ಪತ್ರಕರ್ತ ವಿಷ್ಣು ದೇವಾಡಿಗರನ್ನೊಳಗೊಂಡಂತೆ ಜಿಲ್ಲೆಯ ಹಲವಾರು ಪತ್ರಕರ್ತರಿಗೆ ಸನ್ಮಾನ

ಭಟ್ಕಳ: ಕ್ಷತ್ರಿಯ ಮರಾಠ ಸಮುದಾಯದ ಕ್ಷತ್ರಿಯ ಮರಾಠ ಮಹಾಒಕ್ಕೂಟದಿಂದ ೫೦ನೇ ವರ್ಷದ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ಹಾಗೂ ೫೦ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮಾಧ್ಯಮ, ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಮುದ್ರಣ ಮಾಧ್ಯಮದವರಿಗೆ ಕನ್ನಡ ಭೂಷಣ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು

ನವೆಂಬರ್ ೨೬ ರಂದು ಬನವಾಸಿಯಲ್ಲಿ ಬೆಂಗಳೂರಿನ ಭವಾನಿ ಪೀಠದ ಪೀಠಾಧಿಶ್ವರ ಶ್ರೀ ಮಂಜುನಾಥ ಸ್ವಾಮಿಜಿ ಹಾಗೂ ಮುಂಡಗೋಡ ತಾಲೂಕಿನ ಸಾಲಗಾಂವ ಶ್ರೀ ಸದ್ಗುರು ಗೌರಮ್ಮೊಜಿ ಆಧ್ಯಾತ್ಮ ಮಂದಿರದ ವಿರುಪಾಕ್ಷೇಶ್ವರ ಮಹಾರಾಜರ ಸಾನಿಧ್ಯದಲ್ಲಿ ಶಾಸಕ ಹಾಗೂ ಮಾಜಿ ಸಚಿವ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ರಾಜ್ಯಧ್ಯಕ್ಷ ಶ್ಯಾಮಸುಂದರ ಗಾಯಕವಾಡ ನೇತೃತ್ವದಲ್ಲಿ ಭಟ್ಕಳದ ವಿಜಯ ಕರ್ನಾಟಕ ವರದಿಗಾರ ವಿಷ್ಣು ದೇವಾಡಿಗ ಹೊನ್ನಾವರದ “ನಾಗರಿಕ’’ ಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ ಕಾರವಾರದ ಕರಾವಳಿ ಮುಂಜಾವು, ವರದಿಗಾರರ ಪ್ರಶಾಂತ ಮಹಾಲೆ ಶಿರಸಿಯ ಕನ್ನಡ ಜನಾಂತರ ಪತ್ರಿಕೆ ವರದಿಗಾರ ಪ್ರದೀಪ ಶೆಟ್ಟಿ ಸಿದ್ದಾಪುರದ ಸಂಯುಕ್ತ ಕರ್ನಾಟಕ ವರದಿಗಾರ ಕೆಕ್ಕಾರ ನಾಗರಾಜ ಭಟ್ಟ ಬೆಂಗಳೂರಿನ “ಮರಾಠಧ್ವನಿ’’ ಕನ್ನಡ ಮಾಸಪತ್ರಿಕೆ ವರದಿಗಾರ ಹಾಗೂ ಸಂತರ ಧ್ವನಿ ಪತ್ರಿಕೆ ಸಂಪಾದಕ ಪಾಂಡುರAಗ ಪಾಟೀಲ್ ಯಲ್ಲಾಪುರದ “ಲೋಕಧ್ವನಿ’’ ವರದಿಗಾರ ಆನಗೋಡಿನ ಕೆ.ಎಸ್. ಭಟ್ಟ, ಹಾಗೂ ಉತ್ತರ ಕನ್ನಡ ಜಿಲ್ಲಾ ಕಾರ್ಯಕರ್ತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಹಾಗೂ “ಶಿರಸಿ ಸಮಾಚಾರ’’ ಪತ್ರಿಕೆ ಸಂಪಾದಕ ಸುಬ್ರಾಯ ಭಟ್ಟ ಬಕ್ಕಳ ಇವರುಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಭಾಗವಹಿಸಿದ ಸಹಸ್ರಾರೂ ಸಂಖ್ಯೆಯ ಕ್ಷತ್ರೀಯ ಮರಾಠ ಸಮುದಾಯದವರ ಹಾಗೂ ಕನ್ನಡಿಗರು ಸಮ್ಮುಖದಲ್ಲಿ ಸನ್ಮಾನಿಸಿದರು. ಇವರು ಇನ್ನೂ ಹೆಚ್ಚಿನ ರೀತಿಯಿಂದ ಮುದ್ರಣ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.

ಮುಖ್ಯವಾಗಿ ಭಟ್ಕಳ ತಾಲೂಕಿನ ಪತ್ರಕರ್ತ ವಿಷ್ಣು ದೇವಾಡಿಗ ಇವರ ಬಗ್ಗೆ ಹೆಳಬೇಕು ಇವರು ತಾಲೂಕಿನಲ್ಲಿ ಹಿರಿಯ ಪತ್ರಕರ್ತರಾಗಿದ್ದು ಅನೇಕ ಅವ್ಯವಹಾರ ಸಮಸ್ಯೆಗಳು ಸಮಾಜದಲ್ಲಿ ಶೋಷಣೆಗೆ ಒಳಗಾದ ವರ್ಗದಪರವಾಗಿ ದ್ವನಿ ಎತ್ತುವ ಪತ್ರಕರ್ತರ ಸಾಲಿನಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ ಇವರಿಗೆ ದೊರೆತ ಗೌರವ ಪತ್ರಕರ್ತ ಸಮುದಾಯಕ್ಕೆ ದೊರೆತ ಗೌರವ ಎಂದು ಹೇಳಬಹುದು

WhatsApp
Facebook
Telegram
error: Content is protected !!
Scroll to Top