ಕರ್ನಾಟಕದಲ್ಲಿ ಕನ್ನಡ ದಾಸೋಹವನ್ನು ಕನ್ನಡಿಗರಾದ ನಾವು ನಿರಂತರವಾಗಿ ಮಾಡುತ್ತೆವೆ: ಸಚಿವ ಮಂಕಾಳ ವೈದ್ಯ

ಜೆಂಕಾರ್ ಮೆಲೋಡಿಸ್ ಸಹಯೋಗದಲ್ಲಿ ಸಾಂಸ್ಕ್ರತಿಕ ಸೌರಭ 2024 ಸಂಪನ್ನ

ಭಟ್ಕಳ: ಕರ್ನಾಟಕದಲ್ಲಿ ಕನ್ನಡ ಇಂದು ವಿಜ್ರಂಬಿಸಿದೆ ಅಭಿವೃದ್ದಿ ಹೊಂದಿ ಬೆಳೆಯುತ್ತಿದೆ ಎಂದರೆ ಅದಕ್ಕೆ ಹಳ್ಳಿಗಾಡಿನ ಕನ್ನಡಿಗರ ಕೊಡುಗೆ ಅಪಾರವಾಗಿರುತ್ತದೆ ಎಂದು ಸಚಿವ ಮಂಕಾಳು ವೈದ್ಯರು ಹೇಳಿದರು

ಅವರು ಭಟ್ಕಳದ ಕಮಲಾವತಿ ಶಾನಬಾಗ್ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕಾರವಾರ ಮತ್ತು ಜೆಂಕಾರ್ ಮೆಲೋಡಿಸ್ ಅವರ ಸಂಹಯೋಗದಲ್ಲಿ ನಡೆದ ಸಾಂಸ್ಕ್ರತಿಕ  ಸೌರಭ 2024 ಎನ್ನುವ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡುತ್ತ ಕನ್ನಡ ಮತ್ತು ಸಂಸ್ಕ್ರತಿ ಎನ್ನುವುದು ನಮ್ಮ‌ ಜೀವನದ ಅವಿಭಾಜ್ಯ ಅಂಗವಾಗಬೇಕು ಸರಕಾರದ ವತಿಯಿಂದ ರಾಜ್ಯದಾದ್ಯಂತ ಕನ್ನಡ ಮತ್ತು ನಮ್ಮ ಸಂಸ್ಕ್ರತಿ ಬಗ್ಗೆ ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಾಲ್ಕು ದಿನದ ಕನ್ನಡ ಸಾಂಸ್ಕ್ರತಿ ಕಾರ್ಯಕ್ರಮ ನಡೆಯಲಿದೆ ಕನ್ನಡಿಗರಾದ ನಾವು ಯಾವಾಗಲು ಕನ್ನಡದ ಸೇವೆಯನ್ನು ಮಾಡುವಂತಾಗಬೇಕು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ವಿವಿದ ಗಣ್ಯರು ಕನ್ನಡ ಮತ್ತು ಸಂಸ್ಕತಿಯ ಬಗ್ಗೆ ಮಾತನಾಡಿದರು

ಕಾರ್ಯಕ್ರಮದಲ್ಲಿ ಜೆಂಕಾರ್ ಮೆಲೋಡಿಸ್ನ ಪ್ರಸನ್ನ ಪ್ರಭು ಅವರು ಸ್ವಾಗತ ಭಾಷಣ ಮಾಡಿದರೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನ್ನು ಡಾ: ರಾಮಚಂದ್ರ ಕೆ ಎಂ ಆಡಿದರು ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಸಂಜಯ್ಯ ಗುಡಿಗಾರ ಮಾಡಿದರು

ಈ ಸಂದರ್ಭದಲ್ಲಿ ತಾಲೂಕ ತಹಶಿಲ್ದಾರ್ ತಿಪ್ಪೆ ಸ್ವಾಮಿ ಜೆಂಕಾರ್ ಮೆಲೋಡಿಸನ ರಾಜಾರಾಮ್ ಪ್ರಭು ಹಾಗು ಇನ್ನಿತರರು ಉಪಸ್ಥಿತರಿದ್ದರು

ಕಾರ್ಯಕ್ರಮದ ಕೊನೆಯಲ್ಲಿ ಜೆಂಕಾರ್ ಮೆಲೋಡಿಸ್ ಕಲಾ ತಂಡದಿಂದ ವಿವಿದ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು

WhatsApp
Facebook
Telegram
error: Content is protected !!
Scroll to Top