ಭಟ್ಕಳ ಅಕ್ರಮ ಮರಳು ಸಾಗಾಣಿಕೆ ವಿರುದ್ದ ಸಾರ್ವಜನಿಕರಿಂದ ಮನವಿ

ಭಟ್ಟಳ ತಾಲೂಕಿನಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಅಕ್ರಮವಾಗಿ ರಾತ್ರಿ ಹೊತ್ತು ಮರಳು|ತುಂಬಿದ ಲಾಲಿಗಳು ಬರುತ್ತಿದ್ದು, ಅವುಗಳ ನಿಯಂತ್ರಣ ಮಾಡಲು ನಾವು ಈ ವರಗೆ ಮಾಡಿದ ಮನವಿಗಳಿಂದ ಯಾವುದೇ |ಪ್ರಯೋಜನವಾಗಿರುವುದಿಲ್ಲ , ನಮ್ಮ ಈ ಮನವಿ ಪರಿಶೀಲಿಸಿ ಕೂಡಲೆ ಕ್ರಮ‌ ಕೈಗೊಳ್ಳಬೇಕು ಎಂದು ತಾಲೂಕಿನ ಸಾರ್ವಜನಿಕರು ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.

ತಾಲೂಕಿನಲ್ಲಿ ಇತ್ತೀಚೆಗಷ್ಟೇ ಮರಳು ಲಾಲಿಯೊಂದನ್ನು ಹಿಡಿದಿದ್ದು ಈ ಅಕ್ರಮ ಮರಳು ಸಾಗಣಿಕೆಯ ಸಂಗತಿ ಬಯಲಿಗೆ ಬಂದಿದೆ ಆಗ ಇದನ್ನುಗಂಭೀರವಾಗಿ ಪರಿಗಣಿಸದೇ ಕೇವಲ ದಂಡ ಹಾಕಿ ಚಿಟ್ಟರುವುದು ಸಲಿಯಲ್ಲ, ಬದಲಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆನೀಡಿದ್ದರೆ. ಮರಳು ಮಾಫಿಯಾದವರ ಪ್ರಭಾವ ಕಡಿಮೆಯಾಗುತ್ತಿತ್ತು ಎನ್ನುವುದು ನಮ್ಮ ಭಾವನೆಯಾಗಿದೆ.

ಆದರೆ ಈಗಾಗಲೇ ಮರಳು ಲಾರಿಯನ್ನು ಬಿಟ್ಟು ಕಳುಹಿಸಲಾಗಿದ್ದು ಅದೇ ಲಾರಿಯಲ್ಲಿ ಮತ್ತೆ ಮರಳು ಸಾಗಾಟ ಮಾಡುವುದು ಗುಟ್ಟಾಗಿ ಉಳಿದಿಲ್ಲ

ಕಾರಣ ಮಾನ್ಯರು ಈ ಬಗ್ಗೆ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕು ಹಾಗೂ ರಾತ್ರಿ ಹೊತ್ತು ಕಂದಾಯ |ಹಾಗೂ ಪೋಲಿಸ್ ಇಲಾಖೆಯ ಜಂಟಿ ಪಡೆಯೊಂದನ್ನು ರಚಿಸಿ ಕುಂದಾಪುರ ಹಾಗೂ ಹೊನ್ನಾವರ ಕಡೆಯಿಂದ ಬರುವ ಪ್ರತಿಯೊಂದು ‘ಲಾರಿ/ಟಿಪ್ಪರ್, ಗೂಡ್ಸ್ ವಾಹನಗಳನ್ನು ಪಲಶೀಲಸಿನೆ ಮಾಡಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ.ಶಿರಾಅಲಿಪೊಲಿಸ್ ಚೆಕ್ ಪೋಸ್ಟ್ ಅಥವಾ ಭಟ್ಟಳದ ಪುರವರ್ಗದಲ್ಲಿರುವ ಚೆಕ್ ಪೋಸ್ಟ್ ಎರಡೂ ಕಡೆಯಲ್ಲಯೂ ಕೂಡಾ

ರಾತ್ರಿ ಜಂಟಿ ಕಾರ್ಯಾಚರಣೆ ಮಾಡಲು ಕೂಡಾ ಕ್ರಮ ಕೈಗೊಳ್ಳಬಹುದಾಗಿದೆ.

ಈ ಕುರಿತು ಸೂಕ್ತ ಕ್ರಮ ಜರುಗಿಸಿ ಮರಳು ಮಾಫಿಯಾವನ್ನು ಹತ್ತಿಕ್ಕಬೇಕು ಎಂದು ನಮ್ಮ ವಿನಂತಿ ಇರುತ್ತದೆ.ತಾವು ಸೂಕ್ತ ಕ್ರಮ ತೆಗೆದುಕೊಂಡು ಮರಳು ಲಾರಿಗಳು ರಾತ್ರಿ ಹೊತ್ತು ಬರುವುದನ್ನು ತಡೆಯುವರೇ ಜಂಟಿ |ಕಾಯ್ರಪಡೆಯನ್ನು ತಕ್ಷಣ ರಚನೆ ಮಾಡಿ ತಡೆಹಿಡಿದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಕ್ತ ಕ್ರಮಕ್ಕೆ ತಿಳಿಸುವಿರಿ ಎಂದು ನಂಬಿರುತ್ತೆನೆ

WhatsApp
Facebook
Telegram
error: Content is protected !!
Scroll to Top