ಕಿರ್ತಿಯನ್ನು ಕರಾಟೆಯಲ್ಲಿ ಸಾದನೆ ಮಾಡಿದ ಈ ಐವರು ದೇಶ ಮಟ್ಟಕ್ಕೆ ಕೊಂಡೊಯ್ಯದಿದ್ದಾರೆ ಆರ್ಯನ್‌ ತನ್ನ ತಂದೆಯಂತೆ ಈತ ಸಾದನೆಯ ಹಾದಿಯನ್ನು ಹಿಡಿದಿದ್ದಾನೆ ಬೆಳೆಯ ಸಿರಿ ಮೊಳಕೆಯಂತೆ ಎಂಬಂತೆ ಈತ ರಾಷ್ಟ್ರ ಮಟ್ಟದಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲೆ ಉತ್ತಮ ಸಾದನೆಯನ್ನು ಮಾಡಿದ್ದಾನೆ ಯುವಕರು ಇಂತಹ ಸಾದನೆಯತ್ತ ಗಮನ ಹರಿಸಬೇಕು ಎಂದು ಹೇಳಿದರು.

ಈ ಸಂದರ್ಬದಲ್ಲಿ ಶ್ರೀರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ ಮುರ್ಡೆಶ್ವರ , ಶ್ರೀ ರಾಮಸೇನೆಯ ಉತ್ತರ ಕನ್ನಡ ರಾಜ್ಯ ಅಧ್ಯಕ್ಷರಾದ ರಾಜು ನಾಯ್ಕ ಹಾಗು ಇನ್ನಿತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top