ಇವನಾರವ ಇವನಾರವ ಎಂದೆನಿಸದಿರಯ್ಯ ಇವನಮ್ಮವ ಇವನಮ್ಮವ ಎಂದೆನಿಸಯ್ಯ : ಸಚಿವ ಮಂಕಾಳು ವೈದ್ಯ

ಭಟ್ಕಳ ತಾಲೂಕ ಸಾರದಹೊಳೆ ನಾಮಧಾರಿ ಸಭಾಭವನದಲ್ಲಿ, ಶ್ರೀ ಕ್ಷೇತ್ರ ಹಳೆಕೋಟೆ ಹನುಮಂತ ದೇವಸ್ಥಾನ ಹಾಗೂ ನಾಮಧಾರಿ ಸಮಾಜ ಅಭಿವೃದ್ಧಿ ಸಂಘ ಮಾವಳ್ಳಿ ಹೊಬಳಿ ಸಾರದಹೊಳೆ ವತಿಯಿಂದ ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಮಂಕಾಳ ಎಸ್ ವೈದ್ಯ ರವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು

ಕಾರ್ಯಕ್ರಮದಲ್ಲಿ ಸಚಿವರನ್ನು ಮೈಸೂರು ಪೇಟಾ ತೊಡಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವಿಕರಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು.
ತನ್ನನ್ನು‌ ನಾಮಧಾರಿ ಸಮಾಜ ಯಾವ ಸಮಯದಲ್ಲೂ ಬೇರೆ ಸಮಾಜದವನೂ ಎಂದು ನೋಡಲಿಲ್ಲ ಆ ಕಾರಣಕ್ಕಾಗಿಯೇ 34 ಸಚಿವರಲ್ಲಿ ನಾನೂ ಒಬ್ಬನಾಗಲೂ ಸಾಧ್ಯವಾಯಿತು.
ನಿಮ್ಮ ಋಣ ತೀರಿಸಲೂ ಎಂದಿಗೂ ನನ್ನಿಂದ ಸಾಧ್ಯವಿಲ್ಲ. ನಾನೂ ಎಂದಿಗೂ ಹಣ ಮಾಡಿ ಇಡಲ್ಲ. ದೇವಸ್ಥಾನಕ್ಕಾಗಿ, ಶಿಕ್ಷಣಕ್ಕಾಗಿ, ಅಸಾಹಾಯಕರಿಗೆ ಸಹಾಯ ಮಾಡುತ್ತೇನೆ. ನಾಮಧಾರಿ ಗುರುಗಳಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳ ಅಂದೆ ನೀನು‌ ಮಂತ್ರಿ ಆಗುತ್ತಿಯಾ ಮಗಾ ಎಂದು ಆಶಿರ್ವಾದ ಮಾಡಿದ್ದರು. ಎಂದು ಹೇಳಿದರು.
ಹಾಗೇ ಅರಣ್ಯ ಅತಿಕ್ರಮಣದಾರರಿಗೂ ಮುಂದಿನ 5 ವರ್ಷದ ಒಳಗೆ ಹಕ್ಕುಪತ್ರ ನೀಡುವ ಭರವಸೆ ನೀಡಿದ್ದರು.

ಈ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರಿಗೆ ಚಂಡೆ ವಾದ್ಯದ ಮೂಲಕ ಭವ್ಯ ಸ್ವಾಗತವನ್ನು‌ ಕೊರಲಾಗಿದ್ದು. ಆ ನಂತರ ಸಚಿವರು ಶ್ರೀ ಹಳೇಕೋಟೆ ಹನುಮಂತ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪ ಅಂತರದ ಮತಗಳಿಂದ ಪರಾಜಿತರಾದ ಶ್ರೀ ಸೂರಜ್ ನಾಯ್ಕ ಸೋನಿ ಕೂಡ ಹಾಜರಿದ್ದು, ತಾನೂ ಸೋತಾಗ ತನಗೆ ಕರೆ ಮಾಡಿದ ಒಬ್ಬರೇ ಒಬ್ಬ ರಾಜಕಾರಣಿಯೆಂದರೆ ಅದು ಮಂಕಾಳ ವೈದ್ಯರು ಅಷ್ಟರ ಮಟ್ಟಿಗೆ ಅವರು ಸೋತವ ಪರವೂ ಇರುತ್ತಾರೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಇತ್ತಿಚೆಗೆ ಜಪಾನ್ ನಲ್ಲಿ ನಡೆದ ಪ್ಯಾರ ಬ್ಯಾಂಡಿಂಟನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶ್ರೀ ಮಂಜುನಾಥ ನಾಯ್ಕ, ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಧ್ಯಾರ್ಥಿಗಳಾದ ವಿಜಯ್ ಈಶ್ವರ್ ನಾಯ್ಕ ಹಾಗೂ ದನುಸ್ ನಾಯ್ಕ ಇವರಿಗೆ ಸಚಿವರಿಂದ ಸನ್ಮಾನ ಮಾಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸುಬ್ರಾಯ ನಾಯ್ಕ, ಜಿ.ಜೆ ನಾಯ್ಕ, ಕೃಷ್ಣ ನಾಯ್ಕ, ಅರುಣ್ ನಾಯ್ಕ ಮತ್ತಿತರರು ಹಾಜರಿದ್ದರು.

WhatsApp
Facebook
Telegram
error: Content is protected !!
Scroll to Top