ಭಟ್ಕಳ ತಾಲೂಕ ಸಭಾ ಭವನದಲ್ಲಿ ಸಂವಿಧಾನ ಜಾಥಾ ಪೂರ್ವ ಭಾವಿ ಸಭೆ

ಸಾರ್ವಜನಿಕರಲ್ಲಿ ಸಂವಿಧಾನದ ಬಗ್ಗೆ ಜಾಗ್ರತಿ ಮೂಡಬೇಕಾಗಿರುವುದು ಬಹು ಮುಖ್ಯ ತಹಶಿಲ್ದಾರ್‌ ತಿಪ್ಪೇ ಸ್ವಾಮಿ

ಭಟ್ಕಳ : ಪೆಬ್ರವರಿ ೨೦ ರಂದು ಸಂವಿಧಾನ ಜಾತಾ ಜಾಗ್ರತಿ ಕಾರ್ಯಕ್ರಮದ ಸ್ಥಬ್ದ ಚಿತ್ರಗಳು ಭಟ್ಕಳ ತಾಲೂಕಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕ ಪಂಚಾಯತ್‌ ಸಭಾಭವನದಲ್ಲಿ ಪೂರ್ವ ಭಾವಿ ಸಭೆಯನ್ನು ತಾಲೂಕ ತಹಶಿಲ್ದಾರರ ಮುಂದಾಳತ್ವದಲ್ಲಿ ಹಮ್ಮಿಕೊಳ್ಳಲಾಯಿತು

ಹೌದು ವೀಕ್ಷಕರೇ ದಿನಾಂಕ 20/02/2024 ರಂದು ತಾಲೂಕಿನ ಬೈಲೂರಿಗೆ ಸಂವಿಧಾನ ಜಾಥಾ ಆಗಮಿಸಲಿದ್ದು ಈ ಕುರಿತು ತಾಲೂಕ ಪಂಚಾಯತ್‌ ಸಭಾಭವನದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಯಿತು ಈ ಸಂದರ್ಬದಲ್ಲಿ ತಾಲೂಕ ತಹಶಿಲ್ದಾರರು ಮಾತನಾಡಿ ತಾಲೂಕಿಗೆ ಜಾಗೃತಿ ಕಾರ್ಯಕ್ರಮದ ಸ್ಥಬ್ದ ಚಿತ್ರವು ಆಗಮಿಸಲಿದ್ದು, ತಾಲ್ಲೂಕಿಗೆ ಪ್ರವೇಶಿಸುವಾಗ ಜನಪ್ರತಿನಿಧಿಯೊಂದಿಗೆ ಹಾಗೂ ಶಿಷ್ಟಾಚಾರದೊಂದಿಗೆ ಜಾತವನ್ನು ಸ್ವಾಗತ ಮಾಡಿಕೊಳ್ಳುವುದು ಮತ್ತು ಬೀಳ್ಕೊಡುವುದು. ಸದರಿ ಸಂವಿಧಾನ ಜಾಥಾ ಸ್ಥಬ್ದ ಚಿತ್ರದ ವಾಹನವು ನಿಗಧಿಪಡಿಸಿದ ಗ್ರಾಮ ಪಂಚಾಯತಗಳ ಮುಖಾಂತರ ಹಾದುಹೋಗುವ ಮಾರ್ಗ ಮಧ್ಯದಲ್ಲಿ ಇರುವ ಹೈಸ್ಕೂಲ್/ಪಿ.ಯು.ಸಿ./ಪದವಿ ವಿದ್ಯಾರ್ಥಿಗಳಿಗೆ ಸಂವಿಧಾನ ಅರಿವು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸುವುದು ಮತ್ತು ಸಂಬಂಧಿಸಿದ ಗ್ರಾಮ ಪಂಚಾಯತ ಮುಖ್ಯ ಬೀದಿಯಲ್ಲಿ ಸಂವಿಧಾನ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಎಲ್ಲಾ ಇಲಾಖೆಯ ಸಹಕಾರದೊಂದಿಗೆ ಕಾರ್ಯಕ್ರಮವನ್ನು ನಿರ್ವಹಿಸುವುದು ಮುಖ್ಯವಾಗಿರುತ್ತದೆ ಎಂದು ಹೇಳೀದರು

ಈ ಸಂದರ್ಬದಲ್ಲಿ ವೇದಿಕೆಯಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಯ ಗೀತಾ ಭಟ್ಟ ಅವರು ಮಾತನಾಡಿ ಸಂವಿಧಾನ ಜಾಗೃತಿ ಜಾಥಾ ಸ್ಮಬ್ರ ಚಿತ್ರವು ಭಟ್ಕಳ ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯತದಿಂದ ಹೊರಟು ಮಾವಳ್ಳಿ-1, ಮಾವಳ್ಳಿ-2, ಕಾಯ್ಕಿಣಿ, ಬೇಂಗ್ರ, ಶಿರಾಲಿ, ಕೊಪ್ಪ, ಹೆಬಳೆ, ಮಾವಿನಕುರ್ವೆ, ಮುಂಡಳ್ಳಿ, ಭಟ್ಕಳ ಪಟ್ಟಣ, ಮಾರುಕೇರಿ, ಹಾಡವಳ್ಳಿ, ಕೋಣಾರ, ಯಲ್ಪಡಿಕವೂರ, ಮುಟ್ಟಳ್ಳಿ ಮತ್ತು ಬೆಳಕೆ ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಉಪಹಾರದ ವ್ಯವಸ್ಥೆ, ವೇದಿಕೆ ಮತ್ತು ನೆರಳಿಗಾಗಿ ಶಾಮಿಯಾನ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಕಲ್ಪಿಸುವುದು ಮುಖ್ಯವಾಗಿರುತ್ತದೆ ಆಯಾ ಪ್ರದೇಶದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು

ಈ ಸಂದರ್ಬದಲ್ಲಿ ತಾಲೂಕ ಪಂಚಾಯತ್‌ ಕಾರ್ಯನಿರ್ವಹಣಾ ಅಧಿಕಾರಿ, ಭಟ್ಕಳ ಪುರಸಭಾ ಮುಖ್ಯಾಧಿಕಾರಿ, ಜಾಲಿ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ , ಪೊಲೀಸ್‌ ಇಲಾಖಾ ಅಧಿಕಾರಿಗಳು, ಗ್ರಾಮ ಪಂಚಾಯತ್‌ ಪಿ ಡಿ ಓ ಹಾಗು ಇನ್ನಿತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top