ಭಟ್ಕಳದಲ್ಲಿ ಮರಾಠ‌ ಸಮಾಜಕ್ಕೆ ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಅವಕಾಶ ನೀಡುವಂತೆ ಶ್ಯಾಮಸುಂದರ್ ಗಾಯಕ್ ವಾಡ್ ಆಗ್ರಹ

ಮರಾಠ ಸಮಾಜವನ್ನು 3ಬಿ ವರ್ಗದಿಂದ 2ಎ ವರ್ಗಕ್ಕೆ ಸೆರ್ಪಡೆ ಮಾಡುವಂತೆ ಆಗ್ರಹಿಸಿ ಸುದ್ದಿಘೊಷ್ಟಿ

ನಾವು ಮರಾಠ ಸಮಾಜದವರು ಕರ್ನಾಟಕದಾದ್ಯಂತ ಒಟ್ಟು 50 ಲಕ್ಷ ಜನಸಂಖ್ಯೆ ಇದೆ. ನಮ್ಮ ಸಮುದಾಯ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಹಳ ಹಿಂದೆ ಇದೆ. ನಮ್ಮ ಸಮಾಜವನ್ನು 3ಬಿ ವರ್ಗದಿಂದ 2ಎ ವರ್ಗಕ್ಕೆ ಸೇರಿಸುವಂತೆ ಸುಮಾರು 20 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ ಆದರೆ ಕಳೆದ ಬಾರಿ ಬೊಮ್ಮಾಯಿ ನೆತೃತ್ವದ ಬಿಜೆಪಿ ಸರ್ಕಾರ ತನ್ನ ಕೊನೆಯ ಸಂಪುಟ ಸಭೆಯಲ್ಲಿ 3ಬಿ ವರ್ಗದಿಂದ 2ಎವರ್ಗಕ್ಕೆ ಸೇರಿಸಲು ಪ್ರಯತ್ನಿಸಿತು ಆದರೆ ಅದು ಇಲ್ಲಿಯವರೆಗೂ ಜಾರಿಗೊಳ್ಳಲಿಲ್ಲ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ವಿ.ಎಸ್ ಶ್ಯಾಮಸುಂದರ್ ಗಾಯಕ್‍ವಾಡ್ ಹೇಳಿದರು.

ಅವರು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳುವ ಹಿನ್ನೆಲೆಯಲ್ಲಿ. ಮುಂಡಗೋಡಿನ ಸಾಲಾಗಾಂ ಪೀಠಾಧೀಶರಾದ ಶ್ರೀ ವಿರೂಪಾಕ್ಷ ಮಹಾರಾಜ ಸ್ವಾಮೀಜಿಗಳ ಸಹಿತ ಬನವಾಸಿಯಿಂದ ರಾಮರಥ ಯಾತ್ರೆಯನ್ನು ಕೈಗೊಂಡಿದ್ದು ಅದು ಇಂದು ಭಟ್ಕಳ ತಾಲೂಕಿಗೆ ತಲುಪಿದ್ದು ಭಟ್ಕಳದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು 500 ವರ್ಷಗಳಿಂದ ರಾಮಮಂದಿರಕ್ಕಾಗಿ ಹೋರಾಟ ನಡೆದಿತ್ತು ಈ ಕಾರಣಕ್ಕಾಗಿ ಇಂದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮ ಮಂದಿರ ಸ್ಥಾಪನೆಯ ದಿನದಂದು ತಮ್ಮ ತಮ್ಮ ಮನೆಯಲ್ಲಿ ಶ್ರೀರಾಮನ ಫೊಟೋವಿಟ್ಟು ದೀಪ ಬೆಳಗಿಸಿ ಜೈ ಶ್ರೀ ರಾಮ ಘೋಷಣೆ ಮೊಳಗಿಸಬೇಕು. ಮತ್ತು ಉತ್ತರ ಕನ್ನಡದಲ್ಲಿ 4 ರಿಂದ 4.5 ಲಕ್ಷ ಮರಾಠರಿದ್ದಾರೆ. ನಾವು ಮೊದಲಿನಿಂದಲೂ 6 ಬಾರಿ ಸಂಸದರಾದ ಅನಂತ ಕುಮಾರ ಹೆಗಡೆಯವರಿಗೆ ನಮ್ಮ ಸಮಾಜ ಬೆಂಬಲವಾಗಿ ನಿಂತಿದೆ. ಈ ಬಾರಿ ಮರಾಠ ಸಮಾಜಕ್ಕೆ ಸಂಸದ ಸ್ಥಾನವನ್ನು ಬಿಟ್ಟುಕೊಡುವಂತೆ ಕೇಳಿಕೊಂಡಿದ್ದೇವೆ. ಬಿಜೆಪಿ ಹೈಕಮಾಂಡ ಈ ಬಾರಿ ಮರಾಠ ಸಮುದಾಯದವರನ್ನು ಸಂಸತ್ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡಬೇಕು. ಇಲ್ಲದಿದ್ದರೆ ಮರಾಠ ಸಮಾಜ ಚುನಾವಣೆಯನ್ನೆ ಬಹಿಸ್ಕರಿಸಬೇಕಾಗುತ್ತದೆ ಎಂದರು.

ಇನ್ನೂ ಶ್ರೀ ವಿರೂಪಾಕ್ಷ ಮಹಾರಾಜ ಸ್ವಾಮೀಜಿಗಳು ಮಾತನಾಡಿ ನಮ್ಮ ದೇಶದಲ್ಲಿ ರಾಮನಾಮ ಜಪ ಜನರಲ್ಲಿ ನೆಮ್ಮದಿಯನ್ನು ತರುತ್ತಿದೆ. ಜೈ ಶ್ರೀರಾಮ ಎಂಬ ಘೋಷಣೆ ಜಗತ್ತಿನ ದುಷ್ಟ ಶಕ್ತಿಯನ್ನು ನಾಶಮಾಡುತ್ತದೆ. ಪ್ರತಿಯೊಬ್ಬರ ಮನೆಯನ್ನು ನಾವು ದೇವಾಲಯ ಮಾಡಿಕೊಳ್ಳಬೇಕು ಎಂದರು.

WhatsApp
Facebook
Telegram
error: Content is protected !!
Scroll to Top