ಭಟ್ಕಳದಲ್ಲಿ ೩ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಪೊಲೀಸ್ ಸಿಬ್ಬಂದಿಗಳ ವಸತಿ ಗೃಹ ಉದ್ಗಾಟನೆ

ಭಟ್ಕಳ: ರಾಜ್ಯದಲ್ಲಿ ೪೬ ಸಾವಿರ ಮನೆಗಳನ್ನು ಪೋಲೀಸ್ ಸಿಬ್ಬಂದಿಗಳಿಗೆ ನಿರ್ಮಾಣ ಮಾಡಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಪೊಲಿಸ್ ಸಿಬ್ಬಂದಿಗಳಿಗೆ ವಸತಿ ಮನೆಗಳನ್ನು ನೀಡುವ ಯೋಜನೆ ಇದೆ ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.


ಅವರು ರವಿವಾರ ಸಂಜೆ ಭಟ್ಕಳದ ಪೊಲೀಸ್ ಮೈದಾನದ ಸಮೀಪ ೩ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಪೊಲೀಸ್ ಸಿಬ್ಬಂದಿಗಳ ವಸತಿ ಗೃಹ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.
ವಸತಿ ಗೃಹಗಳನ್ನು ಸಿಬ್ಬಂದಿಗೆ ನೀಡುವುದರಿಂದ ಅವರು ತಮ್ಮ ಕರ್ತವ್ಯ ನಿರ್ವಹಿಸಲು ಉತ್ತೇಜನ ನೀಡಿದಂತಾಗುತ್ತದೆ ಎಂದ ಅವರು ಪೊಲೀಸ್ ಇಲಾಖೆ ಎಲ್ಲಾ ಇಲಾಖೆಗಳಿಂತ ಬಿನ್ನವಾಗಿದ್ದು ಪೊಲೀಸ್ ಇಲಾಖೆಯನ್ನು ಆಧುನಿಕ ರೀತಿಯಲ್ಲಿ ಸಜ್ಜುಗಳಿಸಲಾಗುವುದು . ಇತರ ಇಲಾಖೆಯಲ್ಲಿ ಸಾಮಾನ್ಯವಾಗಿ ಅಂತರಜಿಲ್ಲಾ ವರ್ಗಾವಣೆಯನ್ನು ಮಾಡಲಾಗುತ್ತಿದ್ದು ಆದರೆ ಪೊಲೀಸ ಇಲಾಖೆಯಲ್ಲಿ ಕೆಲವು ಯೋಗ್ಯ ಕಾರಣಗಳಿಂದ ಮಾಡಲಾಗುವುದು .ಆಧುನಿಕ ರೀತಿಯಲ್ಲ ಪೊಲೀಸ್ ಠಾಣೆಯನ್ನು ಸಜ್ಜಗೊಳಿಸಿ ಎಲ್ಲಾ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಹಾಕಿ ಬೆಂಗಳೂರಿನ ಕೇಂದ್ರ ಕಚೇಯಿಂದ ಎಲ್ಲ ಪೊಲೀಸ್ ಠಾಣೆಗಳ ಚಟುವಟಿಕೆಗಳನ್ನು ಗಮನಿಸುವಂತಹ ಹೊಸ ಯೋಜನೆ ಹಾಕಿಕೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಮೀನುಗಾರಿಕಾ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ, ಸಭೆಯನ್ಬು ಉದ್ದೇಶಿಸಿ ಮಾತನಾಡಿ ಉತ್ತರ ಕನ್ನಡದಲ್ಲಿ ಇನ್ನು ಹೆಚ್ಚಿನ ಅಭಿವೃದ್ದಿ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ
ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾ ಕಾಂಗ್ರೇಸ ಅಧ್ಯಕ್ಷ ಸಾಹಿ ಗಾಂವಕರ, ಭಟ್ಕಳ ಬ್ಲಾಕ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಸುರೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು .

WhatsApp
Facebook
Telegram
error: Content is protected !!
Scroll to Top