ಭಟ್ಕಳದಲ್ಲಿ ಹನಿ ಟ್ರ್ಯಾಪ್‌ : ಮೊಬೈಲ್ ಸಹಿತ ಸಾವಿರಾರು ರೂ ದರೋಡೆ

ಅಂದರ್‌ ಆದ ಇಬ್ಬರು ಆರೋಪಿಗಳು :

ಹನಿಟ್ರ್ಯಾಪ್‌ ತಂಡದಲ್ಲಿದ್ದ ಇಬ್ಬರು ಮಹಿಳೆಯರಿಗಾಗಿ ಶೋದ

ಭಟಳ ತಾಲೂಕಿನಲ್ಲಿ ವ್ಯಾಪಾರಿಯೋಬ್ಬನನ್ನು ಇಬ್ಬರು ಮಹಿಳೆಯರೊಂದಿಗೆ ಹನಿಟ್ರ್ಯಾಪ್ಗೆ ಕೆಡವಿ ಸಾವಿರಾರು ರೂ ದರೋಡೆ ಮಾಡಿದ ಘಟನೆ ನಡೆದಿದ್ದು ಇಬ್ಬರು ಆರೋಪಿಯನ್ನು ಬಂದಿಸಲಾಗಿದೆ ಹನಿಟ್ರಾಪ್ ತಂಡದಲ್ಲಿದ್ದ ಇಬ್ಬರು ಮಹಿಳಿಯರಿಗಾಗಿ ವಿವ್ರಶೋದ ನಡೆಸಲಾಗುತ್ತಿದೆ.

ತಾಲೂಕಿನ ಉಸ್ಮಾನ ನಗರದ ವ್ಯಾಪಾರಿ ಮಹಮ್ಮದ್‌ ಶಕೀಲ್‌ ಕೋಬಟೆ ವಂಚನೆಗೊಳಗಾದವರಾಗಿದ್ದು ಇಬ್ಬರು ಮಹಿಳೆಯರು ಈ ವ್ಯಾಪಾರಿಯ ಸ್ನೇಹವನ್ನು ಬೇಳೆ ಸುವ ನಾಟಕವಾಡಿ ತಮ್ಮೊಂದಿಗೆ ಕಾಲ ಕಳೆಯುವ ಆಸಕ್ತಿಯಿದ್ದಲ್ಲಿ ನಮ್ಮೊಂದಿಗೆ ಬನ್ನಿ ಎಂದು ವ್ಯಾಪಾರಿಗೆ ಆಹ್ವಾನವನ್ನು ನಿಡಿದ್ದರು ಈ ಮಹಿಳೆಯರ ಆಹ್ವಾನಕ್ಕೆ ಮಂಗನಾದ ವ್ಯಾಪಾರಿ ತನ್ನ ಅಂಗಡಿಯನ್ನು ಮುಚ್ಚಿ ತೆಂಗಿನಗುಂಡಿ ಕ್ರಾಸ್ಗೆ ತೆರಳಿದ್ದಾನೆ ನಂತರ ಆ ಮಹಿಳೆಯರೊಂದಿಗೆ ಕಾರಲ್ಲಿ ಕುಳಿತು ಮುರ್ಡೆಶ್ವರದ ಮಾರ್ಗವಾಗಿ ತೆರಳಿದ್ದಾನೆ ಈ ಸಂದರ್ಬದಲ್ಲಿ ಉತ್ತರ ಕೊಪ್ಪ ಬಳಿ ಪ್ಲಾನ್‌ ಪ್ರಕಾರ ಮೊದಲೆ ಕಾರಿನ ಡಿಕ್ಕಿಯಲ್ಲಿ ಅವಿತು ಕುಳಿತ್ತಿದ್ದ ವ್ಯೆಕ್ತಿ ವ್ಯಾಪಾರಿಯ ಕತ್ತಿಗೆ ಚೂರಿಯನ್ನಿಟ್ಟು ಬೆದರಿಸಿ ವ್ಯಾಪಾರಿಯಿಂದ ಬಲವಂತವಾಗಿ 23,850 ರೂಗಳನ್ನು ಪೊನ್‌ ಪೆ ಹಾಕಿಸಿಕೊಂಡು 49 ಸಾವಿರ ಬೆಲೆಬಾಳುವ ರೆಡ್‌ ಮಿ ನೋಟ್‌ ಮೊಬೈಲ್‌ 30 ಸಾವಿರ ರೂ ನಗದು ನಗದು ರೂ ಕಿತ್ತುಕೊಂಡಿರುತ್ತಾರೆ ನಂತರ ಹೊನ್ನಾವರ ಕಾಡಿಗೆ ಕರೆದೊಯ್ದು ವ್ಯಾಪಾರಿಯನ್ನು ಕೊಲೆ ಮಾಡುವುದಾಗಿ ಹೆದರಿಸಿ ಹೊಡೆದು ತನ್ನಿಂದ ತಪ್ಪಾಗಿದೆ ಮಹಿಳೆಯ ಮೇಲೆ ಕೈ ಮಾಡಿದ್ದೆನೆ ಎಂದು ವ್ಯಾಪಾರಿಯಿಂದ ಹೇಳಿಸಿ ಮೊಬೈಲ್‌ ಚಿತ್ರಿಕರಣ ಮಾಡಿ ತಾಲೂಕಿನ ವೆಂಕಾಟಾಪುರ ಸೆತುವೆಯ ಮೇಲೆ ರಾತ್ರಿ ಸುಮಾರು 1.30 ವೇಳೆ ಈ ವ್ಯಾಪಾರಿಯನ್ನು ಕಾರಿಂದ ಹೊರದಬ್ಬಿ ಪರಾರಿಯಾಗಿರುತ್ತಾರೆ ನಂತರ ವ್ಯಾಪಾರಿ ಮೊಹಮ್ಮದ್‌ ಶಕೀಲ್‌ ಗ್ರಾಮೀಣ ಪೋಲಿಸ್‌ ಠಾಣೆಯಲ್ಲಿ ದೂರು ನಿಡಿದ್ದು ಹನಿಟ್ರ್ಯಾಪ್‌ ಮೂಲಕ ದರೋಡೆ ಮಾಡಿದವರಲ್ಲಿ ಇಬ್ಬರು ಮಹಿಳೆಯರಾಗಿದ್ದು ಇಬ್ಬರು ಪುರುಷರಾಗಿದ್ದಾರೆ ಪುರುಷರಲ್ಲಿ ತಾಲೂಕಿನ ಪುರವರ್ಗದ ಮುರ್ತುಜಾ, ಚೌತನಿ ಮೂಲದ ರಿಜ್ವಾನ್‌ ಎಂದು ತಿಳಿದು ಬಂದಿದೆ ಈ ಬಗ್ಗೆ ದೂರನ್ನು ಸ್ವೀಕರಿಸಿದ ಗ್ರಾಮೀಣ ಠಾಣಾ ಚಂದನ ಗೋಪಾಲ ವಿ, ಅವರು ತನಿಖೆ ನಡೆಸಿದ್ದಾರೆ. 

ಪ್ರಕರಣದ ಆರೋಪಿಗಳಾಗ ಪುರವರ್ಗದ ನಿವಾಸಿಗಳಾದ ಮುರ್ತುಜಾ ಹಾಗೂ ರಿಜ್ವಾನ್ ಇಬ್ಬರನ್ನೂ ಬಂಧಿಸಲಾಗಿದ್ದು ದರೋಡೆ ಮಾಡಿದ ವಸ್ತುಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಇನ್ನಿಬ್ಬರು ಮಹಿಳೆಯರ ಕುರಿತು ಸುಳಿವು ದೊರೆತಿದ್ದು ಶೀಘ್ರದಲ್ಲಿ ಬಂಧಿಸುವ ವಿಶ್ವಾಸವಿದೆ. ಇದೆ ಎನ್ನುವುದು ಪೊಲಿಸ್‌ ಮೂಲದ ಮೂಲಕ ತಿಳಿದು ಬಂದಿದೆ

WhatsApp
Facebook
Telegram
error: Content is protected !!
Scroll to Top