ಎಲ್ಲರು ಕೋಮು ಸೌಹಾರ್ದತೆಯಿಂದ ಬದುಕ ಬೇಕು :ಅಬ್ದುಲ್ ಅಜಿಮ್
ಭಟ್ಕಳ: ನಾವೆಲ್ಲರು ಒಂದಾಗಿ ಸೌಹಾರ್ದತೆಯಿಂದ ಬದುಕಬೇಕು ಯಾವುದೇ ಕೋಮು ಸಂಘರ್ಷಕ್ಕೆ ಅವಕಾಶ ನೀಡಬಾರದು ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್ ಹೇಳಿದರು
ಅವರು ಕಾರವಾರದಲ್ಲಿ ನಡೆಯಲಿರುವ 15 ಅಂಶಗಳ ಕಾರ್ಯಕ್ರಮಕ್ಕಾಗಿ ಜಿಲ್ಲೆಗೆ ಆಗಮಿಸಿದ ಸಂದರ್ಬದಲ್ಲಿ ಭಟ್ಕಳಕ್ಕೆ ಬೇಟಿ ಕೊಟ್ಟು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡುತ್ತ ನಾವು ಅಲ್ಪಸಂಖ್ಯಾತರಿಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು ಅದನ್ನು ಅನುಷ್ಟಾನಗೊಳಿಸಲಿದ್ದೆವೆ ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಅಂಶಗಳ ಕಾರ್ಯಕ್ರಮದ ನಿಮಿತ್ತ ಸಭೆಯನ್ನು ಹಮ್ಮಿಕೊಳ್ಳುತ್ರಿದ್ದೆವೆ ನಾವು ಬ್ರಾತತ್ವ ಸಹೋದರತ್ವದಲ್ಲಿ ಬದುಕಬೇಕು ಯಾವುದೇ ಕೋಮು ಸಂಘರ್ಷಕ್ಕೆ ದಾರಿಯಾಗದಂತೆ ಒಗ್ಗಟ್ಟಿನಿಂದ ಬದುಕೊಣ ಎಂದು ಕರೆ ಕೊಟ್ಟರು
ಈ ಸಂದರ್ಬದಲ್ಲಿ ತಂಜಿಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ , ಒಳಗೊಂಡಂತೆ ಇತರ ಮುಸ್ಲಿಂ ಮುಖಂಡರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು