ಕರಾಟೆಯಲ್ಲಿ ದೇಶದ ಮುಡಿಗೆ ಕೀರ್ತಿಯ ಕೀರಿಟವಿಟ್ಟ ಭಟ್ಕಳದ ಯುವಕರು

ಕರಾಟೆ ಪಟು ದಿವಂಗತ ವಾಸು ನಾಯ್ಕ ಶ್ರಮಕ್ಕೆ ಸಂದ ಫಲವೆಂದ ಭಟ್ಕಳದ ಕರಾಟೆ ದಿಗ್ಗಜರು

ಭಟ್ಕಳ: ನೇಪಾಳದ ಕಮ್ಮಂಡುವಿನಲ್ಲಿ ಭಾರತವನ್ನು ಪ್ರತಿನಿಧಿಸಿದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತೊಟೋಕಾನ್ ಕರಾಟೆ ಇನ್‌ಸ್ಟಿಟ್ಯೂಟ್ (ಮೇನ್ ಕ್ಲಾಸ್) ನ 5 ವಿದ್ಯಾರ್ಥಿಗಳು 7 ಚಿನ್ನದ ಪದಕ, ಒಂದು ಕಂಚು, ಒಂದು ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ.

ನೇಪಾಳದ ಕಲ್ಮಂಡುವಿನಲ್ಲಿ ಜ.28ರಿಂದ ಆರಂಭವಾದ ಸ್ಪರ್ಧೆ 2.30 ಮುಕ್ತಾಯಗೊಂಡಿದೆ. ಪಂದ್ಯದಲ್ಲಿ ಶ್ರೀಲಂಕಾ, ಪಾಕಿಸ್ತಾನ, ಭೂತಾನ, ಬಾಂಗ್ಲಾದೇಶ ಮತ್ತು ಭಾರತ ದಿಂದ ಒಟ್ಟು 350 ಸ್ಪರ್ಧಾಳುಗಳು ಭಾಗ ವಹಿಸಿದರು. ಭಾರತದಿಂದ ಒಟ, 27 ಕ್ರೀಡಾಪಟುಗಳು, ಕರ್ನಾಟಕದಿಂದ 5 ಕ್ರೀಡಾಪಟುಗಳು ಭಾಗವಹಿಸಿದ್ದರು.

ಪಟ್ಟಣದ ಮಂಜುನಾಥ ಗಜಾನನ ದೇವಡಿಗ, ಅರ್ಯನ ವಾಸುದೇವ ನಾಯ್ಕ, ಪ್ರವೀಣ ಹರಿಜನ, ಭರಣಿ ಅದಿ ದ್ರಾವಿಡ, ತೇಜಸ್ವಿ ಮೊಗೇರ ಐವರು ವಿದ್ಯಾರ್ಥಿಗಳು ಜಯಗಳಿಸಿದ್ದಾರೆ. ಭಟ್ಕಳದ ಶೂಟೋಕಾನ್ ಸಂಸ್ಥೆ ಮುಖ್ಯ ತರಬೇತುದಾರರಾದ ಸುರೇಶ ಮೊಗೇರ, ಉಮೇಶ ಮೊಗೇರ, ರಾಜಶೇಖರ ಗೌಡ ಹಾಗೂ ಗೋಪಾಲ್ ನಾಯ್ಕ, ಹನ್ನಿ ಸಿ. ರಾಜನ್ ತರಬೇತಿ ನೀಡಿದ್ದರು.

ಈ ಸಂತೋಷದ ಕ್ಷಣಕ್ಕಾಗಿ ಭಟ್ಕಳ ನಗರದಾದ್ಯಂತ ಜಯಗಳಿಸಿದ ಕ್ರೀಡಾ ಪಟ್ಟುಗಳನ್ನು ಸನ್ಮಾನಿಸಿ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು

ಈ ಸಂದರ್ಬದಲ್ಲಿ ಕರಾಟೆ ಶಿಕ್ಷಕ ಸುರೇಶ ಮೊಗೇರ್ ಅವರು ಸ್ಪರ್ದೆಯಲ್ಲಿ ಗೆದ್ದ ಕ್ರೀಡಾಪಟುಗಳಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದಿಸಿದರು

ಹಾಗೆ ಊರಿನ ಮುಖಂಡರಾದ ರಾಮನಾಥ ಬಳೆಗಾರ ಅವರು ದೇಶಕ್ಕೆ ಹೆಮ್ಮೆತಂದ ಕರಾಟೆ ಪಟುಗಳಿಗೆ ಅಭಿನಂದಿಸಿದರು ಹಾಗು ತನು ಮನ ಧನಗಳಿಂದ ಸಹಕರಿಸಿ ಸಚಿವ ಮಂಕಾಳು ವೈದ್ಯರಿಗು ಧನ್ಯವಾದವನ್ನು ಅರ್ಪಿಸಿದರು

ಈ ಸಂದರ್ಬದಲ್ಲಿ ಕರಾಟೆ ಸ್ಪರ್ದಾ ವಿಜೇತ ಕರಾಟೆ ಶಿಕ್ಷಕ ದಿವಂಗತ ವಾಸು ನಾಯ್ಕ ಅವರ ಪುತ್ರ ಆರ್ಯನ್ ಮಾತನಾಡಿ ಹರ್ಪವನ್ನು ವ್ಯಕ್ತ ಪಡಿಸಿದರು

ಮತ್ತು ಕರಾಟೆ ಶಿಕ್ಷಕ ನಾಗರಾಜ ದೇವಾಡಿಗ ಮಾತನಾಡಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು

WhatsApp
Facebook
Telegram
error: Content is protected !!
Scroll to Top