ಭಗವಂತ ರಾಮ ಬಿಜೆಪಿ ಪಕ್ಷಕ್ಕೆ ಮಾತ್ರ ಸೀಮಿತನಲ್ಲ ಆತ ಇಡಿ ಹಿಂದೂ ಸಮೂದಾಯದ ಆರಾಧ್ಯ

ರಾಜಕಿಯಕ್ಕಾಗಿ ಹಿಂದೂಗಳ ಮದ್ಯ ಒಡಕು ಹುಟ್ಟಿಸುದನ್ನು ನಿಲ್ಲಿಸಿ

ರಾಮ ಮಂದಿರ ನಮ್ಮ ಶ್ರದ್ದೆ ಹಾಗು ಭಕ್ತಿಯ‌ ಕೆಂದ್ರ ಅದು ಬಿಜೆಪಿ ಪಕ್ಷದ ರಾಜಕಿಯ ಮಾಡಲು ಇರುವ ಆಸ್ತಿಯಲ್ಲ ಇಡಿ ಹಿಂದೂ ಸಮಾಜದ ಭಕ್ತಿ ಶ್ರದ್ದೆಯ ಕೆಂದ್ರ ಎಂದು ಭಟ್ಕಳ ಬ್ಲಾಕ್ ಕಾಂಗ್ರೇಸ್ ನ ಅಧ್ಯಕ್ಷರಾದ  ವೆಂಕಟೇಶ ನಾಯ್ಕ ಹೇಳಿದರು

ಭಟ್ಕಳದ ಕಾಂಗ್ರೇಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರಾವಾರದಲ್ಲಿ ಮಂಕಾಳ ವೈದ್ಯರು ನೀಡಿದ ಹೇಳಿಕೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು
ಹಿಂದು ಧರ್ಮದ ಅಥವಾ ರಾಮನ ವಿರುದ್ಧ ನೀಡಿದ ಹೇಳಿಕೆ ಆಗಿರಲಿಲ್ಲ. ಹಿಂದೂ ಧರ್ಮದಲ್ಲಿ ಎಲ್ಲಾ ಕಾರ್ಯಕ್ರಮ ಮುಗಿದ ನಂತರ ಮಂತ್ರಾಕ್ಷತೆ ಕೊಡುವ ಪರಿಪಾಠವಿರುವಿದೆ ಎಂಬುವುದು ಸಚಿವರ ಹೇಳಿಕೆ ಹಿಂದಿನ ಉದ್ದೇಶವಾಗಿತ್ತು ಎಂದು ಭಟ್ಕಳ ಬ್ಲಾಕ್ ಕಾಂಗ್ರೇಸ್ ನ ಅಧ್ಯಕ್ಷರಾದ ವೆಂಕಟೇಶ ನಾಯ್ಕ ಹೇಳಿದರು.

ಮೊದಲೆಲ್ಲ ಬಿಜೆಪಿಯವರು
ಬೇರೆ ಬೇರೆ ಧರ್ಮಗಳನ್ನು ಎತ್ತಿಕಟ್ಟಿ ರಾಜಕಾರಣ ಮಾಡುತ್ತಿದ್ದರು ಆದರೆ ಈಗ ಹಿಂದುಗಳಲ್ಲೆ ಒಡಕು ಮೂಡಿಸಿ ರಾಜಕಾರಣ ಮಾಡುತ್ತಿದ್ದಾರೆ. ಮಂಕಾಳ ವೈದ್ಯರು ಈ ಮೊದಲು ಪಕ್ಷೇತರರಾಗಿ ಆಯ್ಕೆಯಾಗಿ ಬಂದಾಗ ಜಿರ್ಣಾವಸ್ಥೆಯಲ್ಲಿದ್ದ ಚರ್ಚ್, ಮಸಿದಿ, ಮತ್ತು ದೇವಾಲಯಗಳ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದರು. ಆದರೆ ಈಗ ಬಿಜೆಪಿಯವರು ಸಚಿವರು ರಾಮನ ವಿರುದ್ಧ ಮಾತಾಡುತ್ತಾರೆ ಎಂದು ಹೇಳಿಕೆ ಕೊಡುತ್ತಿದ್ದಾರೆ. ಮಂಕಾಳ ವೈದ್ಯರು ಸೇರಿದಂತೆ ನಾವೆಲ್ಲರೂ ರಾಮಭಕ್ತರು. ನಮ್ಮ ಸಚಿವರು 8 ವರ್ಷಗಳ ಹಿಂದೆ ತಾನೂ ರಾಮ ಮಂದಿರ ನಿರ್ಮಾಣ ಮಾಡಿದ್ದೇನೆ ಎಂದಿದ್ದರು ಅದು ನಿಜಕ್ಕೂ ಸತ್ಯವಾದ ಮಾತು. ಕರಿಕಲ್‍ನಲ್ಲಿ ಧ್ಯಾನಮಂದಿರದಲ್ಲಿ ರಾಮನಿದ್ದಾನೆ. ಅಂದರೆ ಅದು ಕೂಡ ರಾಮ ಮಂದಿರವೆ ಆಗಿದೆ ಎಂದು ಹೇಳಿದರು.

ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ನಾಯ್ಕ ಹೇಳಿಕೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಬಿಜೆಪಿ ನಮ್ಮ ಹಿಂದೂ ಧರ್ಮವನ್ನು ರಾಜಕಿಯಕ್ಕಾ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ ರಾಮ ಮಂದಿರ ನಮ್ಮ ಆಸ್ತಾ ಕೆಂದ್ರ ಮಂದಿ ಬಿಜೆಪಿ ಪಕ್ಷದ ಸ್ವತ್ತಲ್ಲ ಅದು ಬಿಜೆಪಿಯ ರಾಜಕಿಯ ಮಾಡುವ ಆಸ್ತಿಯಲ್ಲ ಇಡಿ ಹಿಂದೂ ಸಮಾಜದ ಭಕ್ತಿ ಶ್ರದ್ದೆಯ ಕೆಂದ್ರ

ಈ ಸಂದರ್ಭದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೇಸ್ ನ ಕಾರ್ಯಧರ್ಶಿ ಸುರೇಶ ನಾಯ್ಕ, ರಾಮಾ ಮೊಗೇರ, ಜಯಶ್ರೀ ಮೊಗೇರ, ಮಹಿಳಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷೇ ನಯನಾ ನಾಯ್ಕ, ಕಿಸಾನ್ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ, ಬೆಳಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ ನಾಯ್ಕ, ಕೊಪ್ಪ ಪಂಚಾಯತ್ ಮಾಸ್ತಿ ಗೊಂಡ , ತಾಲೂಕ ಪಂಚಾಯತ್ ಮಾಜಿ ಸದಸ್ಯೆ ಮೀನಾಕ್ಷಿ ನಾಯ್ಕ , ಶಿರಾಲಿ ಗ್ರಾಮ‌ ಪಂಚಾಯತ್ ಮಾಜಿ ಅಧ್ಯಕ್ಷರಾದ ರೇವತಿ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು
ಮತ್ತಿತರರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top