ವ್ಯಸನಗಳಿಂದ ಕ್ಯಾನ್ಸರ್ ರೋಗಗಳು ಕಂಡುಬರುತ್ತದೆ

ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಇಂದು ಭಟ್ಕಳದ ತಾಲೂಕಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಸಲುವಾಗಿ ಜಾಥಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್ ಸಿ ಡಿ ಘಟಕ, ತಾಲೂಕಾ ಆರೋಗ್ಯಾಧಿಕಾರಿ ಕಛೇರಿ ಭಟ್ಕಳ, ತಾಲೂಕಾ ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಮಂಕಾಳ ಎಸ್ ವೈದ್ಯ ಹಾಜರಿದ್ದು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಸಚಿವರು ಕ್ಯಾನ್ಸರ್ ಕಾಯಿಲೆಯು 25 ಪ್ರತಿಶತ ನಮಗೆ ಅರಿವಿಲ್ಲದೆ ಬರುತ್ತದೆ ಆದರೆ 75 ಪ್ರತಿಶತ ನಮಗೆ ಗೊತ್ತಿದ್ದು ಬರುತ್ತದೆ ಅಂದರೆ ನಮಗಿರುವ ದುರಭ್ಯಾಸಗಳಿಂದ ತಂಬಾಕು ಮುಂತಾದ ಮಾದಕ ವಸ್ತುಗಳ ಸೇವನೆಯಿಂದ ಬರುತ್ತದೆ. ಈ ಮೂಲಕ ಅವರನ್ನೆ ನಂಬಿಕೊಂಡಿರುವವರ ಜೀವಗಳು ತೊಂದರ ಸಿಲುಕಿದಂತಾಗುತ್ತದೆ. ಮತ್ತು ತಾಲೂಕಿನಲ್ಲಿ 3 ಪ್ರತಿಶತ ಕ್ಯಾನ್ಸರ್ ಪೀಡಿತರಿದ್ದಾರೆ. ಮುಂಬರವು ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಕ್ಯಾನ್ಸ್‍ರ್ ಆಸ್ಪತ್ರೆ ಮಾಡುವ ಯೋಚನೆಗಳಿದೆ ಎಂದರು.

ಕ್ಯಾನ್ಸ್‍ರ್ ಗೆದ್ದು ಬಂದ ಮಹಿಳೆಯೋರ್ವರು ಮಾತನಾಡಿ ನಾವು ಕುಟುಂಬದಲ್ಲಿ ಮಾಡುವ ಹುಟ್ಟುಹಬ್ಬದಂತ ಆಚರಣೆಗೆ ಬಹಳಷ್ಟು ಹಣವನ್ನು ಹಾಳು ಮಾಡುತ್ತೇವೆ ಆದರೆ ಅದೇ ಹಣವನ್ನು ಪ್ರತಿ ವರ್ಷವು ನಮ್ಮ ದೇಹದ ಆರೋಗ್ಯ ಸ್ಥಿತಿಯನ್ನು ಪರೀಕ್ಷೇಗೋಳಪಡಿಸಲು ವಿನಿಯೋಗಿಸಿದರೆ ನಾವು ಕ್ಯಾನ್ಸರ್ ನಂತಹ ಕಾಯಿಲೆಯನ್ನು ಆದಷ್ಟು ಬೇಗ ಗುರುತಿಸಿ ಅದಕ್ಕೆ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಬಹುದು ಎಂದು ಹೇಳಿದರು.

WhatsApp
Facebook
Telegram
error: Content is protected !!
Scroll to Top