ಭಟ್ಕಳದಲ್ಲಿ ಸಚಿವ ಮಂಕಾಳು ವೈದ್ಯರಿಂದ ಜನತಾ ದರ್ಶನ ಕಾರ್ಯಕ್ರಮ

ಸ್ವಯಂ ಘೋಷಿತ ಎ ಐ ಟಿ ಯು ಸಿ ತಾಲೂಕ ಅಧ್ಯಕ್ಷ ಅತಿದೂರ್ತ ನಯವಂಚಕ ಜಿ ಎನ್ ರೆವಣ್ಕರ್ ವಿರುದ್ದ ಸಚಿವರಿಗೆ ಮನವಿ

ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯರ ಭಟ್ಕಳದ ಕಛೇರಿಯಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ನಡೆಸಿ ಸಾರ್ವಜನಿಕರ ಕುಂದುಕೊರತೆ ಆಲಿಸಲಾಯಿತು .

ಕಾರ್ಯಕ್ರಮದಲ್ಲಿ ಸಚಿವರು ಜನರ ಅಹವಾಲುಗಳನ್ನು ಆಲಿಸಿದರು. ರಸ್ತೆ, ನೀರು ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳು ಮತ್ತು ಮನೆ, ಕೆಲಸಕ್ಕೆ ಸಂಬಂಧಟ್ಟ ವಯುಕ್ತಿಕ ಅರ್ಜಿಗಳನ್ನು ಹಿಡಿದು ಸಾರ್ವಜನಿಕರು ಸಚಿವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

ಈ ಸಂದರ್ಬದಲ್ಲಿ ಭಟ್ಕಳ ತಾಲೂಕಿನ 25ಕ್ಕೂ ಹೆಚ್ಚಿನ ಸಂಖ್ಯೆಯ ಪತ್ರಕರ್ತರ ಕ್ಷೇಮಾಭಿವೃದ್ದಿ‌ ಸಂಘವು ತಮ್ಮ ಸಂಘಟನೆಯ ಅಭಿವೃದ್ದಿಗೆ ಸಹಕರಿಸಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಿದರು ಮನವಿಗೆ ಸ್ಪಂದಿಸಿದ ಸಚಿವರು ತಮ್ಮ ವಯಕ್ತಿಕ ನೆಲೆಯಲ್ಲಿ ಎಲ್ಲಾ ರೀತಿಯ ಸಹಾಕಾರವನ್ನು ನಿಡುವುದಾಗಿ ಬರವಸೆಯನ್ನು ನೀಡಿದರು

ಇದೆ ಸಂದರ್ಬದಲ್ಲಿ ಭಟ್ಕಳ ತಾಲೂಕಿನಲ್ಲಿ ಕಟ್ಟಡ ಕಾರ್ಮಿಕರ ಅಭಿವೃದ್ದಿ ಮಾಡುವ ಸೋಗಿನಲ್ಲಿ ಕೆಳೆದ ಏಳು ಎಂಟು ವರ್ಷಗಳಿಂದ ಪುರಸಭೆ ಅಂಗಡಿಮಳಿಯಲ್ಲಿನ ಇನ್ನೊಬ್ಬರ ಉದ್ದಿಮೆ ಪರವಾನಿಗೆ ಬಳಸಿಕೊಂಡು ಎ ಐ ಟಿ ಯು ಸಿ ಕಛೇರಿ ಇದೆ ಎಂದು ಅಧಿಕಾರಿಗಳಿಗೆ ಮತ್ತು ಮಾಧ್ಯಮಕ್ಕೆ ತಪ್ಪು ಮಾಹಿತಿಯನ್ನು ನಿಡಿದ್ದಲ್ಲದೆ ಕಟ್ಟಡ ಕಾರ್ಮಿಕರಿಗೆ ತನ್ನ ಕಛೇರಿ ಸರಕಾರಿ ಕಛೇರಿ ಎಂದು ಭ್ರಮೇ ಹುಟ್ಟಿಸಿ ಬಡ ಕಟ್ಟಡ ಕಾರ್ಮಿಕರನ್ನು ಹಗಲು ದರೋಡೆ ಮಾಡುತ್ತಿದ್ದ ಅತಿ ದೂರ್ತ ವ್ಯಕ್ತಿ ಜಿ ಎನ್ ರೆವಣ್ಕರ್ ವಿರುದ್ದ ಕರಾವಳಿ ಸಮಾಚಾರದ ಪ್ರಧಾನ ಸಂಪಾದರು ಮನವಿಯನ್ನು ನೀಡಿ ಭಟ್ಕಳದಲ್ಲಿ ಈತ ಕಾರ್ಮಿಕರನ್ನು ಯಾವ ರೀತಿಯಲ್ಲಿ ತಿಗಣೆಗೂ ಮೀರಿ ಬಡ ಕಾರ್ಮಿಕರ ರಕ್ತ ಹಿರುತ್ತಾನೆ ಎನ್ನುವುದರ ಬಗ್ಗೆ ಸಚಿವರಿಗೆ ವಿವರಿಸಿದರು ಈ ಬಗ್ಗೆ ಸಚಿವರು ದಾಖಲೆ ಪರಿಶಿಲಿಸಿ ಕ್ರಮ ಕೈಗೊಳ್ಳುವ ಬರವಸೆಯನ್ನು ನೀಡಿದರು.

ಭಟ್ಕಳ ತಾಲೂಕಿನ ವಕೀಲರ ನಿಯೋಗವು ಸಚಿವರನ್ನು ಬೇಟಿಯಾಗಿ ಚಿಕ್ಕಮಂಗಳೂರಿನಲ್ಲಿ ಯುವ ವಕಿಲರೊಬ್ಬರ ಮೇಲೆ ನಡೆದ ಪೋಲಿಸ್ ದೌರ್ಜನ್ಯದ ಬಗ್ಗೆ ವಿವರಿಸಿ ವಕೀಲರ ರಕ್ಷಣೆಗಾಗಿ ಕಾನೂನು ರೂಪುಗೊಳಿಸುದಕ್ಕೆ ಸರಕಾರ ಮಟ್ಟದಲ್ಲಿ ಒತ್ತಡ ಹಾಕಬೇಕು ಎಂದು ಸಚಿವ ಮಂಕಾಳು ವೈದ್ಯರಲ್ಲಿ ಮನವಿ ಮಾಡಿದರು

ಹೀಗೆ ಸಚಿವರ ಜನತಾ ದರ್ಶನದ ಕಾರ್ಯಕ್ರಮದಲ್ಲಿ ಸಾವಿರಾರು ಸಾರ್ವಜನಿಕರು ತಮ್ಮ ಅವಹಾಲನ್ನು ಸಚಿವರ ಮುಂದಿಟ್ಟು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡರು

WhatsApp
Facebook
Telegram
error: Content is protected !!
Scroll to Top